ನವದೆಹಲಿ:ದೇಶದಲ್ಲಿ ಸಾಸಿವೆ ಬೀಜಗಳ ಉತ್ಪಾದನೆಯು 2023-24 ಬೆಳೆ ವರ್ಷದಲ್ಲಿ ಕಡಿತವಾಗಲಿದ್ದು, ಉತ್ಪಾದನೆಯು 1.158 ಕೋಟಿ ಟನ್‌ ಆಗಬಹುದು ಎಂದು ಅಂದಾಜಿಸಲಾಗಿದೆ.
ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಎಸ್‌ಇಎ) ಈ ಅಂದಾಜು ಮಾಡಿದೆ. ಕಳೆದ ಮಾರ್ಚ್​ನಲ್ಲಿ ಸಾಸಿವೆ ಬೀಜಗಳ ಉತ್ಪಾದನೆಯ ಅಂದಾಜನ್ನು 1.209 ಕೋಟಿ ಟನ್‌ಗಳಿಗೆ ಅದು ನಿಗದಿಪಡಿಸಿತ್ತು. ಈ ಬೆಳೆಯನ್ನು ಪ್ರಮುಖವಾಗಿ ಬೆಳೆಯುತ್ತಿರುವ ರಾಜ್ಯಗಳ ಮೇಲೆ ಎಲ್ ನಿನೋ ಪ್ರಭಾವದ ಹಿನ್ನೆಲೆಯಲ್ಲಿ ಉತ್ಪಾದನೆ ಕುಸಿತ ಕಾಣಲಿದೆ ಎಂದು ಅದು ಹೇಳಿದೆ.
ಇಳಿಕೆಯ ಪರಿಷ್ಕರಣೆ ಹೊರತಾಗಿಯೂ, ಉತ್ಪಾದನೆಯು ಕಳೆದ ವರ್ಷದ 111.8 ಕೋಟಿ ಟನ್‌ಗಳನ್ನು ಮೀರುವ ನಿರೀಕ್ಷೆಯಿದೆ ಎಂದು ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ ನಿನೊ ವಿದ್ಯಮಾನವು ಸುಡುವ ಶಾಖದ ಅಲೆಗಳು ಮತ್ತು ಪಕ್ವತೆಯ ಹಂತದಲ್ಲಿ ಮಣ್ಣಿನ ತೇವಾಂಶದಲ್ಲಿ ತೀವ್ರ ಇಳಿಕೆಯಿಂದ ಗುರುತಿಸಲ್ಪಟ್ಟಿದೆ. ಇದು ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಇಳುವರಿ ನಷ್ಟಕ್ಕೆ ಕಾರಣವಾಗಲಿದೆ.
ರಾಜಸ್ಥಾನದಲ್ಲಿ ಸಾಸಿವೆ ಬೀಜಗಳ ಉತ್ಪಾದನೆಯು 2023-24 ಬೆಳೆ ವರ್ಷದಲ್ಲಿ (ಜುಲೈ-ಜೂನ್) 45.3 ಲಕ್ಷ ಟನ್‌ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಿಂದಿನ ಅಂದಾಜು 46.1 ಲಕ್ಷ ಟನ್‌ ಇತ್ತು. ಇದೇ ರೀತಿ, ಉತ್ಪಾದನೆಯು ಉತ್ತರ ಪ್ರದೇಶದಲ್ಲಿ 17.9 ಲಕ್ಷ ಟನ್, ಮಧ್ಯಪ್ರದೇಶದಲ್ಲಿ 16 ಲಕ್ಷ ಟನ್ ಮತ್ತು ಹರಿಯಾಣದಲ್ಲಿ 11.7 ಲಕ್ಷ ಟನ್ ಆಗುವ ನಿರೀಕ್ಷೆಯಿದೆ ಎಂದು ಎಸ್‌ಇಎ ತಿಳಿಸಿದೆ.
ಸಾಸಿವೆ ಬೀಜಗಳನ್ನು ಬೆಳೆಯುವ ಪ್ರದೇಶವು ಈ ವರ್ಷ 1.006 ಕೋಟಿ ಹೆಕ್ಟೇರ್‌ ತಲುಪಿದ್ದು, ಶೇ. 5ರಷ್ಟು ಏರಿಕೆಯಾಗಿದೆ, ಆದರೆ, ಇಳುವರಿಯು ಕಳೆದ ವರ್ಷದ ಹೆಕ್ಟೇರ್‌ಗೆ 1,168 ಕೆಜಿಯಿಂದ 1,151 ಕೆಜಿಗೆ ಇಳಿಯುವ ನಿರೀಕ್ಷೆಯಿದೆ.
ಹೆಲ್ಮೆಟ್​ ಮೇಲೆಯೂ ವಿಧಿಸಲಾಗುತ್ತಿದೆ 18% ಜಿಎಸ್​ಟಿ: ಜೀವ ಉಳಿಸುವ ಸಾಧನಕ್ಕೆ ತೆರಿಗೆ ತೆಗೆದುಹಾಕಲು ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − four =
Remember me
