ಕೋಲ್ಕತ:ರಾತ್ರಿ ಸುಮಾರು 9 ಗಂಟೆಯ ಸಮಯ. ಇದ್ದಕ್ಕಿದ್ದಂತೆಯೇ ಮಳೆಯ ಅಬ್ಬರ. ಕ್ಷಣ ಮಾತ್ರದಲ್ಲಿ ಎಲ್ಲೆಲ್ಲೂ ನೀರೇ ನೀರು. ಕಣ್ಣು ಹಾಯಿಸಿದಷ್ಟೂ ದೂರ ಪ್ರವಾಹ. ನದಿ ಉಕ್ಕಿ ಹರಿದು ರೌದ್ರನರ್ತನ ತೋರುತ್ತಿದೆ. ಸಾವೇ ಬಾಯಿಗೆ ಬಂದ ಅನುಭವ. ನಿಂತ ನೆಲವೇ ಬಿರಿಯುತ್ತಿದೆ, ಮನೆಯ ಸೂರೂ ಕಣ್ಮುಂದೆಯೇ ಕುಸಿಯುತ್ತಿದೆ, ಎಲ್ಲೆಲ್ಲೂ ಆರ್ತನಾದ…
ಹೌದು. ಇದು ಕಳೆದ ಬುಧವಾರ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಜನರಿಗೆ ಆದ ಅನುಭವ. ಅಂಫಾನ್​ ಚಂಡಮಾರುತಕ್ಕೆ ಈ ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿತ್ತು. ಸಾವು-ನೋವುಗಳಿಗೆ ಲೆಕ್ಕವಿಲ್ಲ. ಇಂಥ ಪರಿಸ್ಥಿತಿಯಲ್ಲಿ ವೃದ್ಧೆಯೊಬ್ಬರು ಮರವೇರಿ ಪವಾಡಸದೃಶವಾಗಿ ಬದುಕಿ ಬಂದಿದ್ದಾರೆ.
ಇದನ್ನೂ ಓದಿ:ದಿಲ್ಲಿಯಿಂದ ಬೆಂಗಳೂರಿಗೆ ಒಬ್ಬನೇ ಬಂದ ಐದರ ಪೋರ!
ಕೂದಲೆಳೆ ಅಂತರದಲ್ಲಿ ಸಾವಿನ ಬಾಯಿಯಿಂದ ಬದುಕಿ ಬಂದಿರುವ ಈ ವೃದ್ಧೆಯ ಹೆಸರು ಅಂಜಲಿ ಬೈದ್ಯ. ಬೈನಾರ ಗ್ರಾಮದಲ್ಲಿ ಗುಡಿಸಲಿನಲ್ಲಿ ಪತಿ ನಿರಂಜನ್​ ಜತೆ ವಾಸವಾಗಿದ್ದ ಇವರು ತಮ್ಮ ಭಯಾನಕ ಅನುಭವವನ್ನು ಈ ರೀತಿ ಬಿಚ್ಚಿಟ್ಟಿದ್ದಾರೆ.
“ನಾವು ವಾಸಿಸುತ್ತಿದ್ದ ಗುಡಿಸಿನ ಅಕ್ಕಪಕ್ಕ ನದಿ ಉಕ್ಕಿ ಹರಿಯುತ್ತಿತ್ತು. ಚಂಡಮಾರುತದ ಬಗ್ಗೆ ಮೊದಲೇ ಕೇಳಿ ತಿಳಿದುಕೊಂಡಿದ್ದರೂ ಈ ಪರಿಯಲ್ಲಿ ಆಗುತ್ತದೆ ಎನ್ನುವ ಅರಿವೇ ಇರಲಿಲ್ಲ. ಕೊಟ್ಟಿಗೆಯಲ್ಲಿ ಹಸುಗಳು ಆರ್ತನಾದ ಮಾಡುತ್ತಿದ್ದವು. ಅವುಗಳನ್ನು ಬಿಚ್ಚಿ ಬಂದೆವು. ಅದಾಗಲೇ ಕಣ್ಣೆದುರೇ ಗುಡಿಸಲು ಕೊಚ್ಚಿ ಹೋಯಿತು. ನನ್ನ ಪ್ರಾಣವೇ ಹೋಯಿತು ಎಂದುಕೊಳ್ಳವಷ್ಟರಲ್ಲಿಯೇ ನನ್ನ ಸೀರೆಯ ಸೆರಗು ಸಮೀಪ ಮರಕ್ಕೆ ತಗುಲಿತು. ಅಷ್ಟೇ.
