ಮುಂಬೈ:ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಅತ್ಯಂತ ಅಮಾನವೀಯ ಘಟನೆ ನಡೆದಿದೆ. 50 ವರ್ಷದ ಮಹಿಳೆಯನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಆಕೆಯನ್ನು ಸೆರೆ ಹಿಡಿದವರು ಯಾರು ಎಂಬುದು ತಿಳಿದಿಲ್ಲ. ಆದರೆ ಕಾಡಿನಲ್ಲಿದ್ದ ದನಗಾಹಿಯೊಬ್ಬ ಆಕೆಯ ಕೂಗು ಕೇಳಿ ಹತ್ತಿರ ಹೋಗಿ ಬೆಚ್ಚಿಬಿದ್ದಿದ್ದಾನೆ.
ಇದನ್ನೂ ಓದಿ:ಬೇವಿನ ಮರದಿಂದ ಜಿನುಗುತ್ತಿದೆ ಲೀಟರ್ ಗಟ್ಟಲೆ ಹಾಲು..ಕೌತುಕ ಕಣ್ತುಂಬಿಕೊಳ್ಳಲು ಹರಿದು ಬಂತು ಭಕ್ತಸಾಗರ!
ಮುಂಬೈ ಮಹಾನಗರದಿಂದ 450 ಕಿ.ಮೀ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ಆಕೆಯನ್ನು ದನಗಾಹಿ ಕಂಡಿದ್ದಾನೆ. ಕೂಡಲೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಅಲ್ಲಿಗೆ ತಲುಪಿದಾಗ ಆಕೆ ಬಳಲಿದ್ದು, ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಆಕೆಯ ಪ್ರಾಣಕ್ಕೆ ಅಪಾಯವಿಲ್ಲ ಎಂದು ತಿಳಿದುಬಂದಿದೆ.
ಆಕೆಯ ಬಳಿ ಅಮೆರಿಕಾದ ಪಾಸ್‌ಪೋರ್ಟ್‌ ನಕಲು ಪ್ರತಿ ಮತ್ತು ತಮಿಳುನಾಡು ವಿಳಾಸದ ಆಧಾರ್ ಕಾರ್ಡ್ ಇರುವುದು ಪತ್ತೆಯಾಗಿದೆ. ಈ ಎರಡು ದಾಖಲೆಗಳ ಆಧಾರದ ಮೇಲೆ ಆಕೆಯ ಗುರುತನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಲಭ್ಯವಿರುವ ದಾಖಲೆಗಳ ಪ್ರಕಾರ, ಆಕೆ ‘ಲಲಿತಾ ಬಾಯಿ’ ಎಂದು ಗುರುತಿಸಲಾಗಿದೆ. ಆಕೆಯ ವೀಸಾ ಅವಧಿ ಮುಗಿದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆಕೆ 10 ವರ್ಷದಿಂದ ಭಾರತದಲ್ಲಿ ನೆಲೆಸಿದ್ದು, ಸದ್ಯ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಕೆಲವು ದಿನಗಳಿಂದ ಊಟವಿಲ್ಲದೆ ನಿತ್ರಾಣಳಾಗಿದ್ದಾಳೆ. ಆಕೆಯನ್ನು ಕಟ್ಟಿಹಾಕಿದ್ದ ಕಡೆ ಜೋರು ಮಳೆಯಾಗುತ್ತದೆ. ಆಕೆಯನ್ನು ಬಂಧಿಸಿ ಎಷ್ಟು ದಿನವಾಗಿದೆ? ಕಾರಣವೇನು ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ವಿಶೇಷ ಪೊಲೀಸ್ ತಂಡಗಳು ತಮಿಳುನಾಡು, ಗೋವಾ ಮತ್ತಿತರ ಕಡೆ ಪರಿಶೀಲಿಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಹ್ಲಿ ಹೀಗೆ ಮಾಡಿದ್ದು ಇಷ್ಟವಾಗಲಿಲ್ಲ.. ಬೆಡ್​ರೂಮ್ ಸೀಕ್ರೆಟ್ ಬಿಚ್ಚಿಟ್ಟ ಅನುಷ್ಕಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
