ಮುಂಬೈ:ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈನ ಎಗ್ಮೋರ್ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.ಚೆನ್ನೈನ ರಾಯಪೇಟಾದಲ್ಲಿ ಆಕೆಯ ಒಡೆತನದ ಚಿತ್ರಮಂದಿರದ ನೌಕರರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಆಕೆಗೆ 5,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಏನಿದು ಪ್ರಕರಣ:ಜಯಪ್ರದಾ ಅವರು ಚೆನ್ನೈನ ಅಣ್ಣಾ ರಸ್ತೆಯಲ್ಲಿರುವ ಜಯಪ್ರದಾ ಸಿನಿಮಾ ಥಿಯೇಟರ್ ಅನ್ನು ರಾಮ್ ಕುಮಾರ್ ಮತ್ತು ರಾಜಬಾಬು ಅವರೊಂದಿಗೆ ನಡೆಸುತ್ತಿದ್ದಾರೆ. ಈ ಸಿನಿಮಾ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ  ಇಎಸ್​ಐ ಹಣ ಪಾವತಿಸದ ಕಾರಣ ಜಯಪ್ರದಾ ವಿರುದ್ಧ ಕಾರ್ಮಿಕರು ಅಸಮಾಧಾನಗೊಂಡಿದ್ದರು. ಈ ಕುರಿತಾಗಿ ಉದ್ಯೋಗಿಯೊಬ್ಬರು ದೂರು ನೀಡಿದ್ದಾರೆ.ಇದರೊಂದಿಗೆ ಕಾರ್ಮಿಕ ಸರ್ಕಾರಿ ವಿಮಾ ನಿಗಮವು ನಟಿಯ ವಿರುದ್ಧ ಚೆನ್ನೈನ ಎಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಎಗ್ಮೋರ್ ನ್ಯಾಯಾಲಯವು ಥಿಯೇಟರ್ ಮ್ಯಾನೇಜರ್ ಜಯಪ್ರದಾ ಮತ್ತು ಇಬ್ಬರು ಪಾಲುದಾರರಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ತಲಾ 5,000 ರೂ. ದಂಡ ಕಟ್ಟುವಂತೆಯೂ ತಿಳಿಸಲಾಗಿದೆ.
ಈ ಹಿಂದೆ ಕೂಡ ಜಯಪ್ರದಾ ಥಿಯೇಟರ್ ಕಾಂಪ್ಲೆಕ್ಸ್​ಗೆ ಸಂಬಂಧಿಸಿದಂತೆ ಸುಮಾರು 20 ಲಕ್ಷ ರೂಪಾಯಿ ತೆರಿಗೆ ಪಾವತಿಸಿರಲಿಲ್ಲ. ಆಗ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಪಾಲಿಕೆ ಅಧಿಕಾರಿಗಳು ಥಿಯೇಟರ್​ನ ಕುರ್ಚಿ, ಪ್ರೊಜೆಕ್ಟರ್​ಗಳನ್ನು ಜಪ್ತಿ ಮಾಡಿದ್ದರು. ಈಗ ಮತ್ತೊಮ್ಮೆ ಜಯಪ್ರದಾ ಅವರಿಗೆ ಹಿನ್ನಡೆ ಆಗಿದೆ.
80ರ ದಶಕದಲ್ಲಿ, ನಟಿ ಜಯಪ್ರದಾ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಹುತೇಕ ಎಲ್ಲಾ ಟಾಪ್ ನಟರೊಂದಿಗೆ ನಟಿಸಿದ್ದಾರೆ.ಸುಮಾರು ಎರಡು ದಶಕಗಳ ಕಾಲ ಸ್ಟಾರ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈಗ ರಾಜಕೀಯ ಹಾಗೂ ಕೆಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದ್ದ ಚಹಾ ವ್ಯಾಪಾರಿ; ಬೆಂಗಳೂರಿಗೆ ಬರುತ್ತಿದ್ದಂತೆ 15 ಲಕ್ಷ ರೂ. ದೋಚಿದ ಸ್ನೇಹಿತರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 1 =
Remember me
