ನವದೆಹಲಿ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಕುಟುಂಬಸ್ಥರು ಮತ್ತು ನಟಿ ರಿಯಾ ಚಕ್ರವರ್ತಿ ನಡುವಿನ ಕಿತ್ತಾಟ ತಾರಕಕ್ಕೇರುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಸುಶಾಂತ್​ ಬ್ಯಾಂಕ್​ ಖಾತೆಯಿಂದ ರಿಯಾ ಕದ್ದಿದ್ದಾರೆ ಎನ್ನಲಾದ 15 ಕೋಟಿ ರೂ.ನ ಮೂಲದ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಆಸಕ್ತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರ ತಂದೆ ಕೆ.ಕೆ. ಸಿಂಗ್​ ದೂರು ಆಧರಿಸಿ ದಾಖಲಿಸಿರುವ ಎಫ್​ಐಆರ್​ನ ವಿವರವನ್ನು ಸಲ್ಲಿಸುವಂತೆ ಬಿಹಾರ ಪೊಲೀಸರಿಗೆ ನೋಟಿಸ್​ ಜಾರಿ ಮಾಡಿದೆ.
ಬಿಹಾರ ಪೊಲೀಸರಿಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯ ಸುಶಾಂತ್​ ಸಿಂಗ್​ ರಜಪೂತ್​ ಅವರ ಎಲ್ಲ ಬ್ಯಾಂಕ್​ ಖಾತೆಗಳ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಕೋಟಕ್​ ಮಹಿಂದ್ರಾ ಬ್ಯಾಂಕ್​ಗೆ ತೆರಳಿದ ಬಿಹಾರ ಪೊಲೀಸರು ಸುಶಾಂತ್​ ಬ್ಯಾಂಕ್​ ಖಾತೆಯ ವಿವರ ಪಡೆಯಲು ಪ್ರಯತ್ನಿಸಿದರು.
ಬಿಹಾರ ಪೊಲೀಸರು ದಾಖಲಿಸಿರುವ ಎಫ್​ಐಆರ್​ ಪ್ರಕಾರ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ರಿಯಾ ಅಲ್ಲದೆ ಇನ್ನೂ ಮೂವರ ಬ್ಯಾಂಕ್​ ಖಾತೆಗಳಿಗೆ ಸುಶಾಂತ್​ ಖಾತೆಯಿಂದ ಒಟ್ಟು 15 ಕೋಟಿ ರೂ. ವರ್ಗಾವಣೆಗೊಂಡಿದೆ. ಈ ಮೂರು ಖಾತೆಗಳಲ್ಲಿ ಒಂದು ಸ್ವತಃ ರಿಯಾ ಅವರದ್ದಾಗಿದ್ದರೆ, ಇನ್ನೊಂದು ಆಕೆಯ ಸಹೋದರ ಹಾಗೂ ಮತ್ತೊಂದು ಆಕೆಯ ತಾಯಿಯ ಬ್ಯಾಂಕ್​ ಖಾತೆಗಳಾಗಿರುವುದಾಗಿ ಹೇಳಲಾಗಿದೆ. ಸುಶಾಂತ್​ ಮತ್ತು ರಿಯಾ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಅವರಿಬ್ಬರೂ ಒಟ್ಟಾಗಿ ಮೂರು ನವೋದ್ಯಮಗಳಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
29 ವರ್ಷಗಳ ಹಿಂದಿನ ‘ಪ್ರತಿಜ್ಞೆ’ ಪೂರೈಸಿದ ಪ್ರಧಾನಿ ಮೋದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 10 =
Remember me
