ನವದೆಹಲಿ:ರಾಜ್ಯಸಭೆ ಕಲಾಪದ ವೇಳೆ ಅಸಭ್ಯ ವರ್ತನೆ ತೋರಿದ ಟಿಎಂಸಿ ಸದಸ್ಯ ಡೆರೆಕ್ ಓ ಬ್ರಿಯಾನ್ ಸಂಜಯ್​ ಸಿಂಗ್ ಸೇರಿ 8 ವಿಪಕ್ಷ ಸದಸ್ಯರನ್ನು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಇಂದು ಅಮಾನತು ಮಾಡಿದ್ದಾರೆ.
ರಾಜ್ಯಸಭೆ ಕಲಾಪ ಆರಂಭವಾದ ಕೆಲವೇ ಹೊತ್ತಿನಲ್ಲಿ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು, ನಿನ್ನೆ ಕಲಾಪದ ವೇಳೆ ನಡೆದ ಘಟನೆ ಬಗ್ಗೆ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದರು. ಡೆಪ್ಯುಟಿ ಚೇರ್​ಮನ್​ ಮೇಲೆ ದೈಹಿಕ ಆಕ್ರಮಣದ ಬೆದರಿಕೆ ಒಡ್ಡಿರುವುದು ಸರಿಯಲ್ಲ. ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಲಾಗಿದೆ. ಸಂಸದರು ಈ ವಿಷಯವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ:FIRST LOOK: ‘ಸತ್ಯಮೇವ ಜಯತೇ 2’ ಚಿತ್ರಕ್ಕಾಗಿ ದೇಹದ ಆಕಾರವನ್ನೇ ಬದಲಿಸಿದ ಜಾನ್ ಅಬ್ರಹಂ!
ಇಷ್ಟು ಹೇಳಿದ ಬಳಿಕ ಅಧ್ಯಕ್ಷರು, ಡೆಪ್ಯುಟಿ ಚೇರ್​ಮನ್ ವಿರುದ್ಧದ ಅವಿಶ್ವಾಸಗೊತ್ತುವಳಿಯನ್ನು ನಿಯಮಾವಳಿ ಪ್ರಕಾರ ಸ್ವೀಕರಿಸಲಾಗದು ಎಂದು ಸ್ಪಷ್ಟಪಡಿಸಿದರಲ್ಲದೆ, ನಿನ್ನೆ ದುರ್ವರ್ತನೆ ತೋರಿದ ಎಂಟು ಸದಸ್ಯರನ್ನು ಒಂದು ವಾರದ ಮಟ್ಟಿಗೆ ಅಮಾನತುಗೊಳಿಸಿರುವುದಾಗಿ ಘೋಷಿಸಿದರು.ಈ ಪಟ್ಟಿಯಲ್ಲಿ ಸದಸ್ಯರಾದ ಡೆರೆಕ್ ಓ ಬ್ರಿಯಾನ್​, ಸಂಜಯ್ ಸಿಂಗ್, ರಾಜು ಸತವ್​, ಕೆಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್​, ಸೈಯದ್​ ನಾಝಿರ್ ಹುಸೇನ್​, ಎಲಮಾರನ್ ಕರೀಮ್ ಸೇರಿದ್ದಾರೆ. (ಏಜೆನ್ಸೀಸ್)
I order Mr Derek to go out of the House: Rajya Sabha Chairman M Venkaiah Naiduhttps://t.co/BSjWnK4lvf
— ANI (@ANI)September 21, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 5 =
Remember me
