ನವದೆಹಲಿ:ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಎಫ್​ಇಎಂಇ) ಉಲ್ಲಂಘನೆ ಆರೋಪದ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಕಾರ್ಪೊರೇಷನ್​ (ಬಿಬಿಸಿ) ವಿರುದ್ಧ ಪ್ರಕರಣ ದಾಖಲಿಸಿದೆ.
ಬಿಬಿಸಿಯ ಇಬ್ಬರು ಹಿರಿಯ ಅಧಿಕಾರಿಗಳನ್ನು ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಈ ಹಿಂದೆ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಇಡಿ, ಬಿಬಿಸಿ ಚಾನೆಲ್ ವಿರುದ್ಧ ಪ್ರಕರಣ ದಾಖಲಿಸಿದೆ.
ಐಟಿ ದಾಳಿಗುಜರಾತ್​ ಗಲಭೆ ಕುರಿತ ಸಾಕ್ಷ್ಯಾಚಿತ್ರ ಬಿಡುಗಡೆ ಮಾಡಿ ಭಾರತದಲ್ಲಿ ವಿವಾದದ ಅಲೆ ಎಬ್ಬಿಸಿದ್ದ ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಸರ್ವೀಸ್​ (ಬಿಬಿಸಿ)ನ ದೆಹಲಿ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಫೆ.14ರಂದು ದಾಳಿ ನಡೆಸಿತ್ತು. ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಬಿಬಿಸಿ ಕಚೇರಿಗಳಲ್ಲಿ ಶೋಧ ನಡೆಸಿತ್ತು.
ಇದನ್ನೂ ಓದಿ:ಸಹಾಯದ ನೆಪದಲ್ಲಿ ಗರ್ಭಿಣಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ 10 ಲಕ್ಷ ರೂ. ವಂಚನೆ: ಯುವಕ ಅರೆಸ್ಟ್​
ಬಿಬಿಸಿ ವಿವಾದ ಏನು?ಬಿಬಿಸಿ ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಕುರಿತಾದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತು. ಆ ಸಾಕ್ಷ್ಯಚಿತ್ರದ ಪ್ರಮುಖ ವಿಷಯ ಏನೆಂದರೆ 2002ರಲ್ಲಿ ನಡೆದ ಗುಜರಾತ್ ಗಲಭೆ ಅಥವಾ ಗೋದ್ರಾ ಹತ್ಯಾಕಾಂಡ. ಅಂದು ನಡೆದ ಘಟನೆಯ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಮಾಡಿದೆ. ಅಷ್ಟಕ್ಕೂ ಈ ಸಾಕ್ಷ್ಯಚಿತ್ರದಲ್ಲಿ ಏನಿದೆ ಎಂದು ನೋಡಿದಾಗ ಸ್ಪಷ್ಟವಾಗಿ ಗೊತ್ತಾಗುತ್ತೆ, ಇದೊಂದು ಷಡ್ಯಂತ್ರ ಎಂಬುದು.
2002ರಲ್ಲಿ ಗೋದ್ರಾ ಘಟನೆ ನಡೆಯುತ್ತದೆ. 2012ರಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರಿಗೆ ಕ್ಲೀನ್​ಚಿಟ್​​​ ಕೊಡುತ್ತದೆ. 2022ರಲ್ಲಿ ಸುಪ್ರೀಂಕೋರ್ಟ್, ಎಸ್ಐಟಿಯ ತೀರ್ಪನ್ನು ಎತ್ತಿ ಹಿಡಿಯುತ್ತದೆ. ಇದೆಲ್ಲ ಆದಮೇಲೆ 2023ರಲ್ಲಿ ಬಿಬಿಸಿ ಅವರು “ದಿ ಮೋದಿ ಕ್ವೆಶ್ವನ್” ಅನ್ನೋ ಒಂದು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡುತ್ತದೆ. ಇಷ್ಟೆಲ್ಲ ವರ್ಷ ಸುಮ್ಮನಿದ್ದು, ಈಗ ವರದಿಯನ್ನು ಇಟ್ಟುಕೊಂಡು ಸಾಕ್ಷ್ಯಚಿತ್ರ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.(ಏಜೆನ್ಸೀಸ್​)
Breaking News| ಗುಜರಾತ್​ ಗಲಭೆ ಸಾಕ್ಷ್ಯಚಿತ್ರ ವಿವಾದ: ದೆಹಲಿಯ ಬಿಬಿಸಿ ಕಚೇರಿ ಮೇಲೆ ಐಟಿ ದಾಳಿ

ಫ್ಯಾನ್ಸಿ ನಂಬರ್ 1111​ಗಾಗಿ 5 ಲಕ್ಷ ರೂ. ವ್ಯಯಿಸಿದ ನಟ!

ನ್ಯಾಯಾಂಗದ ಕುರಿತು ಟೀಕೆ; ಲಲಿತ್​ ಮೋದಿಗೆ ಸುಪ್ರೀಂ ಕೋರ್ಟ್​ ಛೀಮಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 2 =
Remember me
