ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, ನೂತನ ನಿಯಮಗಳು ಅಕ್ಟೋಬರ್ 1ರಿಂದ ಅನ್ವಯವಾಗಲಿವೆ. ವಾಹನ ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುವ ಮೂಲಕ, ಸಂಚಾರ ನಿಯಮಗಳನ್ನು ಸೂಕ್ತವಾಗಿ ಜಾರಿಗೆ ತರುವ ಉದ್ದೇಶವನ್ನು ಹೊಂದಿದ್ದು, ಡಿಜಿಟಲ್ ಪ್ರಕ್ರಿಯೆಗೆ ಒತ್ತು ನೀಡುವುದರಿಂದ ಭ್ರಷ್ಟಾಚಾರವೂ ತಗ್ಗುತ್ತದೆ ಎಂದು ಸರ್ಕಾರ ಹೇಳಿದೆ. ವಾಹನ ಸಂಚಾರ ಸಮಯದಲ್ಲಿ ನ್ಯಾವಿಗೇಷನ್​ಗಾಗಿ ಮಾತ್ರ ಮೊಬೈಲ್ ಬಳಕೆ, ಚಾಲನಾ ಪರವಾನಗಿ, ನೋಂದಣಿ ಪುಸ್ತಕ, ವಿಮೆ ಮುಂತಾದ ಕಾಗದಪತ್ರಗಳ ಡಿಜಿಟಲ್ ಬಳಕೆಗೆ ಅನುಮತಿ, ದೇಶದಾದ್ಯಂತ ಏಕರೂಪದ ಡಿಎಲ್ ಮತ್ತು ಆರ್​ಸಿ ಮುಂತಾದ ಅಂಶಗಳನ್ನು ಈ ಕಾಯ್ದೆ ಹೊಂದಿದೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆಯನ್ನು ಅತಿ ಅಪಾಯಕಾರಿ ವಿಭಾಗಕ್ಕೆ ಸೇರಿಸಲಾಗಿದ್ದು, ಇಂಥ ವೇಳೆ ಸಿಕ್ಕಿಬಿದ್ದರೆ 5 ಸಾವಿರ ರೂ.ವರೆಗೆ ದಂಡ ಅಥವಾ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ಏಕಕಾಲಕ್ಕೆ ವಿಧಿಸಬಹುದಾದ ಅವಕಾಶವೂ ಈ ಕಾಯ್ದೆಯಲ್ಲಿದೆ. ಈ ಹಿಂದೆ ದಂಡ ವಿಧಿಸಬಹುದಾಗಿತ್ತು. ಹಾಗೆಯೇ, ಸಂಚಾರ ನಿಯಮ ಉಲ್ಲಂಘನೆಯ ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ ಹೆಚ್ಚಿನ ಪ್ರಮಾಣದ ದಂಡ ವಿಧಿಸುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.ಇದನ್ನೂ ಓದಿ:ಕರೊನಾ ಬುಲೆಟಿನ್​​: ರಾಜ್ಯದಲ್ಲಿ ಕಳೆದೆರಡು ದಿನಗಳಿಗಿಂತ ಕಡಿಮೆ ಸೋಂಕು, ಕಡಿಮೆ ಸಾವು..
