ನವದೆಹಲಿ:ಪಂಜಾಬ್​ ಶಾಸಕ ಸುಖ್​ಪಾಲ್​ ಸಿಂಗ್ ಖೈರಾ ಮತ್ತಿತರರ ಮನೆಗೆ ಎನ್​ಫೋರ್ಸ್​ಮೆಂಟ್​ ಡೈರೆಕ್ಟರೇಟ್(ಇಡಿ) ಅಧಿಕಾರಿಗಳು ಇಂದು ಧಾಳಿ ನಡೆಸಿದ್ದಾರೆ. ಡ್ರಗ್ಸ್​ ಸಾಗಣೆ ಮತ್ತು ನಕಲಿ ಪಾಸ್​ಪೋರ್ಟ್​ ತಯಾರಿಸಿದ್ದಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಕಾಯ್ದೆಯಡಿ ಈ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಪಂಜಾಬಿನ ಕಪುರ್ತಲಾ ಜಿಲ್ಲೆಯ ಭೋಲತ್​ ಕ್ಷೇತ್ರದ ಎಂಎಲ್​ಎ ಆದ ಖೈರಾರ ಚಂಡೀಗಢದ ನಿವಾಸದಲ್ಲಿ ಇಡಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇದರೊಂದಿಗೆ ಹರಿಯಾಣ ಮತ್ತು ಪಂಜಾಬಿನ ಐದು ಇತರ ಸ್ಥಳಗಳಲ್ಲಿ, ಮತ್ತು ದೆಹಲಿಯ ಎರಡು ಸ್ಥಳಗಳಲ್ಲಿ ತಪಾಸಣೆ ನಡೆಯುತ್ತಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಕೆಲವು ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆಯನ್ನು ಮುಂದುವರಿಸುವ ದೃಷ್ಟಿಯಿಂದ ಇಡಿ ಈ ತಪಾಸಣೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಡಿಸಿ ಮನೆ ಫೋನ್‌ಬಿಲ್ ಕೊಲ್ಲೂರು ದೇವಳದಿಂದ ಪಾವತಿ!
56 ವರ್ಷ ವಯಸ್ಸಿನ ಖೈರಾ, 2017 ರಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಟಿಕೆಟ್‌ನಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. 2019 ರಲ್ಲಿ ಸ್ವತಃ ಪಂಜಾಬ್ ಏಕ್ತಾ ಪಕ್ಷವನ್ನು ಸ್ಥಾಪಿಸಿದರು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಗೀರ್ ಅರಣ್ಯ ಪ್ರದೇಶದಲ್ಲಿ ‘ಲಯನ್​ ಶೋ’ : ಏಳು ಜನರಿಗೆ ಜೈಲು ಶಿಕ್ಷೆ
ಬಿಗ್‌ ಬ್ರೇಕಿಂಗ್‌: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್‌- 11 ಜಿಲ್ಲೆಗಳಲ್ಲಿ 9 ಮನೆಯ ಮೇಲೆ ಎಸಿಬಿ ದಾಳಿ- ಇಲ್ಲಿದೆ ವಿವರ…



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
