ಬೆಂಗಳೂರು:ಯಷ್ನಾ ಟ್ರಸ್ಟ್-ಎಜುಕೇಷನ್ ಯುಎಸ್ಎ ಬೆಂಗಳೂರು ಸಂಸ್ಥೆಯು ಅಂಡರ್‌ ಗ್ರಾಜುಯೇಟ್ ವರ್ಚುಯಲ್ ಶೋಕೇಸ್​ನ್ನು ಜುಲೈ 23ರಂದು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಹನ ನಡೆಸುವ ಮತ್ತು ಎಜುಕೇಷನ್ ಯುಎಸ್ಎ ಸಲಹೆಗಾರರೊಂದಿಗೆ ಅಮೆರಿಕದಲ್ಲಿ ಲಭ್ಯವಿರುವ ಶೈಕ್ಷಣಿಕ ಅವಕಾಶಗಳ ಬಗ್ಗೆ ತಮ್ಮ ಮನೆಯ ಸುರಕ್ಷತೆ ಮತ್ತು ಸೌಖ್ಯದಲ್ಲಿಯೇ ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅಮೆರಿಕಾದ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ಯೂನಿವರ್ಸಿಟಿ ಆಫ್ ರೊಚೆಸ್ಟರ್, ಇಂಡಿಯಾನಾ ಯೂನಿವರ್ಸಿಟಿ-ಪರ್ಡ್ಯೂ ಯೂನಿವರ್ಸಿಟಿ ಇಂಡಿಯಾನಾಪೊಲಿಸ್, ಗ್ರಿನ್ನೆಲ್ ಕಾಲೇಜ್, ಮಿಷಿಗನ್ ಸ್ಟೇಟ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ವಿಸ್ಕೋನ್ಸಿನ್-ಮ್ಯಾಡಿಸನ್, ಸ್ವಾಥ್ಮೋರ್ ಕಾಲೇಜ್, ಯೂನಿವರ್ಸಿಟಿ ಆಫ್ ವಾಷಿಂಗ್ಟನ್, ಸಿಯಾಟಲ್ ಅಂಡ್ ಫ್ಲೋರಿಡಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಪೋಷಕರು ಶೈಕ್ಷಣಿಕ ಕಾರ್ಯಕ್ರಮಗಳು, ಕ್ಯಾಂಪಸ್ ಜೀವನ, ಹಣಕಾಸು ನೆರವಿನ ಆಯ್ಕೆಗಳು, ಅರ್ಜಿ ಪ್ರಕ್ರಿಯೆಗಳು ಮತ್ತು ಕೋವಿಡ್-19 ಸಾಂಕ್ರಾಮಿಕದ ಪ್ರತಿಕ್ರಿಯೆಯಾಗಿ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿನ ಸುರಕ್ಷತೆಯ ಮುನ್ನೆಚ್ಚರಿಕೆಗಳ ಕುರಿತು ಮೌಲ್ಯಯುತ ಮಾಹಿತಿ ಪಡೆಯಬಹುದು.
