ಕೋಳಿಕ್ಕೋಡ್​​:ಲಾಕ್​ಡೌನ್​ ಸಮಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಮಹಿಳೆಯರಿಂದ ವಿಪರೀತ ದೂರುಗಳು ಬರುತ್ತಿವೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಕೇರಳದ ಕೋಳಿಕ್ಕೋಡ್​​ನಲ್ಲಿ ಅಚ್ಚರಿ ಪ್ರಕರಣದಲ್ಲಿ ಎಂಟು ವರ್ಷದ ಬಾಲಕನೊಬ್ಬ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ಅದು ಐದು ಮಂದಿ ನೆರೆಹೊರೆಯ ಬಾಲಕಿಯರ ಮೇಲೆ!
ಅಬ್ಬಾ! ಆ ಬಾಲಕಿಯರು ಈ ಪೋರನಿಗೆ ಅಂಥದ್ದೇನು ಮಾಡಿದ್ದರು ಅಂತೀರಾ? ಇನ್ನೇನೂ ಇಲ್ಲ. ಇವನ ಜತೆ ಆಟವಾಡಲು ಬರಲಿಲ್ಲ ಅಷ್ಟೇ.. ಇದನ್ನು ಕೇಳಿ ಪೊಲೀಸರೇ ಬೆರಗಾಗಿ ಹೋಗಿದ್ದಾರೆ!
ಇದನ್ನೂ ಓದಿ:ತರಕಾರಿ ಮಾರಲು ಬಲು ದೂರ ಸೈಕಲ್​ ತುಳಿಯುತ್ತಿದ್ದ ಯುವತಿಗೆ ಪೊಲೀಸರು ನೀಡಿದರೊಂದು ಶಾಕ್​!ಹೌದು. ಈ ಪುಟಾಣಿಯ ಹೆಸರು ಉಮರ್​ ನಿದಾರ್​. ಈತ ದೂರು ನೀಡಿರುವುದು ತನ್ನ ಸಹೋದರಿ ಹಾಗೂ ಅಕ್ಕಪಕ್ಕದ ಮಕ್ಕಳ ಮೇಲೆ. ಅವರು ಲಾಕ್ ಡೌನ್ ಸಮಯದಲ್ಲಿ ತನ್ನೊಂದಿಗೆ ಆಟವಾಡುತ್ತಿಲ್ಲ, ಬೆದರಿಕೆ ಒಡ್ಡುತ್ತಿದ್ದಾರೆ, ನಾನು ಹುಡುಗ ಎಂಬ ಕಾರಣಕ್ಕಾಗಿ ಐವರು ಹುಡುಗಿಯರು ನನ್ನನ್ನು ತಮಾಷೆ ಮಾಡುತ್ತಿದ್ದು, ಅವರೊಂದಿಗೆ ಲೂಡೋ, ಶಟಲ್, ಕಳ್ಳ-ಪೊಲೀಸ್ ಆಡಲು ಅವಕಾಶ ನೀಡುತ್ತಿಲ್ಲ. ಅವರನ್ನೆಲ್ಲಾ ಅರೆಸ್ಟ್​ ಮಾಡಿ ಎಂದು ಪೊಲೀಸರಿಗೆ ದೂರಿದ್ದಾನೆ!.
ಅಷ್ಟಕ್ಕೂ ಆಗಿದ್ದೇನು ಎಂದರೆ, ಐದು ಮಂದಿಯೂ ಹುಡುಗಿಯರು. ಅವರು ನೀನು ಹುಡುಗ ನಮ್ಮ ಜತೆ ಆಡಲು ಬರಬೇಡ ಎಂದಿದ್ದಾರೆ. ಇದರಿಂದ ಉಮರ್​ಗೆ ವಿಪರೀತ ಕೋಪ ಬಂದಿದೆ. ಅದನ್ನು ಹೋಗಿ ತನ್ನ ಅಪ್ಪನಿಗೆ ತಿಳಿಸಿದ್ದಾನೆ. ಅದನ್ನು ಅವರು ಜೋಕ್​ ಆಗಿ ತೆಗೆದುಕೊಂಡು, “ಹೋಗಿ ಪೊಲೀಸರಿಗೆ ಕಂಪ್ಲೇಂಟ್​ ಬರೆದು ಕೊಡು’ ಎಂದು ನಕ್ಕು ಸುಮ್ಮನಾಗಿದ್ದಾರೆ.
ಇದನ್ನೂ ಓದಿ:ಸ್ವಲ್ಪದರಲ್ಲಿಯೇ ತಪ್ಪಿತು ಚೀನಾದ ಗುರಿ: ಇಲ್ಲದಿದ್ರೆ ನ್ಯೂಯಾರ್ಕ್ ಆಗುತ್ತಿತ್ತೇ ಭಸ್ಮ?