ಆ ದೇವರೇ ನನ್ನನ್ನು ಕಾಪಾಡಿದ ಹಾಗಾಯಿತು. ಹಿಂದೆ ಮುಂದೆ ಏನೂ ಯೋಚನೆ ಮಾಡಲೇ ಇಲ್ಲ. ಸಾವು ಕಣ್ಣೆದುರೇ ಇತ್ತು. ಪತಿ ಎಲ್ಲಿ ಹೋದರು ಎಂದೂ ಗೊತ್ತಿರಲಿಲ್ಲ. ಅವರನ್ನು ಹುಡುಕುವಷ್ಟು ಸಮಯವೂ ಇರಲಿಲ್ಲ. ಇದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ದೇವರ ಮೇಲೆ ಭಾರ ಹಾಕಿ ಸೆರಗು ಸಿಕ್ಕಿಕೊಂಡಿದ್ದ ಮರವನ್ನು ಸರಸರ ಏರಿಯೇ ಬಿಟ್ಟೆ. ಬದುಕುವ ಭರವಸೆ ಇರಲಿಲ್ಲ. ಮನೆಗಳೇ ಉರುಳಿ ಬೀಳುವಾಗ, ಈ ಮರ ಆ ರಭಸಕ್ಕೆ ಕೊಚ್ಚಿ ಹೋಗದೇ ಇದ್ದೀತೆ? ಅದೇನು ಧೈರ್ಯ ಬಂತೋ ತಿಳಿದಿಲ್ಲ. ಕಣ್ಣುಮುಚ್ಚಿ ಮರದ ತುದಿಯಲ್ಲಿ ಕುಳಿತುಬಿಟ್ಟೆ.
ಇದನ್ನೂ ಓದಿ:ಟಿಕ್​ಟಾಕ್​ನಲ್ಲಿ ನಾಯಿಗೆ ಚಿತ್ರಹಿಂಸೆ: ಯುವಕರ ಹಿಡಿದುಕೊಟ್ಟರೆ ₹ 50 ಸಾವಿರ ಬಹುಮಾನ!
ಒಂದು ಗಂಟೆ, ಎರಡು ಗಂಟೆ…. ಗೊತ್ತಿಲ್ಲ ವೇಳೆ ಎಷ್ಟಾಯಿತೋ ಗೊತ್ತಿಲ್ಲ. ಕೊಟ್ಟಿಗೆಗೆ ಹೋಗುವಾಗ ಟಾರ್ಚ್​ ಹಿಡಿದಿದ್ದೆ. ಅದನ್ನು ಕೈಯಲ್ಲಿ ಹಿಡಿದೇ ಮರ ಹತ್ತಿದ್ದೆ. ಆ ಟಾರ್ಚ್​ ಬಿಡುತ್ತಲೇ ಕಾಪಾಡಿ ಎಂದು ಕೂಗುತ್ತಲೇ ಇದ್ದೆ. ಸಮಯ ಕಳೆಯುತ್ತಿತ್ತು. ಆ ಪ್ರವಾಹದಲ್ಲಿ ಬದುಕಿಸಲು ಬರುವವರಾದರೂ ಯಾರು? ಪ್ರವಾಹ ಏರುತ್ತಲೇ ಇತ್ತು, ಕತ್ತಲೆಲ್ಲಾ ಮರದ ಮೇಲೆ ಜೀವವನ್ನು ಕೈಯಲ್ಲಿ ಹಿಡಿದೇ ಕಳೆದ.
