ಜೈಪುರ:ಅಜ್ಜ ಎಂದರೆ ಹೇಗಿರಬೇಕು? ಮೊಮ್ಮಕ್ಕಳಿಗೆ ಕಥೆ ಹೇಳಿಕೊಂಡು, ಅವರ ಸಂತೋಷವನ್ನು ನೋಡುತ್ತಾ ಕಾಲ ಕಳೆಯಬೇಕು ಎನ್ನುವುದು ಸಾಮಾನ್ಯರ ಕಲ್ಪನೆ. ಆದರೆ ಈ ಅಜ್ಜ ಹಾಗಲ್ಲ. ಹೆಂಡತಿ ಇಲ್ಲದ ನನಗೆ ಎರಡನೇ ಮದುವೆ ಮಾಡಿ ಎಂದು ಹಠ ಬಿದ್ದ ಅಜ್ಜ, ಅದನ್ನು ಮಕ್ಕಳು ಕೇಳದಿದ್ದಾಗ ಎಲೆಕ್ಟ್ರಿಕ್​ ಕಂಬವನ್ನೇ ಹತ್ತಿ ಕುಳಿತುಬಿಟ್ಟಿದ್ದಾನೆ.
ಇಂತದ್ದೊಂದು ವಿಚಿತ್ರ ಘಟನೆ ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ನಡೆದಿದೆ. 60 ವರ್ಷದ ಸೊಬ್ರಾನ್ ಸಿಂಗ್​ನ ಹೆಂಡತಿ ನಾಲ್ಕು ವರ್ಷಗಳ ಹಿಂದೆ ಅಸು ನೀಗಿದ್ದಾಳೆ. ಅವರಿಗೆ ಮೂರು ಗಂಡು ಮಕ್ಕಳು ಮತ್ತಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಮೊಮ್ಮಕ್ಕಳೊಂದಿಗೆ ನೆಮ್ಮದಿಯಾಗಿದ್ದ ಸೊಬ್ರಾನ್​ಗೆ ಇತ್ತೀಚೆಗೆ ಎರಡನೇ ಮದುವೆ ಹುಚ್ಚು ಆರಂಭವಾಗಿದೆ. ನನಗೆ ಎರಡನೇ ಮದುವೆ ಮಾಡಿ ಎಂದು ಮಕ್ಕಳಲ್ಲಿ ಕೇಳಿದ್ದಾನೆ. ಆದರೆ ಅದಕ್ಕೆ ಮಕ್ಕಳು ಒಪ್ಪಿಲ್ಲ.
ಅದೇ ವಿಚಾರವಾಗಿ ಭಾನುವಾರದಂದು ಮನೆಯಲ್ಲಿ ಜಗಳವಾಗಿದೆ. ಎರಡನೇ ಮದುವೆಯಾಗಲೇಬೇಕೆಂದು ಸೊಬ್ರಾನ್​ ಪಟ್ಟು ಹಿಡಿದಿದ್ದರೆ ಅದು ಸಾಧ್ಯವೇ ಇಲ್ಲ ಎಂದು ಮಕ್ಕಳು ವಾದಿಸಿದ್ದಾರೆ. ಸಿಟ್ಟಿನಿಂದ ಮನೆಯಿಂದ ಹೊರನಡೆದ ಸೊಬ್ರಾನ್​ ಹಳ್ಳಿಯಲ್ಲಿದ್ದ 11 ಸಾವಿರ ವೋಲ್ಟೇಜ್​ನ ಎಲೆಕ್ಟ್ರಿಕ್​ ಕಂಬವನ್ನು ಹತ್ತಿ ಕುಳಿತಿದ್ದಾನೆ. ಅದೃಷ್ಟವಶಾತ್​ ಆ ಸಮಯದಲ್ಲಿ ಅದರಲ್ಲಿ ವಿದ್ಯುತ್​ ಇಲ್ಲದ ಕಾರಣ ಆತನಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹತ್ತಿರದ ವಿದ್ಯುತ್​ ಸಂಸ್ಥೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ವಿದ್ಯುತ್​ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ.
ಸಾಕಷ್ಟು ಸಮಯದ ಕಾಲ ಮಕ್ಕಳು ಮತ್ತು ಗ್ರಾಮಸ್ಥರು ಸಮಾಧಾನ ಮಾಡಿದ ನಂತರ ಸೊಬ್ರಾನ್​ ಎಲೆಕ್ಟ್ರಿಕ್​ ಕಂಬದಿಂದ ಕೆಳಗಿಳಿದಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​)
ಮಕ್ಕಳಿಗೆ ಮದುವೆಯಾಗಿ ಮೊಮ್ಮಕ್ಕಳಾಗಿದ್ದಾರೆ.. ಈಗ ನನಗೆ ಎರಡನೇ ಮದುವೆಯಾಗಲೇ ಬೇಕು ಎಂದು ವಿದ್ಯುತ್​ ಕಂಬವೇರಿ ಕುಳಿತ 60ರ ವೃದ್ಧ! ಆಮೇಲೇನಾಯಿತು ಎಂದು ತಿಳಿದುಕೊಳ್ಳಲುhttps://t.co/JCps2efeGVನೋಡಿ..#Rajasthanpic.twitter.com/jROzdWDXMo
— Vijayavani (@VVani4U)March 10, 2021

ನಾಳೆ ಬಾಡೂಟ ಮಾಡುವ ಪ್ಲಾನ್​ ಹಾಕಿದವರಿಗೆ ಶಾಕ್​ ಕೊಟ್ಟ ಬಿಬಿಎಂಪಿ!

ಅಭಿಮಾನಿಗೆ ಎಸಿ ಸರ್ವೀಸ್​ ಫ್ರೀ ! ಇದು ಹೃತಿಕ್ ರೋಶನ್​ ಜಾದೂ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 20 =
Remember me