ಈ ಮಾತು ಬಾಲಕನ ತಲೆಯೊಳಗೆ ಹೊಕ್ಕಿಬಿಟ್ಟಿದೆ. ಪೊಲೀಸರಿಗೆ ದೂರು ಕೊಟ್ಟರೆ ತನ್ನ ಜತೆ ಎಲ್ಲರೂ ಆಡಲು ಬರುತ್ತಾರೆ ಎಂದುಕೊಂಡ ಆತ. ಮೂರನೆಯ ಕ್ಲಾಸ್​ನ ಈ ಬಾಲಕ ತನಗೆ ಬರುತ್ತಿದ್ದ ಅಲ್ಪಸ್ವಲ್ಪ ಇಂಗ್ಲಿಷ್​ನಿಂದಲೇ ಬಾಲಕಿಯರ ವಿರುದ್ಧ ದೂರನ್ನೂ ಬರೆದುಬಿಟ್ಟಿದ್ದಾನೆ. ಆದರೆ ಪೊಲೀಸರಿಗೆ ಅದನ್ನು ಹೇಗೆ ಕೊಡುವುದು ಎಂದು ತಿಳಿಯಲಿಲ್ಲ.
ಅದೇ ವೇಳೆ ಅವನ ಮನೆಯ ಹತ್ತಿರ ಏನೋ ಜಗಳವಾಗಿದೆ. ಅದಕ್ಕೆ ಸಂಬಂಧಿಸಿದಂತೆ ಪೊಲೀಸರು ಮನೆಯ ಹತ್ತಿರ ಬಂದಿದ್ದಾರೆ. ಅವರ ಬಳಿ ದೂರಿನ ಪ್ರತಿಯನ್ನು ಈ ಬಾಲಕ ನೀಡಿದ್ದಾನೆ. ಇದು ಮನೆಯವರಿಗೆ ತಿಳಿದೇ ಇರಲಿಲ್ಲ. ಪೊಲೀಸರು ತುಂಬಾ ಬಿಜಿ ಇದ್ದುದರಿಂದ ಹಾಗೂ ಆ ಇನ್ನೊಂದು ಕೇಸ್ ಅನ್ನು ಬಗೆಹರಿಸುವಷ್ಟರಲ್ಲಿ ರಾತ್ರಿಯಾದ್ದರಿಂದ ಬಾಲಕ ಕೊಟ್ಟದ್ದು ಏನು ಎಂದು ನೋಡಿರಲಿಲ್ಲ.
ಇದನ್ನೂ ಓದಿ:ಕರೊನಾ ಗಲಾಟೆ: ಮೇ 17ರಂದು ಇಂಟರ್​ನೆಟ್​ ಸೇವೆ ಸ್ಥಗಿತ
ಮಾರನೆಯ ದಿನ ಅದನ್ನು ಓದಿದಾಗ ಪೊಲೀಸರಿಗೆ ನಗು ತಡೆಯಲಾಗಲಿಲ್ಲ. ಕೂಡಲೇ ಬಾಲಕನ ಮನೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳಾದ ಉಮೇಶ್ ಮತ್ತು ಕೆ.ಟಿ ನಿರಾಜ್ ಈ ಬಗ್ಗೆ ಆತನ ತಂದೆಗೆ ಹೇಳಿದ್ದಾರೆ. ನಂತರ ಬಾಲಕಿಯರನ್ನು ಕರೆದು ಉಮರ್​ನನ್ನು ಆಟಕ್ಕೆ ಸೇರಿಸಿಕೊಳ್ಳುವಂತೆ ಹೇಳಿ ಸಮಸ್ಯೆ ಬಗೆಹರಿಸಿದರು.
ಮಕ್ಕಳಿಗೆ ಏನೇ ತಮಾಷೆಯಾಗಿ ಹೇಳುವ ಮುನ್ನ ಪಾಲಕರು ಒಮ್ಮೆ ಯೋಚನೆ ಮಾಡುವುದು ಒಳಿತು. ಇದೇನೋ ಚಿಕ್ಕ ಸಮಸ್ಯೆ ತಮಾಷೆಯಾಗಿಯೇ ಮುಗಿಯಿತು, ಆದರೆ ಇನ್ನಾವುದೋ ಗಂಭೀರ ಸಮಸ್ಯೆ ಇದ್ದರೆ, ಮಕ್ಕಳು ಅದನ್ನು ಗಂಭೀರವಾಗಿ ತೆಗೆದುಕೊಂಡರೆ ಪರಿಸ್ಥಿತಿ ಕೈಮೀರಿ ಹೋಗಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 − 4 =
Remember me
