ನವದೆಹಲಿ:ತಾಂತ್ರಿಕ ಶಿಕ್ಷಣದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಅನೇಕ ಪ್ರತಿಭಾನ್ವಿತರೂ ಜೈಲಿಗೆ ಸೇರಿದ್ದಾರೆ. ಎನ್​ಸಿಆರ್​ಬಿಯ ಕ್ರೈಂ ಇನ್ ಇಂಡಿಯಾ-2019 ವರದಿಯ ಪ್ರಕಾರ 3,740 ತಾಂತ್ರಿಕ ಶಿಕ್ಷಣದ ಪದವೀಧರರು ಅಥವಾ ಡಿಪ್ಲೊಮಾ ಕಲಿತವರು ಮತ್ತು 5,282 ಸ್ನಾತಕೋತ್ತರ ಪದವೀಧರರು ಜೈಲು ಹಕ್ಕಿಗಳಾಗಿದ್ದಾರೆ. ಈ ರೀತಿಯ ವಿದ್ಯಾವಂತರು ಉತ್ತರ ಪ್ರದೇಶದ ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಉತ್ತರ ಪ್ರದೇಶದಲ್ಲಿ ಸುಮಾರು 720 ತಾಂತ್ರಿಕ ಶಿಕ್ಷಣದ ಪದವೀಧರರು ಜೈಲಿನಲ್ಲಿದ್ದಾರೆ. 2,010 ಸ್ನಾತಕೋತ್ತರ ಪದವೀಧರರು ಜೈಲು ವಾಸಿಗಳಾಗಿದ್ದಾರೆ. ಕರ್ನಾಟಕದಲ್ಲಿ 362 ತಾಂತ್ರಿಕ ಶಿಕ್ಷಣದ ಪದವೀಧರರು ಮತ್ತು 120 ಸ್ನಾತಕೋತ್ತರ ಪದವೀಧರರು ಕಾರಾಗೃಹದಲ್ಲಿ ಇದ್ದಾರೆ. ಇವರಲ್ಲಿ ಅನೇಕರು ವರದಕ್ಷಿಣೆ ಪ್ರಕರಣ ಮತ್ತು ವ್ಯಾಪಾರ-ವಹಿವಾಟು ಸಂಬಂಧಿತ ಪ್ರಕರಣಗಳಿಂದಾಗಿ ಜೈಲು ಸೇರಿದ್ದಾರೆ.
ಇದನ್ನೂ ಓದಿ:ಎನ್​ಡಿಎಯಿಂದ ಎಲ್​ಜೆಪಿ ಔಟ್: ನಿತೀಶ್ ವಿರುದ್ಧ ತೊಡೆ ತಟ್ಟಿದ ಪಾಸ್ವಾನ್​
ಜೈಲಿನಲ್ಲೂ ಇಂಜಿನಿಯರಿಂಗ್ ಕೆಲಸ :ದೇಶದಲ್ಲಿ 3,30,487 ಅಪರಾಧಿಗಳಿದ್ದರೆ ಅದರಲ್ಲಿ ಶೇ. 1.67 ಜನರು ಸ್ನಾತಕೋತ್ತರ ಪದವೀಧರರು ಮತ್ತು ಶೇ. 1.2 ಕೈದಿಗಳು ಇಂಜಿನಿಯರ್​ಗಳಾಗಿದ್ದಾರೆ. ಈ ಇಂಜಿನಿಯರ್​ಗಳು ಜೈಲಿನಲ್ಲೂ ವೃತ್ತಿ ನೈಪುಣ್ಯವನ್ನು ತೋರ್ಪಡಿಸುತ್ತಿದ್ದಾರೆ. ಇ-ಜೈಲು ಮಾಡೆಲ್, ಸೇರಿದಂತೆ ಅನೇಕ ತಂತ್ರಜ್ಞಾನ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ಉತ್ತರ ಪ್ರದೇಶದ ಕಾರಾಗೃಹದ ಮಹಾನಿರ್ದೇಶಕ ಆನಂದ್ ಕುಮಾರ್ ತಿಳಿಸಿದ್ದಾರೆ.
ಮುಕ್ತ ವಿವಿ ಕೋರ್ಸ್​ಗಳ ಪ್ರವೇಶಕ್ಕೆ ದಂಡ ರಹಿತವಾಗಿ 10ಕ್ಕೆ ಕೊನೇದಿನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 4 =
Remember me
