ಪಾಲ್ಗರ್​:ನಿಮ್ಮ ಹೆಸರಿನಲ್ಲಿ 2 ಎಕರೆ ಜಮೀನನ್ನು ಇಂಡಸ್ಟ್ರಿಯಲ್ ಏರಿಯಾದಲ್ಲಿ ಖರೀದಿಸಬೇಕೆಂದಿದ್ದೇವೆ. ನೀವು ದುಡ್ಡು ಕೊಟ್ರೆ ಖರೀದಿಸುವುದಕ್ಕೆ ಅನುಕೂಲ ಆಗುತ್ತೆ ಅಂತ ಯಾರಾದ್ರೂ ಹೇಳಿದ್ರೆ ಏನ್ ಮಾಡ್ತೀರೋ ಗೊತ್ತಿಲ್ಲ. ಪಾಪ ಈ ಮಹಿಳೆ ಬರೋಬ್ಬರಿ 57 ಲಕ್ಷ ರೂಪಾಯಿ ಕೊಟ್ಟೇ ಬಿಟ್ರು!
ಜಮೀನು ಸಿಕ್ತಾ ಕೇಳಿದ್ರೆ ಇಲ್ಲ!. ಹೀಗೆ ವಂಚನೆಗೊಳಗಾದ ಮಹಿಳೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿಯ ನಿವಾಸಿ. ವಯಸ್ಸು 69. ಪೊಲೀಸರು ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿಲ್ಲ. ಆದರೆ ವಂಚನೆಗೊಳಗಾದ ರೀತಿಯನ್ನು ಬಹಿರಂಗಪಡಿಸಿದ್ದಾರೆ. ಫೇಸ್​ಬುಕ್​ ಫ್ರೆಂಡ್​ಶಿಪ್​ನ ಕಥೆ-ವ್ಯಥೆಯ ಸರಣಿಯಲ್ಲಿ ಇದೂ ಒಂದು!
ಸಂತ್ರಸ್ತೆ ಕೊಟ್ಟ ದೂರಿನ ಪ್ರಕಾರ, ಬ್ರಿಟನ್​ನ ಲಿಯೋ ಜೋವಹಾ ಎಂಬಾತ ಈ ಮಹಿಳೆಗೆ ಫೇಸ್​ಬುಕ್ ಫ್ರೆಂಡ್​. ತಾನು ಸ್ಕಾಟ್ಲೆಂಡ್​ನ ಪ್ರಜೆಯಾಗಿದ್ದು, ಬ್ರಟಿಷ್​ ಏರ್​​ಲೈನ್ಸ್​ನ ಪೈಲಟ್ ಎಂದು ಪರಿಚಯಿಸಿಕೊಂಡಿದ್ದ. ಪರಿಚಯ ಸಲುಗೆಯಾಗಿ ಮಾರ್ಪಟ್ಟು, ಈಗ ಕೆಲವು ದಿನಗಳ ಹಿಂದೆ ಮಹಿಳೆಗೆ ಕರೆಮಾಡಿದ ಲಿಯೋ, ಎರಡು ಎಕರೆ ಜಮೀನು ನಿಮ್ಮ ಹೆಸರಿಗೆ ಖರೀದಿ ಮಾಡಬೇಕೂ ಅಂತ ಇದ್ದೇನೆ. ಏನಂತೀರಿ? ಅಂತ ಕೇಳಿದ್ದಾನೆ.
ಇದನ್ನೂ ಓದಿ:VIDEO: ಕೂಲಿ ಕಾರ್ಮಿಕರ ಜಾಗ ತುಂಬೋದಕ್ಕೆ ಬರ್ತಿವೆ ರೊಬಾಟ್​​ಗಳು!
ಜಮೀನಿನ ಆಸೆಗೆ, ಓಹೋ ಹೌದಾ.. ಎಲ್ಲಿ? ಎಂದು ಮರುಪ್ರಶ್ನೆ ಹಾಕಿದ್ದಾಳೆ ಮಹಿಳೆ.
ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಂತ ಉತ್ತರಿಸಿದ ಲಿಯೋ, ಸ್ವಲ್ಪ ಅಮೌಂಟ್​ ಕಳುಹಿಸಿದ್ರೆ ಜಮೀನು ಖರೀದಿ ಕೆಲಸ ಸುಗಮವಾದೀತು ಎಂದು ಹೇಳಿದ್ದಾನೆ. ಅದನ್ನು ನಂಬಿದ ಮಹಿಳೆ, ಇನ್ನಷ್ಟು ಕೆದಕಿದಾಗ ವಿವರ ತಿಳಿಸುವುದಾಗಿ ಹೇಳಿದ ಲಿಯೋ.
ಅದಾಗಿ ಸ್ವಲ್ಪ ಹೊತ್ತಿನ ಬಳಿಕ ಜೋಶಿಲಾ ಎಂಬ ಹೆಸರಿನವಳೊಬ್ಬಳಿಂದ ಈ ಮಹಿಳೆಗೆ ಕರೆ ಬಂದಿದೆ. ನಿಮಗೊಂದು ಕೊರಿಯರ್ ಬಂದಿದೆ. ಏರ್​ಪೋರ್ಟ್​ನಲ್ಲಿದೆ. ಸರ್ಕಾರದ ತೆರಿಗೆ ಸ್ವಲ್ಪ ಹೆಚ್ಚಿದ್ದು ಪಾವತಿಸಿದರೆ ಕೊರಿಯರ್ ಕಳುಹಿಸುವುದಾಗಿ ತಿಳಿಸಿದ್ದಾಳೆ. ಕಾಲ ಕಾಲಕ್ಕೆ ಬೇರೆ ಬೇರೆ ನೆಪವೊಡ್ಡಿ ಆ ಜೋಶಿಲಾ ಈ ಮಹಿಳೆ ಕರೆ ಮಾಡಿ ಬೇರೆ ಬೇರೆ ಖಾತೆಗಳಿಗೆ ಹಣ ಜಮೆ ಮಾಡಿಸಿದ್ದಾಳೆ. ಹೀಗೆ ಕಂತು ಕಂತಾಗಿ ಮಹಾರಾಷ್ಟ್ರದ ಈ ಮಹಿಳೆ ವಿವಿಧ ಖಾತೆಗಳಿಗೆ ಜಮೆಮಾಡಿದ ಹಣದ ಮೊತ್ತ 57.36 ಲಕ್ಷ ರೂಪಾಯಿ ಆಗಿತ್ತು.
ಇಷ್ಟಾದ ಬಳಿಕ ಮಹಿಳೆಗೆ ಸಂದೇಹ ಮೂಡಿ ಲಿಯೋ ಜೋವಹಾ ಮತ್ತು ಜೋಶಿಲಾಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಫಲಕೊಡಲಿಲ್ಲ. ಆಗ ತಾನು ಮೋಸ ಹೋಗಿರುವ ವಿಚಾರ ಅರ್ಥವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪಾಲ್ಗರ್ ಪೊಲೀಸ್ ವಕ್ತಾರ ಸಚಿನ್​ ನಾವಡ್ಕರ್ ತಿಳಿಸಿದ್ದಾರೆ. (ಏಜೆನ್ಸೀಸ್)
ಗ್ರಾಪಂ ಚುನಾವಣೆ ಅಕ್ಟೋಬರ್​ನಲ್ಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − two =
Remember me
