ಜೈಪುರ:ದೇಶದ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆಯಾದ ಜಲ ಜೀವನ್ ಮಿಷನ್‌ನಲ್ಲಿ ವಂಚನೆ ನಡೆದಿದೆ ಎಂದು ವರದಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜೈಪುರ ಮತ್ತು ಅಲ್ವಾರ್‌ನ ಹಲವು ಸ್ಥಳಗಳಲ್ಲಿ ಶುಕ್ರವಾರ ದಾಳಿ ನಡೆಸಿದ್ದಾರೆ. ಮನಿ ಲಾಂಡರಿಂಗ್ ತನಿಖೆಯಡಿ ಈ ದಾಳಿ ನಡೆಸಲಾಗಿದೆ.
ಹಲವು ನಗರಗಳಲ್ಲಿ ದಾಳಿಅಲ್ವಾರ್ ಮತ್ತು ರಾಜಧಾನಿ ಜೈಪುರ ಸೇರಿದಂತೆ ಇತರ ಕೆಲವು ನಗರಗಳಲ್ಲಿ ಇಂಜಿನಿಯರ್‌ಗಳು, ಗುತ್ತಿಗೆದಾರರು ಮತ್ತು ಕೆಲವು ಮಾಜಿ ಅಧಿಕಾರಿಗಳ ಹಲವಾರು ಸ್ಥಳಗಳನ್ನು ಶೋಧಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಡಾಕ್ಯುಮೆಂಟ್‌ಗಳು ಮತ್ತು ಗ್ಯಾಜೆಟ್‌ಗಳು ವಶಕ್ಕೆಪಿಟಿಐ ಪ್ರಕಾರ, ಮನಿ ಲಾಂಡರಿಂಗ್ ತಡೆ ಕಾಯ್ದೆ ಅಥವಾ ದಿ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಶೋಧಗಳನ್ನು ನಡೆಸಲಾಗುತ್ತಿದೆ. ಇಡಿ ಇಲ್ಲಿಯವರೆಗೆ ಕೆಲವು ದಾಖಲೆಗಳು ಮತ್ತು ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದೆ.
ಕಿರೋಡಿ ಲಾಲ್ ಮೀನಾ ಆರೋಪಪೊಲೀಸರ ಎಫ್‌ಐಆರ್ ನಂತರ ಈ ಅಕ್ರಮ ಹಣ ವರ್ಗಾವಣೆ ಪ್ರಕರಣ ಮುನ್ನೆಲೆಗೆ ಬಂದಿದೆ ಎಂದ ಬಿಜೆಪಿಯ ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ಅವರು ಜೂನ್‌ನಲ್ಲಿ ರಾಜಸ್ಥಾನದಲ್ಲಿ ‘ಜಲ್ ಜೀವನ್ ಮಿಷನ್’ನ 20,000 ಕೋಟಿ ರೂ.ಗಳ ಹಗರಣದ ಬಗ್ಗೆ ಆರೋಪಿಸಿದ್ದರು. 48 ಯೋಜನೆಗಳಲ್ಲಿ ನಕಲಿ ಪ್ರಮಾಣಪತ್ರದ ಆಧಾರದ ಮೇಲೆ ಎರಡು ಸಂಸ್ಥೆಗಳಿಗೆ 900 ಕೋಟಿ ರೂ.ಗಳ ಟೆಂಡರ್ ನೀಡಲಾಗಿದೆ. ಕೇಂದ್ರದ ಜಲ ಜೀವನ್ ಮಿಷನ್ ಅಡಿಯಲ್ಲಿ ಪಿಎಚ್‌ಇಡಿ ಸಚಿವರು ಮತ್ತು ಇಲಾಖೆ ಕಾರ್ಯದರ್ಶಿ ಒಟ್ಟಾಗಿ 20 ಸಾವಿರ ಕೋಟಿ ರೂ.ಗಳ ಹಗರಣ ಮಾಡಿದ್ದಾರೆ ಎಂದು ಮೀನಾ ಆರೋಪಿಸಿದ್ದರು.
ಜಲ ಜೀವನ್ ಮಿಷನ್‌ನ ಉದ್ದೇಶವೇನು?ಮನೆಯ ಟ್ಯಾಪ್ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸುವುದು ‘ಜಲ್ ಜೀವನ್ ಮಿಷನ್’ ಉದ್ದೇಶವಾಗಿದೆ. ಇದನ್ನು ರಾಜ್ಯ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ (PHED) ಅನುಷ್ಠಾನಗೊಳಿಸುತ್ತಿದೆ.
ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದ್ದೇಕೆ? ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + nine =
Remember me
