ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡು ಸಂಸದ ರಾಹುಲ್​ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್​ ನೀಡಿದೆ ಎಂದು ಕಾಂಗ್ರೆಸ್​ ನಾಯಕ ರಣದೀಪ್​ ಸುರ್ಜೇವಾಲ ತಿಳಿಸಿದ್ದಾರೆ.
ಜೂನ್​ 8ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿಗೆ ಇಡಿ ಸಮನ್ಸ್​ ನೀಡಿದೆ ಎಂದು ಕಾಂಗ್ರೆಸ್​ ನಾಯಕ ಅಭಿಷೇಕ್​ ಮನು ಸಿಂಗ್ವಿ ಕೂಡ ಮಾಹಿತಿ ತಿಳಿಸಿದ್ದಾರೆ.
ಸೋನಿಯಾ ಗಾಂಧಿ ಅವರು ವಿಚಾರಣೆಗೆ ಖಂಡಿತವಾಗಿ ಹಾಜರಾಗಲಿದ್ದಾರೆ. ಆದರೆ, ರಾಹುಲ್​ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಜೂನ್​ 8ರೊಳಗೆ ರಾಹುಲ್​ ಬಂದರೆ, ಅವರು ಕೂಡ ವಿಚಾರಣೆ ಎದುರಿಸಲಿದ್ದಾರೆ. ಬರಲು ಸಾಧ್ಯವಾಗದಿದ್ದರೆ, ಸಮಯ ಬೇಕಾಗುತ್ತದೆ ಎಂದು ಸಿಂಗ್ವಿ ತಿಳಿಸಿದ್ದಾರೆ. ಅಲ್ಲದೆ, ಅಕ್ರಮ ಹಣ ವರ್ಗಾವಣೆ ಸಂಬಂಧ ಯಾವುದೇ ಸಾಕ್ಷಿಗಳು ಇಲ್ಲ ಎಂದಿದ್ದಾರೆ.
ಇಡಿ ಅಧಿಕಾರಿಯೊಬ್ಬರು ಮಾತನಾಡಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಹೇಳಿಕೆ ಪಡೆದುಕೊಳ್ಳಲು ನೋಟಿಸ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಹಂತದಲ್ಲೂ ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಟಾರ್ಗೆಟ್​ ಮಾಡಲಾಗುತ್ತಿದೆ. ಬಿಜೆಪಿ ಅವರ ಹಿಂದಿನವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾತ್ರ ವಹಿಸದ ಕಾರಣ ಬಿಜೆಪಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ ಮತ್ತು ಅಗೌರವಿಸಿದೆ. 1942ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭವಾಯಿತು. ಆ ಸಮಯದಲ್ಲಿ ಬ್ರಿಟಿಷರು ಅದನ್ನು ಹತ್ತಿಕ್ಕಲು ಯತ್ನಿಸಿದ್ದರು. ಅದೇ ಹಾದಿಯನ್ನು ಇಂದು ಮೋದಿ ಸರ್ಕಾರ ಇಡಿ ಬಳಸಿಕೊಂಡು ಮಾಡುತ್ತಿದೆ ಎಂದಿದ್ದಾರೆ.
ಸಾವು-ಬದುಕಿನ ಮಧ್ಯೆ ನರಳಾಡ್ತಿದ್ರು ದಂಡ ಪಾವತಿಸುವವರೆಗೆ ಕಾರು ಬಿಡದ ಪೊಲೀಸರು: ಮಗು ದುರಂತ ಸಾವು

ಡಿಕೆಶಿ ಮುಖ್ಯಮಂತ್ರಿ ಆಗೋದು ಖಚಿತ! ಆಗ ಕುಣಿಗಲ್​ಗೆ ನಾನೇ ಸಿಎಂ ಎಂದ ಶಾಸಕ ರಂಗನಾಥ್

ಎಂದಿಗೂ ಒಗ್ಗಟ್ಟಾಗದ, ಜತೆ ಇದ್ದೋರನ್ನೂ ಮುಳುಗಿಸೋ ಪಕ್ಷಕ್ಕೆ ದೊಡ್ಡ ನಮಸ್ಕಾರ ಎಂದ ಪ್ರಶಾಂತ್ ಕಿಶೋರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 2 =
Remember me
