ಮುಂಬೈ:ಮಲಯಾಳಂ ನಟಿ ನವ್ಯಾ ನಾಯರ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ವಿಚಾರಣೆಯ ಬಿಸಿ ತಟ್ಟಿದೆ. ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನ ಮಾಡಿಕೊಂಡ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾದ ಐಆರ್​ಎಸ್​ ಅಧಿಕಾರಿ ಸಚಿನ್​ ಸಾವಂತ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನವ್ಯಾ ನಾಯರ್​ ಅವರನ್ನು ವಿಚಾರಣೆ ಮಾಡಲಾಗಿದೆ.
ಸಚಿನ್​ ಸಾವಂತ್​ ಮತ್ತು ನವ್ಯಾ ನಾಯರ್​ ನಡುವೆ ನಿಕಟ ಸಂಪರ್ಕವಿದ್ದು, ದುಬಾರಿ ಚಿನ್ನಾಭರಣವನ್ನು ನವ್ಯಾ ಅವರು ಸಚಿನ್​ರಿಂದ ಉಡುಗೊರೆಯಾಗಿ ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಇಡಿ ಅಧಿಕಾರಿಗಳು ಸಚಿನ್ ಸಾವಂತ್ ಮತ್ತು ನವ್ಯಾ ಇಬ್ಬರ ಫೋನ್ ವಿವರಗಳನ್ನು ಪರಿಶೀಲಿಸಿದ್ದಾರೆ. ನಟಿಯನ್ನು ಭೇಟಿಯಾಗಲು ಸಚಿನ್​ ಅವರು 8 ರಿಂದ 10 ಬಾರಿ ಕೊಚ್ಚಿಗೆ ಹೋಗಿದ್ದರು ಎಂದು ವರದಿಯಾಗಿದೆ. ಆದರೆ, ನಾವಿಬ್ಬರು ಸ್ನೇಹಿತರು ಮಾತ್ರ, ನಮ್ಮ ನಡುವೆ ಬೇರೆ ಸಂಬಂಧ ಏನೂ ಇಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಹಬ್ಬಕ್ಕೆಂದು ಮನೆಗೆ ಬಂದಿದ್ದ ಮೂವರು ಸಹೋದರಿಯರು ತಂದೆಯ ಕಣ್ಣ ಮುಂದೆಯೇ ದುರಂತ ಸಾವು
ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ನವ್ಯಾ ನಾಯರ್​ ಬಗ್ಗೆ ಮಾಹಿತಿ ನಮೂದಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿನ್ ಸಾವಂತ್ ಅವರನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜೂನ್ 27ರಂದು ಲಕ್ನೋದಲ್ಲಿ ಸಚಿನ್​ರನ್ನು ಇಡಿ ಬಂಧಿಸಿತು.
ನಟಿ ನವ್ಯಾ ನಾಯರ್​ ಅವರು ದರ್ಶನ್​ ಅಭಿನಯದ ಗಜ, ಬಾಸ್​ ಹಾಗೂ ರವಿಚಂದ್ರನ್​ ಅಭಿನಯದ ದೃಶ್ಯ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸದ್ಯ ಮಲಯಾಳಂ ಸಿನಿ ರಂಗದಲ್ಲಿ ಬಿಜಿಯಾಗಿದ್ದು, ಇದರ ನಡುವೆ ನವ್ಯಾಗೆ ಇಡಿ ಬಿಸಿ ಮುಟ್ಟಿಸಿದೆ.(ಏಜೆನ್ಸೀಸ್​)
10 ಮಹಿಳೆಯರ ಜತೆ ದೈಹಿಕ ಸಂಬಂಧ ಹೊಂದಿದ್ದೇನೆ: ನಟನ ಹೇಳಿಕೆ ಖಂಡಿಸದೇ ಕೆಂಗಣ್ಣಿಗೆ ಗುರಿಯಾದ ನವ್ಯಾ!

ನವ್ಯಾ ನಾಯರ್​ ಮುಂದೆಯೇ 10 ಮಹಿಳೆಯರ ಜತೆ ಮಲಗಿದ್ದೆ ಎಂದಿದ್ದ ಖ್ಯಾತ ನಟನ​ ದಾಂಪತ್ಯದಲ್ಲಿ ಬಿರುಗಾಳಿ!

ಗಂಡನನ್ನು ಬಿಟ್ಟು ಹಣದ ಹಿಂದೆ ಬಿದ್ದವಳ ಬಗ್ಗೆ ಏನು ಹೇಳಲಿ ಎಂದ ನೆಟ್ಟಿಗನಿಗೆ ನವ್ಯಾ ಕೊಟ್ಟ ತಿರುಗೇಟು ಹೀಗಿತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 4 =
Remember me
