ತ್ರಿಸ್ಸೂರ್​:ಮೊಬೈಲ್​ ಸ್ಫೋಟಗೊಂಡು 8 ವರ್ಷದ ಬಾಲಕಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ತ್ರಿಸ್ಸೂರ್​ ಜಿಲ್ಲೆಯ ತಿರುವಿಲವಮಲದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಪಟ್ಟಿಪರಂಬು ಕುನ್ನತು ವಿತ್ತಿಲ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಶೋಕ್​​ ಕುಮಾರ್​ ಮತ್ತು ಸೌಮ್ಯ ದಂಪತಿಯ ಒಬ್ಬಳೇ ಪುತ್ರಿ. ಕ್ರಿಸ್ಟ್​ ನ್ಯೂ ಲೈಫ್​ ಸ್ಕೂಲ್​​​ನಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ಇದನ್ನೂ ಓದಿ:37.80 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಆಲಿಯಾ ಭಟ್!
ಈ ಘಟನೆ ಕಳೆದ ರಾತ್ರಿ ನಡೆದಿದೆ. ಮೊಬೈಲ್​ ಅನ್ನು ಚಾರ್ಜ್​ ಹಾಕಿದ್ದ ವೇಳೆ ಆದಿತ್ಯಶ್ರೀ ವಿಡಿಯೋ ನೋಡುತ್ತಿದ್ದಳು. ಈ ವೇಳೆ ಮೊಬೈಲ್​ ಸ್ಫೋಟಗೊಂಡು ಆಕೆ ದುರ್ಮರಣಕ್ಕೀಡಾಗಿದ್ದಾಳೆ. ಸ್ಫೋಟದ ಸದ್ದು ನಮಗೂ ಕೇಳಿಸಿತು ಎಂದು ನೆರೆ ಮನೆಯವರು ಹೇಳಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಳೆಯನ್ನೂರು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಆದಿತ್ಯಾಶ್ರೀ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.(ಏಜೆನ್ಸೀಸ್​)
ಗಂಡನೊಂದಿಗೆ ಜಗಳ ಆಡಿಕೊಂಡು ಆಟೋದಿಂದ ಹೊರ ಜಿಗಿದಿದ್ದ ಗರ್ಭಿಣಿ ದುರಂತ ಅಂತ್ಯ

“ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ”: ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ

ಭಾರತೀಯ ರೈಲ್ವೆ: ರೈಲು ಬೋಗಿಗಳಲ್ಲಿ ಬರೆಯಲಾದ 5 ಅಂಕಿಗಳ ರಹಸ್ಯವೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 2 =
Remember me