ಅತಿ ಹೆಚ್ಚು ಅಪಘಾತ ಸಂಭವಿಸುವ ಮತ್ತು ಇದರಿಂದಾಗಿ ಹೆಚ್ಚು ಜನರು ಸಾವುನೋವಿಗೀಡಾಗುವ ದೇಶಗಳಲ್ಲಿ ಭಾರತ ಸಹ ಮುಂಚೂಣಿಯಲ್ಲಿರುವುದು ಖೇದದ ಸಂಗತಿ. 2019ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ 1.51 ಲಕ್ಷ ಜನರು ಸಾವನ್ನಪ್ಪಿರುವುದು ಈ ಮಾತಿಗೆ ಸಾಕ್ಷಿ. ಅತ್ಯಧಿಕ ಸಂಖ್ಯೆಯ ವಾಹನಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿಯೂ ಭಾರತ ಮುಂದಿನ ಸಾಲಿನಲ್ಲಿ ಬರುತ್ತದೆ. 2019ರ ಒಂದೇ ವರ್ಷದಲ್ಲಿ 30 ಲಕ್ಷ ಕಾರುಗಳ ನೋಂದಣಿಯಾಗಿರುವುದು ನಮ್ಮಲ್ಲಿನ ವಾಹನ ಸಂಖ್ಯೆಯನ್ನು ಸಂಕೇತಿಸುತ್ತದೆ. ದೆಹಲಿ, ಮುಂಬೈ, ಬೆಂಗಳೂರು, ಕೊಲ್ಕತಾ ಮುಂತಾದ ನಗರಗಳೇ ತಲಾ 50-60 ಲಕ್ಷ, ಕೋಟಿಯಷ್ಟು ವಾಹನಗಳನ್ನು ಹೊಂದಿವೆ. ದೇಶದ ಒಟ್ಟು ರಸ್ತೆಗಳ ಉದ್ದ ಸುಮಾರು 50 ಲಕ್ಷ ಕಿಲೋಮೀಟರ್. ಒಟ್ಟಾರೆ ಪ್ರಯಾಣಿಕರಲ್ಲಿ ಶೇ.90ರಷ್ಟು ಜನರು ರಸ್ತೆಮಾರ್ಗವನ್ನೇ ಅವಲಂಬಿಸುತ್ತಾರೆ. ಹೀಗಾಗಿ ರಸ್ತೆಗಳ ಮೇಲಿನ ಒತ್ತಡವೂ ಹೆಚ್ಚು. ಹದಗೆಟ್ಟ ರಸ್ತೆಗಳು, ಸಂಚಾರ ನಿಯಮ ಪಾಲನೆ ಮಾಡದಿರುವುದು, ಸೂಕ್ತ ಭದ್ರತಾ ವ್ಯವಸ್ಥೆ ಕೊರತೆ, ಅತಿವೇಗದ ಚಾಲನೆ… ಹೀಗೆ ಅಪಘಾತಗಳಿಗೆ ನಾನಾ ಕಾರಣಗಳಿವೆ.
ನೂತನ ಮೋಟಾರು ವಾಹನ ಕಾಯ್ದೆಯು ಅಪಘಾತಗಳನ್ನು ನಿಯಂತ್ರಿಸುವುದು, ಜನರು ಸಂಚಾರ ನಿಯಮ ಅನುಸರಿಸುವುದನ್ನು ಖಾತ್ರಿಪಡಿಸುವುದು, ಅಧಿಕಾರಿ-ಸಿಬ್ಬಂದಿ ವರ್ಗದಲ್ಲಿನ ಭ್ರಷ್ಟಾಚಾರವನ್ನು ತಗ್ಗಿಸುವುದು ಮುಂತಾದ ಉದ್ದೇಶಗಳನ್ನು ಹೊಂದಿದೆ. ಇದೆಲ್ಲ ಒಳ್ಳೆಯದೇ, ಆದರೆ ಅನುಷ್ಠಾನದ ಹಂತದಲ್ಲಿ ಸಮಸ್ಯೆಯಾಗುತ್ತದೆ. ಈ ಬಾಬತ್ತಿನಲ್ಲಿ ಹೇಗೆ, ಎಷ್ಟು ಪ್ರಮಾಣದ ಭ್ರಷ್ಟಾಚಾರ ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರಶಾಹಿಯಲ್ಲಿನ ಲಂಚಗುಳಿತನ ನಿಯಂತ್ರಿಸಿ, ವ್ಯವಸ್ಥೆಯನ್ನು ಪಾರದರ್ಶಕವಾಗಿಸುತ್ತ ಆದ್ಯತೆ ನೀಡಬೇಕು. ಅದೇ ರೀತಿ, ಅಪಘಾತ ನಿಯಂತ್ರಣ ಮತ್ತು ಸುರಕ್ಷಿತ ರಸ್ತೆ ಸಂಚಾರದಲ್ಲಿ ಜನರ ಪಾತ್ರವೂ ಮುಖ್ಯವಾದುದು ಎಂಬುದನ್ನು ಮರೆಯುವಂತಿಲ್ಲ.
ಈ ಎಣ್ಣೆ ಜತೆ ಯಾವ ಎಣ್ಣೆಯನ್ನೂ ಮಿಕ್ಸ್​ ಮಾಡುವ ಹಾಗಿಲ್ಲ.. ಅ. 1ರಿಂದಲೇ ನಿಷೇಧ ಜಾರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
