ನವದೆಹಲಿ:ದೆಹಲಿ ಚುನಾವಣೆಯ ಮತದಾನದ ಅಂತಿಮ ಪ್ರಮಾಣವನ್ನು ಪ್ರಕಟಿಸಲು ನಾವು ವಿಳಂಬ ಮಾಡಿಲ್ಲ. ನಿಖರ ಅಂಕಿಅಂಶಗಳನ್ನು ತಿಳಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.
ಫೆ.8ರಂದು ಚುನಾವಣೆ ನಡೆದರೂ ಇಂದು ಸಂಜೆಯವರೆಗೂ ಚುನಾವಣಾ ಆಯೋಗ ಮತದಾನದ ಅಂತಿಮ ಪ್ರಮಾಣವನ್ನು ಪ್ರಕಟಿಸಿರಲಿಲ್ಲ. ಈ ಮಧ್ಯೆ ಆಪ್​ ಮುಖಂಡರು ಇದನ್ನು ಪ್ರಶ್ನಿಸಿದ್ದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಪ್​ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದ್ದರು. ಮತದಾನದ ಪ್ರಮಾಣವನ್ನು ಘೋಷಿಸಲು ಆಯೋಗ ವಿಳಂಬ ಮಾಡುತ್ತಿರಲು ಕಾರಣವೇನು ಎಂದಿದ್ದರು.
ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿದ ಮತದಾನದ ಪ್ರಮಾಣ ತಿಳಿಸಿದ ಚುನಾವಣಾ ಆಯೋಗದ ಅಧಿಕಾರಿಗಳು, ಮತದಾನದ ಪ್ರಮಾಣವನ್ನು ಯಾವುದೇ ಅಂದಾಜಿನಲ್ಲಿ ಹೇಳಲಾಗುವುದಿಲ್ಲ. ನಿಖರ ಅಂಕಿಅಂಶಗಳನ್ನು ತಿಳಿಸುವುದು ನಮ್ಮ ಉದ್ದೇಶವಾಗಿತ್ತು. ಇದರಲ್ಲೇನೂ ವಿಳಂಬವಾಗಿಲ್ಲ ಎಂದಿದ್ದಾರೆ.
ನಮ್ಮ ಚುನಾವಣಾಧಿಕಾರಿಗಳು ಮತಪತ್ರಗಳ ಪರಿಶೀಲನೆಯಲ್ಲಿ ರಾತ್ರಿಯೆಲ್ಲ ತೊಡಗಿಕೊಂಡಿದ್ದರು. ಅವರು ವರದಿ ನೀಡಿದ ಬಳಿಕ ಪರೀಶಿಲನೆ ನಡೆಸಬೇಕು. ಕೆಲವೊಮ್ಮೆ ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಡಾಟಾ ಎಂಟ್ರಿಗೆ ನಿಖರ ಅಂಕಿಸಂಖ್ಯೆಗಳು ಬೇಕಾಗುತ್ತವೆ. ಅದನ್ನು ನಿರ್ವಹಣೆ ಮಾಡಿದ ಚುನಾವಣಾಧಿಕಾರಿಗಳನ್ನು ನಾವು ಶ್ಲಾಘಿಸಲೇಬೇಕು. ಅಂತಹ ವಿಳಂಬವೇನೂ ಆಗಲಿಲ್ಲ. ಸರಿಯಾದ ಸಮಯಕ್ಕೇ ಪ್ರಕಟಿಸಿದ್ದೇವೆ ಎಂದು ದೆಹಲಿ ಚುನಾವಣಾ ಆಯೋಗದ ಮುಖ್ಯಸ್ಥ ರಣಬೀರ್​ ಸಿಂಗ್​ ತಿಳಿಸಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