ಚೆನ್ನೈನ ಅಮೆರಿಕದ ದೂತಾವಾಸ ಕಚೇರಿಯ ಪಬ್ಲಿಕ್ ಅಫೇರ್ಸ್ ಆಫೀಸರ್ ಆನ್‌ ಲೀ ಶೇಷಾದ್ರಿ, “ಅಮೆರಿಕದಲ್ಲಿನ ಪದವಿಪೂರ್ವ ಅವಕಾಶಗಳು ವಿಶ್ವದಲ್ಲಿಯೇ ಸರಿಸಾಟಿ ಇಲ್ಲದೇ ಇರುವಂತಹವು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನುಕೂಲಕರ ಪಠ್ಯಕ್ರಮ, ಸಣ್ಣ ತರಗತಿಯ ಗಾತ್ರಗಳು, ವಿಶಿಷ್ಟ ಸಂಶೋಧನೆ ಅವಕಾಶಗಳು, ಸುಂದರ ಅತ್ಯಾಧುನಿಕ ಸೌಲಭ್ಯಗಳು ಮತ್ತು ವೈವಿಧ್ಯಮಯ ವಿದ್ಯಾರ್ಥಿ ಸಂಘಟನೆಗಳನ್ನು ಹೊಂದಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.ಅಮೆರಿಕದಲ್ಲಿ ಪದವಿ ಕಾರ್ಯಕ್ರಮಗಳಲ್ಲಿ ಕಲಿಯಲು ಬಯಸುವ ಪ್ರೌಢಶಾಲಾ ವಿದ್ಯಾರ್ಥಿಗಳುbit.ly/UG21Othಇಲ್ಲಿ ನೋಂದಾಯಿಸಿಕೊಳ್ಳಿ. ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಲಾಗುವುದಿಲ್ಲ ಹಾಗಾಗಿ ಕಾರ್ಯಕ್ರಮ ಮುಗಿದ ಬಳಿಕ ವೀಕ್ಷಿಸಲು ಲಭ್ಯವಿರುವುದಿಲ್ಲ.
ಈ ಕಾರ್ಯಕ್ರಮದ ಬಗ್ಗೆ ಅಥವಾ ಅಮೆರಿಕದಲ್ಲಿ ಉನ್ನತ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ98800-41115(ವಾಟ್ಸ್​ಆ್ಯಪ್​ನಲ್ಲಿ) ಸಂಪರ್ಕಿಸಿ ಅಥವಾ[email protected]ಇಮೇಲ್ ಮಾಡಬಹುದು.
ಎಜುಕೇಷನ್ ಯುಎಸ್ಎ ಮತ್ತು ಯಷ್ನಾ ಟ್ರಸ್ಟ್ ಕುರಿತು:ಎಜುಕೇಷನ್ ಯುಎಸ್ಎ(https://educationusa.state.gov) ಅಮೆರಿಕದ ವಿದೇಶಾಂಗ ಇಲಾಖೆಯ ಭಾಗವಾಗಿದ್ದು 425ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಲಹಾ ಕೇಂದ್ರಗಳನ್ನು 170ಕ್ಕೂ ಹೆಚ್ಚು ದೇಶಗಳಲ್ಲಿ ಹೊಂದಿದೆ. ಈ ಜಾಲವು ವಿಶ್ವದಾದ್ಯಂತ ವಿದ್ಯಾರ್ಥಿಗಳಿಗೆ ನಿಖರ, ಸಮಗ್ರ ಮತ್ತು ಪ್ರಸ್ತುತ ಮಾಹಿತಿಯನ್ನು ಅಮೆರಿಕದ ಉನ್ನತ ಶಿಕ್ಷಣದ ಕುರಿತು ನೀಡುವ ಮೂಲಕ ಅಮೆರಿಕದಲ್ಲಿ ಮಾನ್ಯತೆ ಪಡೆದ ಪೋಸ್ಟ್ ಸೆಕೆಂಡರಿ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶಗಳನ್ನು ಉತ್ತೇಜಿಸುತ್ತದೆ. ಯಷ್ನಾ ಟ್ರಸ್ಟ್-ಎಜುಕೇಷನ್ ಯುಎಸ್ಎ ಬೆಂಗಳೂರು(https://www.yashnatrust.org/) ಭಾರತದ ಕರ್ನಾಟಕದಲ್ಲಿ ಶಿಕ್ಷಣ-ಸಲಹೆಯನ್ನು ನೀಡುವ ಏಕೈಕ ಅಧಿಕೃತ ಯು.ಎಸ್.ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಆಗಿದೆ.
ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್! ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ಬುಕ್ಕಿಂಗ್

499 ರೂಪಾಯಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭ! ಇದಿನ್ನೂ ಪ್ರಾರಂಭವೆಂದ ಸಂಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + fourteen =
Remember me
