ಚಂಡೀಗಢ:ಹರಿಯಾಣ ವಿಧಾನಸಭಾ ಚುನಾವಣೆಯು ಅಕ್ಟೋಬರ್​ 1 ಬದಲಿಗೆ ಅಕ್ಟೋಬರ್​ 5 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ (ಆಗಸ್ಟ್​​ 31) ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಚುನಾವಣೆಯ ಮೂರನೇ ಹಂತದ ಮತದಾನದ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಕ್ಟೋಬರ್​ 1 ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನ ನಡೆಯಲಿದೆ. ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಎರಡರ ಚುನಾವಣಾ ಫಲಿತಾಂಶವನ್ನು ಅಕ್ಟೋಬರ್​ 8 ಘೋಷಿಸಲಾಗುವುದು ಎಂದು ಹೇಳಿದೆ.
ಇದನ್ನು ಓದಿ:ರೈಲಿನಲ್ಲಿ ವೃದ್ಧರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಗ್ಯಾಂಗ್​​; ವೈರಲ್​ ವಿಡಿಯೋಗೆ ಕಮಿಷನರ್​ ರಿಯಾಕ್ಷನ್​​​ ಹೀಗಿದೆ….
ಹರಿಯಾಣದಲ್ಲಿ ಮುಂಬರುವ ಉತ್ಸವದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಬಿಷ್ಣೋಯ್ ಸಮುದಾಯದ ಮತದಾನದ ಹಕ್ಕು ಮತ್ತು ಅವರ ಸಂಪ್ರದಾಯಗಳಿಗೆ ಗೌರವವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮತದಾನದ ದಿನಾಂಕವನ್ನು ಬದಲಾಯಿಸುವಂತೆ ರಾಜಸ್ಥಾನದ ಅಖಿಲ ಭಾರತ ಬಿಷ್ಣೋಯ್ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಆಯೋಗ ತಿಳಿಸಿದೆ.
ಹಲವು ತಲೆಮಾರುಗಳಿಂದ ಪಂಜಾಬ್, ರಾಜಸ್ಥಾನ ಮತ್ತು ಹರಿಯಾಣದಲ್ಲಿನ ಹಲವು ಕುಟುಂಬಗಳು ಗುರು ಜಂಭೇಶ್ವರರ ಸ್ಮರಣಾರ್ಥ ಶತಮಾನಗಳಿಂದ ಅಸೋಜ ಅಮವಾಸ್ಯೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಅಕ್ಟೋಬರ್​ 2ರಂದು ಈ ಹಬ್ಬ ಬರುತ್ತದೆ. ಸಿರ್ಸಾ, ಫತೇಹಾಬಾದ್ ಮತ್ತು ಹಿಸಾರ್‌ನಿಂದ ಸಾವಿರಾರು ಬಿಷ್ಣೋಯ್ ಕುಟುಂಬಗಳು ಮತದಾನದ ದಿನದಂದು ರಾಜಸ್ಥಾನಕ್ಕೆ ಪ್ರಯಾಣಿಸಲಿದ್ದಾರೆ. ಈ ಕಾರಣದಿಂದಾಗಿ ಅವರು ಅಕ್ಟೋಬರ್ 1 ರಂದು ಮತದಾನ ಮಾಡಲು ಸಾಧ್ಯವಾಗುವುದಿಲ್ಲ.
Election Commission of India (ECI) revises polling day for Haryana from October 1 to October 5, 2024 and accordingly counting day for J&K and Haryana Assembly elections from October 4 to October 8, 2024The decision has been taken to honour both the voting rights and the…pic.twitter.com/ZzewD1B69U
ಭಿವಾನಿ, ಹಿಸಾರ್, ಸಿರ್ಸಾ ಮತ್ತು ಫತೇಹಾಬಾದ್ ಜಿಲ್ಲೆಗಳು ಬಿಷ್ಣೋಯಿ ಪ್ರಾಬಲ್ಯದ ಗ್ರಾಮಗಳಾಗಿವೆ. ಇದರಲ್ಲಿ ಸುಮಾರು 1.5 ಲಕ್ಷ ಮತಗಳಿವೆ. ಅಕ್ಟೋಬರ್​ 1ರಂದು ಮತದಾನ ನಡೆದರೆ ಈ ಜನರ ಮತದಾನ ಹಕ್ಕನ್ನು ಕಸಿದುಕೊಳ್ಳುವಂತಾಗುತ್ತದೆ. ಇದರಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯು ಕಡಿಮೆಯಾಗಬಹುದು. ಈ ಕಾರಣಕ್ಕೆ ಮತದಾನದ ದಿನಾಂಕ ಮುಂದೂಡಿರುವುದಾಗಿ ಆಯೋಗ ತಿಳಿಸಿದೆ. (ಏಜೆನ್ಸೀಸ್​​)
ಗೋಮಾಂಸ ತಿಂದ ಶಂಕೆಯಲ್ಲಿ ವ್ಯಕ್ತಿ ಹತ್ಯೆ! ಆರೋಪಿಗಳ ವಿರುದ್ಧ ಪೊಲೀಸರು ಕೈಗೊಂಡ ಕ್ರಮ ಹೀಗಿದೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
