ಪುಣೆ:ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಳ್ಳುವ ಕೆಲ ಬೈಕ್​ ಸವಾರರು ಇತ್ತೀಚೆಗೆ ಅದರಿಂದ ಬಚಾವಾಗಲು ರಸ್ತೆ ಬದಿಯಲ್ಲಿ ಪಾದಾಚಾರಿಗಳಿಗಾಗಿ ಮಾಡಿರುವ ಫುಟ್​ಪಾತ್​ ಅನ್ನು ಆಶ್ರಯಿಸಿಕೊಂಡು ನಿಯಮ ಉಲ್ಲಂಘನೆ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಪಾದಾಚಾರಿಗಳಿಗೆ ಎಷ್ಟು ತೊಂದರೆಯಾಗುತ್ತದೆ ಎಂಬ ಸಾಮಾನ್ಯ ಅರಿವು ಕೂಡ ಕೆಲ ಬೈಕ್​ ಸವಾರರಿಗೆ ಇರುವುದಿಲ್ಲ. ಇದರಿಂದ ರೋಸಿಹೋದ ಹಿರಿಯ ಮಹಿಳೆಯೊಬ್ಬರು ಅಂತಹ ಸವಾರರಿಗೆ ಕ್ಲಾಸ್​ ತೆಗೆದುಕೊಂಡ ವಿಶೇಷ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಸೀರೆಯನ್ನು ಎತ್ತಿ ಕಟ್ಟಿಕೊಂಡು ಫುಟ್​ಪಾತ್​ ಅಖಾಡಕ್ಕೆ ಇಳಿದು ಮಹಿಳೆ, ನಿಯಮ ಉಲ್ಲಂಘಿಸುವ ಬೈಕ್​ ಸವಾರರನ್ನು ತಡೆಗಟ್ಟಿ ತರಾಟೆಗೆ ತೆಗದುಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪತ್ರಕರ್ತರೊಬ್ಬರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಫುಟ್​ಪಾತ್​​ ಮಧ್ಯೆ ನಿಂತಿರುವ ಮಹಿಳೆಯೊಬ್ಬರು ಫುಟ್​ಪಾತ್​ ಮೇಲೆ ಬೈಕ್​ ಚಲಾಯಿಸಿಕೊಂಡು ಬರುವ ಸವಾರರನ್ನು ತಡೆದು ರಸ್ತೆ ಮೇಲೆ ಬರುವಂತೆ ಪಾಠ ಮಾಡಿದ್ದಾರೆ. ಕೊನೆಯಲ್ಲಿ ಮತ್ತಿಬ್ಬರು ಹಿರಿಯರು ಮಹಿಳೆಯೊಂದಿಗೆ ಸೇರಿ ಸವಾರರನ್ನು ತಡೆದು ಚೆನ್ನಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.
खबरदार गाडी पुढे आणाल..पदपथावरून गाड्या नेऊन पादचाऱ्यांना अडथळा अनेक मंडळी करतात. अशांना थांबवायला या#पुणेकरकाकूंनी असा शिस्तीचा धडा दिला. त्याची ही झलक#MTPune@ParagKMT@ShreedharLoniMT@shree_brahmeMT@PuneCityPolice@puneintended@CPPuneCity#Pune#punetrafficpic.twitter.com/nIqVtXl7YT
— Amit Ruke (@AmitRukeMT)February 20, 2020

ಫೆ. 21ರಂದು ವಿಡಿಯೋವನ್ನು ಶೇರ್​ ಮಾಡಲಾಗಿದ್ದು, ಅಂದಿನಿಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ. ಈವರೆಗೂ 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಅದರ ಸಂಖ್ಯೆ ಇನ್ನು ಹೆಚ್ಚುತ್ತಲೇ ಇದೆ. ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದು, 300ಕ್ಕೂ ಹೆಚ್ಚು ರೀಟ್ವೀಟ್​ಗಳನ್ನು ಪಡೆದುಕೊಂಡಿದೆ.
ಪುಣೆ ಪೊಲೀಸರು ಸೇರಿ ಅನೇಕರು ವಿಡಿಯೋ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಒಳ್ಳೆಯ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿ, ಮಹಿಳೆಯನ್ನು ದಿಟ್ಟ ಮಹಿಳೆ ಎಂದು ಕೊಂಡಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಮಹಿಳೆಯನ್ನು ಹೊಗಳಿ ಕಾಮೆಂಟ್​ಗಳ ಸುರಿಮಳೆ ಗೈಯುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 8 =
Remember me
