ನವದೆಹಲಿ:ಬಹುರ್ಚಚಿತ ಎಲೆಕ್ಟೋರಲ್ ಬಾಂಡ್​ಗಳ ಕುರಿತಂತೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ನೀಡಿರುವ ಮಾಹಿತಿಯನ್ನು ಚುನಾವಣಾ ಆಯೋಗ ಗುರುವಾರ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಆ ಮೂಲಕ ಎಸ್​ಬಿಐ ಹಾಗೂ ಚುನಾವಣಾ ಆಯೋಗಗಳು ಸುಪ್ರೀಂಕೋರ್ಟ್ ಕೆಂಗಣ್ಣಿನಿಂದ ಪಾರಾದಂತಾಗಿವೆ.
ಲೆಕ್ಕ ಬಹಿರಂಗವಿಲ್ಲ:ಎಸ್​ಬಿಐ ನೀಡಿದ ಎಲೆಕ್ಟೋರಲ್ ಬಾಂಡ್​ಗಳ ಮಾಹಿತಿಯನ್ನು ಆಯೋಗವು 2 ವಿಭಾಗಗಳಲ್ಲಿ ಗುರುವಾರ ರಾತ್ರಿ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಯಾವ ಕಂಪನಿ, ಯಾವತ್ತು, ಎಷ್ಟು ಮೊತ್ತದ ಎಲೆಕ್ಟೋರಲ್ ಬಾಂಡ್ ಖರೀದಿಸಿದೆ. ಯಾವ ರಾಜಕೀಯ ಪಕ್ಷ ಯಾವತ್ತು ಎಷ್ಟು ಮೊತ್ತದ ಬಾಂಡ್ ಎನ್​ಕ್ಯಾಷ್ ಮಾಡಿಕೊಂಡಿದೆ ಎಂಬ ವಿವರವಷ್ಟೇ ಇದರಲ್ಲಿದೆ. ಎಸ್​ಬಿಐ ಈ ಬಾಂಡ್​ಗಳ
ಒಟ್ಟು ಮೊತ್ತದ ಲೆಕ್ಕ ತೋರಿಲ್ಲ ಹಾಗೂ ಯಾರು ಯಾರಿಗೆ ನೀಡಿದರು ಎಂಬುದನ್ನೂ ಉಲ್ಲೇಖಿಸಿಲ್ಲ. ಬಾಂಡ್ ಖರೀದಿ ಸಿದ ಕಂಪನಿಗಳು, ಎನ್​ಕ್ಯಾಷ್ ಮಾಡಿಕೊಂಡ ಪಕ್ಷಗಳ ವಿವರವನ್ನು ಪ್ರತ್ಯೇಕ ವಿಭಾಗಗಳಲ್ಲಿ ನೀಡಿದೆ.
ಏನಿದು ಪ್ರಕರಣ?:ಸುಪ್ರೀಂಕೋರ್ಟ್ ಫೆ. 15ರಂದು ಎಲೆಕ್ಟೋರಲ್ ಬಾಂಡ್ ಯೋಜನೆ ರದ್ದುಗೊಳಿಸಿದ್ದಲ್ಲದೆ, ಅದನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿತ್ತು. ಎಲೆಕ್ಟೋರಲ್ ಬಾಂಡ್ ಸ್ವೀಕರಿಸುವ ಅಧಿಕೃತ ಹಣಕಾಸು ಸಂಸ್ಥೆ ಆಗಿರುವ ಎಸ್​ಬಿಐ 2019ರ ಏ.12ರಿಂದ ಇದುವರೆಗೆ ಸ್ವೀಕರಿಸುವ ಬಾಂಡ್​ಗಳ ವಿವರವನ್ನು ಮಾ.6ರ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದೂ ಆದೇಶಿಸಿತ್ತು. ಆದರೆ ಜೂ. 30ರ ವರೆಗೆ ಕಾಲಾವಕಾಶ ನೀಡಬೇಕು ಎಂದು ಎಸ್​ಬಿಐ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಆದರೆ ಮಾ. 11ರಂದು ಎಸ್​ಬಿಐನ ಈ ಮನವಿಯ ಅರ್ಜಿ ವಜಾಗೊಳಿಸಿದ್ದ ಸುಪ್ರೀಂಕೋರ್ಟ್ ಮಾ. 12ರ ಸಂಜೆ 5ರ ಒಳಗೆ ಚುನಾವಣಾ ಆಯೋಗಕ್ಕೆ ಬಾಂಡ್​ಗಳ ಮಾಹಿತಿ ಸಲ್ಲಿಸಲೇಬೇಕು ಎಂದು ತಾಕೀತು ಮಾಡಿತ್ತು. ಹಾಗೆಯೇ ಆಯೋಗವು ಈ ವಿವರಗಳನ್ನು ಮಾ.15ರ ಸಂಜೆ 5ರ ಒಳಗೆ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿತ್ತು . ಇದೀಗ ಆಯೋಗವು ನ್ಯಾಯಾಲಯ ವಿಧಿಸಿದ್ದ ಗಡುವಿನ ಹಿಂದಿನ ದಿನವೇ ಈ ವಿವರಗಳನ್ನು ಜಠಿಠಿಟಠ://ಡಿಡಿಡಿ.ಛ್ಚಿಜಿ.ಜಟಡ.ಜ್ಞಿ/ಛಜಿಠ್ಚ್ಝಠ್ಠ್ಟಟ್ಛಛ್ಝಿಛ್ಚಿಠಿಟ್ಟಚ್ಝಚಿಟ್ಞಛಠ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + thirteen =
Remember me
