ನವದೆಹಲಿ:ಪ್ರತಿಬಾರಿ ಒಂದಲ್ಲ ಒಂದು ವಿಚಾರಗಳಿಂದ ದೆಹಲಿ ಮೆಟ್ರೋ ವ್ಯಾಪಕವಾಗಿ ಸುದ್ದಿಯಲ್ಲಿರುತ್ತದೆ. ಈ ಸಂಗತಿ ನೆಟ್ಟಿಗರಿಗೆ ಮತ್ತು ದೆಹಲಿ ಮೆಟ್ರೋ ಪ್ರಯಾಣಿಕರಿಗೆ ತೀರ ಸಾಮಾನ್ಯ ವಿಷಯವಾಗಿ ಪರಿವರ್ತಿಸಿದೆ. ಇದೀಗ ಮತ್ತೊಂದು ವೈರಲ್​ ವಿಡಿಯೋ ಮೂಲಕ ಡಿಎಂಆರ್​ಸಿ ಸುದ್ದಿಗೆ ಬಂದಿದ್ದು, ವೃದ್ಧರೊಬ್ಬರು ಬೀಡಿ ಸೇದುತ್ತಿರುವ ದೃಶ್ಯವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ಜನತಾ ದರ್ಶನದಲ್ಲಿ 250 ಸಮಸ್ಯೆ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ ಸಚಿವ ಪ್ರಿಯಾಂಕ್ ಖರ್ಗೆ
ಸಾಕಷ್ಟು ಪ್ರಯಾಣಿಕರಿಂದ ತುಂಬಿದ್ದ ದೆಹಲಿ ಮೆಟ್ರೋ ಒಳಗೆ ವೃದ್ಧರೊಬ್ಬರು ಜೇಬಿನಿಂದ ತೆಗೆದ ಬೀಡಿಗೆ ಬೆಂಕಿ ಹಚ್ಚಿ ಸೇದುತ್ತಿರುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ನಡೆದ ನಿಖರವಾದ ದಿನಾಂಕ ಮತ್ತು ಸ್ಥಳದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
दिल्ली मेट्रो में खुल्लम खुल्ला किसिंग के बीच अब… बीड़ी का स्वैग#DelhiMetropic.twitter.com/HDJk1rzl8b
— Manish Pandey (@joinmanishpande)September 25, 2023

ವಯೋವೃದ್ಧರು ತಮ್ಮ ಜೇಬಿನಿಂದ ಬೀಡಿಯನ್ನು ಹಚ್ಚಿಕೊಂಡು, ಸಾರ್ವಜನಿಕರಿದ್ದ ಮೆಟ್ರೋದೊಳಗೆ ಹೊಗೆ ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಇತರ ಸಹ ಪ್ರಯಾಣಿಕರು, ವ್ಯಕ್ತಿಗೆ ಈ ರೀತಿ ಮಾಡದಂತೆ ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವೃದ್ಧ, ನನ್ನ ಬಳಿ ಟಿಕೆಟ್ ಇದೆ ಎಂದು ಉತ್ತರಿಸಿದ್ದಾರೆ ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿದೆ.
ಇದನ್ನೂ ಓದಿ:ಬಲವಂತವಾಗಿ ಬಂದ್‌ ಮಾಡಿಸಿದರೆ ಕಠಿಣ ಕ್ರಮ: ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌
ವಿಡಿಯೋ ವೈರಲ್​ ಆಗುತ್ತಿದ್ದಂತೆ ಅನೇಕರು ದೆಹಲಿ ಮೆಟ್ರೋ ರೈಲು ನಿಗಮ ಮತ್ತು ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಘಟನೆಗೆ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ಡಿಎಂಆರ್‌ಸಿ ಮತ್ತು ಇತರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಮುಂದಾಗಿಲ್ಲ,(ಏಜೆನ್ಸೀಸ್).
ICC ವಿಶ್ವಕಪ್ 2023: ಭಾರತ ಪ್ರಯಾಣಕ್ಕೆ ವೀಸಾ ಪಡೆದ ಪಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 4 =
Remember me
