ನವದೆಹಲಿ:ಬಿಹಾರ ವಿಧಾನಸಭೆಯ ಮೂರನೇ ಮತ್ತು ಕೊನೆಯ ಹಂತದ ಮತದಾನ ಚಾಲ್ತಿಯಲ್ಲಿರುವಾಗಲೇ ಬಿಜೆಪಿಯ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಮಾಡಿರುವ ಟ್ವೀಟ್ ದೇಶದ ಗಮನಸೆಳೆದಿದೆ. ಜೆಡಿಯುಗೆ ಮತ ಚಲಾಯಿಸಿದ ವಯೋವೃದ್ಧನೋರ್ವನಿಗೆ ಆರ್​ಜೆಡಿ ಬೆಂಬಲಿಗರು ಥಳಿಸಿದ್ದು, ಆತ ಅಳಲು ತೋಡಿಕೊಂಡಿರುವ ವಿಡಿಯೋ ಇದಾಗಿದೆ.
ವಯೋವೃದ್ಧನ ಹೆಸರು ಗಜೇಂದ್ರ ಸಾ. ಬರ್​ಗಾಂವ್ ಗ್ರಾಮ ಪಂಚಾಯಿತಿಯ ಭವಾನಿಪುರದ ನಿವಾಸಿ. ಆತ ವಿಡಿಯೋದಲ್ಲಿ ಹೇಳಿರುವುದಿಷ್ಟು- ಬರ್​ಗಾಂವ್ ಚೌಕ್​ನಿಂದ ಮನೆ ಕಡೆಗೆ ಹೋಗುತ್ತಿದ್ದಾಗ ಎದುರಾದ ಆರ್​ಜೆಡಿ ಬೆಂಬಲಿಗರು ಯಾರಿಗೆ ನಿಮ್ಮ ಮತ ಎಂದು ಕೇಳಿದ್ದಾರೆ. ನಾನು ಬಾಣದ ಗುರುತಿನವನು. ಅದಕ್ಕೇ ನನ್ನ ಮತ ಎಂದು ಹೇಳಿದ್ದೇ ತಡ, ಅವಾಚ್ಯ ಶಬ್ದಗಳಿಂದ ಬೈಯುತ್ತ ಲಾಟನ್​ಗೆ ಯಾಕೆ ಮತ ಹಾಕಲ್ಲ ನೀನು ಎಂದು ಥಳಿಸಿದ್ರು ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:ಬಿಹಾರ ಚುನಾವಣೆ: ಮೂರನೇ ಮತ್ತು ಕೊನೆಯ ಹಂತದ ಮತದಾನ ಇಂದು
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಅಮಿತ್ ಮಾಳವೀಯ, ಈ ವಿಡಿಯೋ ಮಧೇಪುರದಿಂದ ಲಭ್ಯವಾಗಿದೆ. ಆರ್​ಜೆಡಿ ಬೆಂಬಲಿಗರು ವಯೋವೃದ್ಧರ ಮೇಲೆ ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ಆರ್​ಜೆಡಿ ಅಂದರೆ ಗೂಂಡಾ ರಾಜ್ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)
ये विडीओ मधेपुरा का है जहां तीर (जेडीयू) पर वोट देने की बात कही तो आरजेडी समर्थकों ने बुजुर्ग की पिटाई कर दी…
आरजेडी मतलब बिहार में गुंडाराज।#JeetegaNDApic.twitter.com/oIupU8cNWh
— Amit Malviya (@amitmalviya)November 7, 2020

ಕೇರಳ ಸಚಿವ ಕೆ.ಟಿ.ಜಲೀಲ್​ಗೆ ಕಸ್ಟಮ್ಸ್ ನೋಟಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
