ಭೋಪಾಲ್​:ತಂಗಿಯನ್ನು ಮೊದಲು ಮಾದಕ ವ್ಯಸನಿಯನ್ನಾಗಿ ಮಾಡಿದ ಬಳಿಕ ಸುಮಾರು ಎರಡು ವರ್ಷಗಳ ಆಕೆಯನ್ನು ಅಕ್ಕನೇ ನಿರಂತರ ಅತ್ಯಾಚಾರ ಮಾಡಿರುವ ಆತಂಕಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಬೆಳಕಿಗೆ ಬಂದಿದೆ.
ಇಂದೋರ್​ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ 20 ವರ್ಷದ ಯುವತಿ ತನ್ನ 15 ವರ್ಷದ ತಂಗಿಯನ್ನು ಮೊದಲು ಮಾದಕ ವ್ಯಸನಿ​ಯನ್ನಾಗಿ ಮಾಡಿದ್ದಾಳೆ. ಬಳಿಕ ಸುಮಾರು ಎರಡು ವರ್ಷಗಳ ಕಾಲ ಆಕೆಯ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಾಳೆ. ಅಲ್ಲದೆ, ಆಕೆಯನ್ನು 6 ಮಿಲಿಯನೇರ್​ ಬಳಿಯು ಕಳುಹಿಸುವ ಮೂಲಕ ವಿಕೃತಿಯನ್ನು ಮೆರೆದಿದ್ದಾಳೆ.
ಇದನ್ನೂ ಓದಿ:ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಗ್ರಾ.ಪಂ ಚುನಾವಣೆಗೆ ನಿರ್ಗತಿಕ ವ್ಯಕ್ತಿಯನ್ನು ಅಖಾಡಕ್ಕಿಳಿಸಿದ ಯುವಕರು!
ಈ ಸಂಬಂಧ ಭೋಪಾಲ್​ನ ಗಾಂಧಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ಬಾಲಕಿಗೆ ಕಳೆದ 2 ತಿಂಗಳಿಂದ ಆಪ್ತ ಸಮಾಲೋಚನೆಯನ್ನು ಕೊಡಿಸಲಾಗಿದೆ. ಸಂತ್ರಸ್ತೆಯು 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಲ್ಕೋಹಾಲ್​ ಮತ್ತು ಡ್ರಗ್ಸ್​ ಇಲ್ಲದೇ ಕೇವಲ 24 ಗಂಟೆಯನ್ನು ವ್ಯಯಿಸಲಾಗದಷ್ಟು ಮಾದಕ ವ್ಯಸನಿಯಾಗಿದ್ದಾಳೆ. ಆಕೆಯ ತಂದೆ ಮುಂಬೈನಲ್ಲಿ ವ್ಯವಹಾರಸ್ಥರಾಗಿದ್ದಾರೆ, ತಾಯಿ ಪಾರ್ಟ್​ ಟೈಮ್​ ಕೆಲಸ ಮಾಡುತ್ತಾರೆ.
ಪ್ರಕರಣ ಸಂಬಂಧ ಸಂತ್ರಸ್ತೆಯ ಅಕ್ಕನನ್ನು ಬಂಧಿಸಲಾಗಿದೆ. ಅಲ್ಲದೆ, ಈ ಜಾಲದಲ್ಲಿ ತೊಡಗಿಕೊಂಡಿರುವ ನಾಲ್ವರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ಹೆಸರನ್ನು ಪೊಲೀಸರು ಬಹಿರಂಗಗೊಳಿಸಿಲ್ಲ.
ನಡೆದ ಘಟನೆಯ ಬಗ್ಗೆ ಮಾತನಾಡಿರುವ ಸಂತ್ರಸ್ತೆ, ಮೊಬೈಲ್​ನಲ್ಲಿ ಹಾಡು ಹಾಡಬೇಕೆಂದು ಹೇಳಿ ಎರಡು ವರ್ಷಗಳ ಹಿಂದೆ ನನ್ನ ಅಕ್ಕ ಮನೆಯ ಟೆರೆಸ್​ ಮೇಲೆ ಕರೆದೊಯ್ದಳು. ಇದಾದ ಬಳಿಕ ಸಿಗರೇಟ್​ ಹೊರತೆಗೆದು ಸೇಯಲು ಆರಂಭಿಸಿದಳು. ಇದೇ ವೇಳೆ ಬೇಡವೆಂದರೂ ಬಿಡದೆ ನನಗೂ ಅಭ್ಯಾಸ ಮಾಡಿಸಿದಳು. ಬಳಿಕ ಗಾಂಜಾ ಸೇದುವುದನ್ನು ರೂಢಿ ಮಾಡಿಸಿದಳು. ಅಲ್ಲಿಂದಾಚೆಗೆ ಮದ್ಯಪಾನ ಮತ್ತು ಡ್ರಗ್ಸ್ ಸರಪಳಿ ಆರಂಭವಾಯಿತು. ನಾನು ಮತ್ತಿನಲ್ಲಿರುವಾಗ ನನ್ನ ಬಳಸಿಕೊಳ್ಳುತ್ತಿದ್ದಲ್ಲದೆ, ಬೇರೆಯವರಿಗೆ ನನ್ನನ್ನು ಪೂರೈಕೆ ಮಾಡುತ್ತಿದ್ದಳು ಎಂದು ಕರಾಳ ಘಟನೆಯನ್ನು ವಿವರಿಸಿದ್ದಾಳೆ.(ಏಜೆನ್ಸೀಸ್​)​
ಇದನ್ನೂ ಓದಿ:ವಾಟ್ಸ್​ಆ್ಯಪ್​ ಮೆಸೇಜ್​ ಹಾಕಿ ಯುವತಿ ಸಾವು; ಸೀಮೆಎಣ್ಣೆ ಕ್ಯಾನ್​ ಕೊಟ್ಟ ಕೊಲೆಯ ಸುಳಿವು!
400 ವರ್ಷಗಳ ಬಳಿಕ ಆಗಸದಲ್ಲಿ ಇಂದು ಕೌತುಕ- ನೀವೂ ಕಣ್ತುಂಬಿಸಿಕೊಳ್ಳಬಹುದು ಈ ‘ಮಹಾ ಸಂಯೋಗ’

ಐದೇ ದಿನದಲ್ಲಿ ಎರಡು ಮದುವೆಯಾಗಿ ಟೆಕ್ಕಿ ಪರಾರಿ: ರಹಸ್ಯ ಮದ್ವೆ ಬಯಲಾದ ಕತೆಯೇ ರೋಚಕ!

ಶೌಚಕ್ಕೆಂದು ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿ ದುರಂತ ಸಾವು: ಸರ್ಕಾರಕ್ಕೆ ಆಯೋಗದ ಶಾಕ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 18 =
Remember me