ಕತ್ತಲು ಮರೆಯಾಗಿ ಬೆಳಕು ಮೂಡಿತು. ಪ್ರವಾಹ ತಗ್ಗಿತು. ಆಗ ಸುಮಾರು ನಸುಕಿನ ನಾಲ್ಕೈದು ಗಂಟೆ ಆಗಿರಬಹುದು. ಅಂದರೆ ಸುಮಾರು 8-9 ಗಂಟೆ ಮರದ ಮೇಲೆಯೇ ಕುಳಿತಿದ್ದೆ. ಪ್ರವಾಹ ಕಡಿಮೆಯಾಗುತ್ತಿದ್ದಂತೆಯೇ ನನ್ನ ಕೂಗನ್ನು ಸಮೀಪದವರು ಕೇಳಿಸಿಕೊಂಡು ನನ್ನನ್ನು ರಕ್ಷಿಸಿದರು.
ಪವಾಡ ಆಗಿಯೇ ಹೋಗಿತ್ತು. ನಾನೇನೋ ಬದುಕಿದೆ? ಪತಿ? ಅವರಿಗಾಗಿ ಅತ್ತಿತ್ತ ಹುಡುಕಾಡಿದೆ. ಮನಸ್ಸು ಜರ್ಜರಿತವಾಗಿ ಹೋಗಿತ್ತು. ಅಂಥ ಪ್ರವಾಹಕ್ಕೆ ಅವರು ಬದುಕಿದ್ದಾರೋ ಇಲ್ಲವೋ ಎಂದು ಗೊತ್ತಾಗದೇ ನಲುಗಿಹೋಗಿದ್ದೆ. ಆದರೆ ದೇವರು ದೊಡ್ಡವನು, ಅವರಿಗೆ ಬಿದಿರು ರಾಶಿ ಸಿಕ್ಕಿತ್ತಂತೆ. ಅದನ್ನು ಹಿಡಿದೇ ಹೇಗೋ ಕಾಲ ಕಳೆದು ಜೀವ ಉಳಿಸಿಕೊಂಡರು.
ಇದನ್ನೂ ಓದಿ:ಮಾಜಿ ಮುಖ್ಯಮಂತ್ರಿಗೆ ವಕ್ಕರಿಸಿದ ಕರೊನಾ ಸೋಂಕು: ಕಾಂಗ್ರೆಸ್​ ಸಚಿವರಲ್ಲಿ ಎರಡನೇ ಕೇಸ್​!
ಇಬ್ಬರ ಜೀವ ಸದ್ಯ ಉಳಿದಿದೆ. ಆದರೆ ನಮ್ಮದೆಲ್ಲವೂ ಕೊಚ್ಚಿ ಹೋಗಿದೆ. ಮುಂದಿನ ಜೀವ ಗೊತ್ತಿಲ್ಲ. ಸದ್ಯ ಚಂಡಮಾರುತದಿಂದ ರಕ್ಷಣೆ ಪಡೆಯಲು ನೂರಾರು ಜನರು ಪ್ಲಾಸ್ಟಿಕ್ ಶೀಟ್‌ಗಳಿಂದ ಮಾಡಿದ ಟೆಂಟ್‌ಗಳಲ್ಲಿ ವಾಸವಾಗಿದ್ದೇವೆ. ಮುಂದಿನದೂ ದೇವರ ಮೇಲೆಯೇ ಭಾರ ಹಾಕುವುದು ಅಷ್ಟೇ ಎಂದು ಭಯಾನಕ ಅನುಭವ ಹಂಚಿಕೊಂಡಿದ್ದಾರೆ.
ಈ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ 72 ಜೀವಗಳನ್ನು ಬಲಿತೆಗೆದುಕೊಂಡಿದೆ. ಒಂದುಸಾವಿರ ಕೋಟಿಗಿಂತಲೂ ಹೆಚ್ಚಿನ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ.(ಏಜೆನ್ಸೀಸ್​)
ಮುಸ್ಲಿಮೇತರ ವೈದ್ಯರ ಮೇಲೆ ಹಲ್ಲೆ ಮಾಡಿ ಎಂದು ಭಾಷಣ- ವೀಡಿಯೋ ಬ್ಲಾಕ್​ ಮಾಡಿ ಎಂದ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − five =
Remember me
