ನವದೆಹಲಿ:ಶಿಕ್ಷಣ ಅನ್ನೋದು ಹಣ ಮಾಡುವ ವ್ಯಾಪಾರ ಅಲ್ಲ. ಕಾಲೇಜುಗಳಲ್ಲಿ ಟ್ಯೂಶನ್​​ ಫೀಸುಗಳು ಹೆಚ್ಚಾಗಬಾರದು ಎಂದು ಸುಪ್ರೀಂ ಕೋರ್ಟ್​ ಆಂಧ್ರಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿದೆ.
ಈ ಹಿಂದೆ ಆಂಧ್ರಪ್ರದೇಶ ಸರ್ಕಾರ ವೈದ್ಯಕೀಯ ಕಾಲೇಜುಗಳ ಫೀಸನ್ನು 24 ಲಕ್ಷ ಮಾಡಲು ಹೊರಟಿತ್ತು. ಆಗ ಈ ನಿರ್ಧಾರ ಅನೇಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣ ಆಂಧ್ರಪ್ರದೇಶ ಹೈಕೋರ್ಟ್​ ಮೆಟ್ಟಿಲೇರಿದ್ದಾಗ ಕೋರ್ಟ್,​ ಶುಲ್ಕ ಏರಿಸದಂತೆ ನಿರ್ಬಂಧ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆಂಧ್ರ ಸರ್ಕಾರ ಸುಪ್ರೀಂ ಮೆಟ್ಟಿಲೇರಿತ್ತು.
‘ಟ್ಯೂಶನ್​ ಶುಲ್ಕವನ್ನು ಏಳು ಪಟ್ಟು ಹೆಚ್ಚಿಸುವುದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಶಿಕ್ಷಣ ಎನ್ನುವುದು ಲಾಭ ಪಡೆಯಲು ಮಾಡುವ ವ್ಯಾಪಾರ ಅಲ್ಲ. ಟ್ಯೂಶನ್​ ಶುಲ್ಕ ಕೈಗೆಟಕುವ ದರದಲ್ಲೇ ಇರಲಿದೆ’ ಎಂದು ನ್ಯಾಯಾಧೀಶರ ಪೀಠ ಹೇಳಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 7 =
Remember me
