ಸುವರ್ಣಾಪುರ:ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ವೃದ್ಧೆಯ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಸೈಕಲ್‌ನಲ್ಲಿ ಸಾಗಿಸಿರುವ ಅಮಾನವೀಯ ಘಟನೆ ಒಡಿಶಾದ ಸುವರ್ಣಾಪುರ ಎಂಬಲ್ಲಿ ನಡೆದಿದೆ.ಇದನ್ನೂ ಓದಿ:10 ಸಾವಿರ ರೂ. ಸಾಲ ವಾಪಸ್​ ಪಡೆಯಲು ಸೋದರಿಯರನ್ನು ಕೊಂದ ಕಿರಾತಕರು!
ಒಡಿಶಾದ ಆರೋಗ್ಯ ಸಚಿವ ನಿರಂಜನ ಪುರಿಯವರ ಸ್ವಂತ ಜಿಲ್ಲೆ ಸುವರ್ಣಾಪುರದಲ್ಲಿ ಆರೋಗ್ಯ ವ್ಯವಸ್ಥೆ ಹೇಗೆ ಕೆಟ್ಟ ಸ್ಥಿತಿಯಲ್ಲಿದೆ ಎಂಬುದನ್ನು ಈ ಘಟನೆ ಬಯಲು ಮಾಡಿದೆ.ಘಟನೆ ಹಿನ್ನೆಲೆ:ಸುವರ್ಣಾಪುರ ಜಿಲ್ಲೆಯ ಮೇಘಲ ಗ್ರಾಮದ ರುಕ್ಮಿಣಿ ಸಾಹು ಎಂಬ ವೃದ್ಧೆ ಶುಕ್ರವಾರ ತೀವ್ರ ಬಿಸಿಲಿಗೆ ಅಸ್ವಸ್ಥಗೊಂಡಿದ್ದರು. ಆಕೆಯನ್ನು ಚಿಕಿತ್ಸೆಗಾಗಿ ಬಿನಿಕಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರೂ ಸಹಿತ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.ಆಗ ಆಕೆಯ ಸಂಬಂಧಿಕರು ವೈದ್ಯಕೀಯ ಸಿಬ್ಬಂದಿಗೆ ಮೃತದೇಹವನ್ನು ಸಾಗಿಸಲು ಶವಸಾಗಿಸುವ ವಾಹನವನ್ನು ಒದಗಿಸುವಂತೆ ಕೇಳಿಕೊಂಡರು. ಇದಕ್ಕೆ ಸಂಬಂದಪಟ್ಟ ಸಿಬ್ಬಂದಿಗಳು ವಾಹನವನ್ನು ಒದಗಿಸದೇ ಇದ್ದಾಗ ಆಕೆಯ ಕುಟುಂಬಸ್ಥರು ಅನಿವಾರ್ಯವಾಗಿ ಮಧ್ಯರಾತ್ರಿಯಲ್ಲಿ ವೃದ್ಧೆಯ ಶವವನ್ನು ಸೈಕಲ್​ನಲ್ಲಿ ಸಾಗಿಸಿದ್ದಾರೆ.ಇದನ್ನೂ ಓದಿ:ಪ್ರತಿಭಟನಾ ನಿರತ ಕುಸ್ತಿಪಟು ಸಾಕ್ಷಿ ಮಲಿಕ್ ಕಾಂಗ್ರೆಸ್‌ನ ಕೈಗೊಂಬೆ ಎಂದ ಬಬಿತಾ ಪೋಗಟ್​ಕುಟುಂಬಸ್ಥರು ವೃದ್ಧೆಯ ಮೃತದೇಹವನ್ನು ಸೈಕಲ್‌ನಲ್ಲಿ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡಿದೆ. ಈ ಕುರಿತು ಮಾತನಾಡಿದ ಬಿನಿಕಾ ಸಮುದಾಯ ಆರೋಗ್ಯ ಕೇಂದ್ರದ ಡಾ.ಸಂತೋಷ್ ಬಿಭೋರ್, ನಾವು ಶವವನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದೇವೆ. ಆದರೆ ಅದನ್ನು ಸೈಕಲ್‌ನಲ್ಲಿ ಸಾಗಿಸಲು ಹೇಳಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
