ಹೈದರಾಬಾದ್:ದೆಹಲಿಯ ಅಬಕಾರಿ ನೀತಿ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಂದು (ಮಾರ್ಚ್​ 15) ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಜಾರಾ ಹಿಲ್ಸ್‌ನಲ್ಲಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂಎಲ್‌ಸಿ ಕೆ.ಕವಿತಾ ಅವರ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಪಾಕ್‌ ಆಟಗಾರರು ಐಪಿಎಲ್‌ ಆಡ್ಬೇಕಂತೆ…! ಸಖತ್ ಟಾಂಗ್​ ಕೊಟ್ಟ ಹರ್ಭಜನ್‌ ಸಿಂಗ್‌
ವರದಿಗಳ ಪ್ರಕಾರ, ಶೋಧಗಳು ಚುರುಕಾಗಿ ಸಾಗುತ್ತಿದ್ದು, ದಾಳಿಯ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಕವಿತಾ ಮತ್ತು ಅವರ ಸಹಚರರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನಗರದ ಇತರ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ ಎಂದು ವರದಿಯಾಗಿದೆ.
Sleuths of the Enforcement Directorate (ED) on Friday, March 15, raided the residence of Bharat Rashtra Samithi (BRS) MLC K Kavitha in Banjara Hills as part of the probe into the Delhi excise policy scam case.#Hyderabadpic.twitter.com/4PeEYVw8Gf
— The Siasat Daily (@TheSiasatDaily)March 15, 2024

ದೆಹಲಿ ಅಬಕಾರಿ ನೀತಿ ಅಕ್ರಮಗಳ ವಿಷಯಕ್ಕೆ ಸಂಬಂಧಿಸಿದಂತೆ ಇಡಿ ಸಮನ್ಸ್ ವಿರುದ್ಧ ಕೆ.ಕವಿತಾ ಅವರು ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸದ್ಯ ಸುಪ್ರೀಂಕೋರ್ಟ್ ಶುಕ್ರವಾರ ಮಾರ್ಚ್ 19ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಸಿಬಿಐನಿಂದ ಸಮನ್ಸ್ ಪಡೆದಿರುವ ಕವಿತಾ ಮುಂಬರುವ ಸಂಸತ್ತಿನ ಚುನಾವಣೆಯ ಕಾರಣ ನೋಟಿಸ್ ಅನ್ನು ಮುಂದೂಡುವಂತೆ ಸಂಸ್ಥೆಗೆ ಮನವಿ ಮಾಡಿದ್ದರು.
ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಾಗಿದೆ ಕರೆಕ್ಷನ್​: ಈ ಲಾರ್ಜ್​ ಕ್ಯಾಪ್​ ಖರೀದಿಸಲು 28 ಮಾರುಕಟ್ಟೆ ತಜ್ಞರ ಸಲಹೆ
ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಹಣ ವರ್ಗಾವಣೆ ಪ್ರಕರಣದಲ್ಲಿ ಫೆಬ್ರವರಿ 28ರಂದು ಸುಪ್ರೀಂಕೋರ್ಟ್ ಕವಿತಾಗೆ ನೀಡಲಾದ ರಕ್ಷಣೆಯನ್ನು ಮಾರ್ಚ್ 13ರವರೆಗೆ ವಿಸ್ತರಿಸಿತು. ಹಿಂದಿನ ಸಮನ್ಸ್ ಸಮಯದಲ್ಲಿ, ಕವಿತಾ ಹಿಂದಿನ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿಬಾಬು ಗೋರಂಟ್ಲಾ ಮತ್ತು ಅರುಣ್ ರಾಮಚಂದ್ರ ಪಿಳ್ಳೈ ಅವರ ಹೇಳಿಕೆಗಳನ್ನು ಆಲಿಸಿತ್ತು.
Why ED Raid on@RaoKavithajust 24 hours before Election Code ❓
To fight Election against KCR garu,BJP needs ED ….
— Krishank (@Krishank_BRS)March 15, 2024

ಇಡಿ ದಾಳಿಯ ಸಮಯವನ್ನು ಬಿಆರ್​​ಎಸ್​ ಪ್ರಶ್ನಿಸಿದೆ:ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸುವ ಒಂದು ದಿನ ಮುಂಚಿತವಾಗಿ ಬಿಆರ್‌ಎಸ್ ಎಂಎಲ್‌ಸಿ ನಿವಾಸದ ಮೇಲೆ ದಾಳಿ ನಡೆಸಿರುವ ಸಮಯವನ್ನು ಬಿಆರ್‌ಎಸ್ ನಾಯಕ ಕ್ರಿಶಾಂಕ್ ಪ್ರಶ್ನಿಸಿದ್ದಾರೆ. “ಚುನಾವಣೆ ಸಂಹಿತೆಗೆ ಕೇವಲ 24 ಗಂಟೆಗಳ ಮೊದಲು ಕವಿತಾ ಮೇಲೆ ಇಡಿ ರೈಡ್ ಮಾಡಿದ್ದೇಕೆ?” ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ,(ಏಜೆನ್ಸೀಸ್).
ಬಿಸಿಯೂಟ ತುಂಬ ಅಗತ್ಯ, ದಯವಿಟ್ಟು ಅರ್ಧದಿನ ರಜೆ ಕೊಡ್ಬೇಡಿ: ಮನಕಲಕುವಂತಿದೆ ಈ ವಿದ್ಯಾರ್ಥಿ ಬರೆದ ಪತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
