ಮುಂಬೈ:ಎರಡು ದೊಡ್ಡ ಪ್ಲಾಸ್ಟಿಕ್​ ಬಾಕ್ಸ್​ನಲ್ಲಿ ಗೋಮಾಂಸವನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಅನುಮಾನಿಸಿ ವೃದ್ಧರೊಬ್ಬರಿಗೆ ರೈಲಿನಲ್ಲಿ ಕಪಾಳಮೋಕ್ಷ ಮಾಡಿ ಬಳಿಕ ಬಟ್ಟೆ ಬಿಚ್ಚುವಂತೆ ಧಮ್ಕಿ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಮಾತು ಮಾತಿಗೆ ಅವರಿದೆ ಹೊಡೆಯುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ:ಗೋಮಾಂಸ ತಿಂದ ಶಂಕೆಯಲ್ಲಿ ವ್ಯಕ್ತಿ ಹತ್ಯೆ! ಆರೋಪಿಗಳ ವಿರುದ್ಧ ಪೊಲೀಸರು ಕೈಗೊಂಡ ಕ್ರಮ ಹೀಗಿದೆ.
ವೈರಲ್​ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರುನ್ನು 12 ಜನರಿರುವ ಗುಂಪೊಂದು ಬೆದರಿಸಿ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಸಂತ್ರಸ್ತರನ್ನು ಜಲಗಾಂವ್​ ಜಿಲ್ಲೆಯ ನಿವಾಸಿ ಅಶ್ರಫ್ ಮುನ್ಯಾರ್ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ರೈಲಿನಲ್ಲಿದ್ದ ಗುಂಪು ವೃದ್ಧರನ್ನು ವಿಚಾರಣೆ ನಡೆಸಿ ಏನನ್ನು ಸಾಗಿಸುತ್ತಿದ್ದೀರಿ? ನೀವು ಎಲ್ಲಿಗೆ ಹೋಗುತ್ತಿದ್ದೀರಿ? ನೀವು ಎಲ್ಲಿಂದ ಬಂದಿದ್ದು ಎಂದು ಕೇಳುತ್ತಾ ಮುಖಕ್ಕೆ ಹೊಡೆಯುತ್ತಿದ್ದಾರೆ. ಆ ಹಿರಿಯ ವ್ಯಕ್ತಿ ತನ್ನ ಮಗಳ ಕುಟುಂಬಕ್ಕೆ ಮಾಂಸವನ್ನು ಕೊಂಡೊಯ್ಯತ್ತಿದ್ದೇನೆ ಎಂದು ಭಯದಿಂದಲೇ ಉತ್ತರಿಸಿದ್ದಾರೆ.
ಮಾಲೆಗಾಂವ್​ನಲ್ಲಿರುವ ಮಗಳ ಮನೆಗೆ ಹೋಗಲು ಧುಲೆ ಎಕ್ಸ್​​ಪ್ರೆಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಾಂಸದ ಬಗ್ಗೆ ಪ್ರಶ್ನಿಸಿದವರು ಅಶ್ರಫ್ ಉತ್ತರಿಸಿದ್ದನ್ನು ಒಬ್ಬ ಫೋನ್​ನಲ್ಲಿ ರೆಕಾರ್ಡ್​ ಮಾಡುತ್ತಿದ್ದಾನೆ. ಬಳಿಕ ತಾನು ಎಮ್ಮೆ ಮಾಂಸವನ್ನು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾರೆ. ಅದಕ್ಕೆ ಅದರಲ್ಲೊಬ್ಬ, ನಾವು ಅದನ್ನು ಪರೀಕ್ಷಿಸಿದ ನಂತರ ಅದರ ಬಗ್ಗೆ (ಮಾಂಸದ ಪ್ರಕಾರ) ತಿಳಿಯುತ್ತೇವೆ ಎಂದರೆ, ಮತ್ತೊಬ್ಬ ಶ್ರಾವಣ ಮಾಸವನ್ನು ಹಿಂದುಗಳ ಅತ್ಯಂತ ಪವಿತ್ರ ತಿಂಗಳುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತೆ. ನಾವು ಹಬ್ಬ ಮಾಡುತ್ತಿದ್ದರೆ ನೀವು ಇದನ್ನು ಮಾಡುತ್ತಿದ್ದೀರಿ ಎಂದು ಹೇಳಿ ಥಳಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Haji Ashraf Munyar from a village in Jalgaon District travelling in a train to Kalyan to meet his daughter was abused and badly beaten up by goons in a train near Igatpuri alleging him of carrying beef.pic.twitter.com/2Po0aLNw1g
ಅಸಲಿಗೆ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯಿದೆ 1976ರ ಪ್ರಕಾರ ಗೋವುಗಳು, ಹೋರಿಗಳ ಹತ್ಯೆಯನ್ನು ನಿಷೇಧಿಸಲಾಗಿದೆ ಆದರೆ ಈ ನಿಷೇಧದ ವ್ಯಾಪ್ತಿಗೆ ಎಮ್ಮೆಗಳು ಬರುವುದಿಲ್ಲ ಎಂದು ಹೇಳುತ್ತಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಸರ್ಕಾರಿ ರೈಲ್ವೆ ಪೊಲೀಸರು (GRP) ಅಶ್ರಫ್ ಅವರನ್ನು ಭೇಟಿ ಮಾಡಿದ್ದಾರೆ. ಆರಂಭದಲ್ಲಿ ದೂರು ನೀಡಲು ಅಶ್ರಫ್ ನಿರಾಕರಿಸಿದ್ದಾರೆ
ಬಳಿಕ ಈ ವಿಷಯದಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಅಶ್ರಫ್​ ಅವರಿಗೆ ಥಳಿಸಿದೆ ಪ್ರಯಾಣಿಕರಿಗಾಗಿ ರೈಲ್ವೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಧುಲೆ ನಿವಾಸಿಗಳಾಗಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಒಂದು ತಂಡವನ್ನು ಅವರನ್ನು ಪತ್ತೆಹಚ್ಚಲು ಧುಲೆಗೆ ಕಳುಹಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಇನ್ನು ವಿಚಾರಕ್ಕೆ ಸಂಬಂಧಿಸಿದಂತೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕ ಜಿತೇಂದ್ರ ಅವದ್ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ದೂಷಿಸಿದ್ದಾರೆ. ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಭಾವಿಸಿ ಕೆಲವು ಯುವಕರು ಹಿರಿಯ ವ್ಯಕ್ತಿಯೊಬ್ಬರನ್ನು ಥಳಿಸಿದ್ದಾರೆ. ಇದು ಮಹಾರಾಷ್ಟ್ರ ಅಲ್ಲ, ಇದು ನಮ್ಮ ಸಂಸ್ಕೃತಿ ಅಲ್ಲ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್​​)
ನಡುರಸ್ತೆಯಲ್ಲಿ ವೃದ್ಧದಂಪತಿಯನ್ನು ಯಾಮಾರಿಸಿ ಚಿನ್ನ ಕದ್ದ ಖದೀಮ; ವಿಡಿಯೋ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − four =
Remember me
