ಚೆನ್ನೈ:ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಗೆ ಚುನಾವಣಾ ಆಯೋಗವೇ ಕಾರಣ ಎಂದು ಮದ್ರಾಸ್​ ಹೈ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ಚುನಾವಣಾ ಆಯೋಗ ಮಾಡಿರುವ ತಪ್ಪಿಗೆ ಅದರ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್​ ದಾಖಲಿಸಿದರೂ ತಪ್ಪಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ದೇಶದಲ್ಲಿ ಕರೊನಾ ಸೋಂಕಿನ ಹರಡುವಿಕೆ ಬಗ್ಗೆ ಅರಿವಿದ್ದರೂ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಸಲಾಯಿತು. ಚುನಾವಣಾ ಪ್ರಚಾರಕ್ಕೆ ನಡೆಸದಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಆಯೋಗ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲಿಲ್ಲ. ಹಾಗಾಗಿ ಈ ಸೋಂಕಿನ ಹರಡುವಿಕೆಗೆ ಆಯೋಗ ಏಕೈಕ ಕಾರಣ ಎನ್ನಬಹುದು. ಆ ತಪ್ಪನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದರೂ ಅದೇನು ತಪ್ಪಾಗುವುದಿಲ್ಲ. ಇದೀಗ ಮುಂದಿನ ಭಾನುವಾರ ರಾಜ್ಯದ ಚುನಾವಣೆಯ ಮತಎಣಿಕೆ ನಡೆಯಲಿದೆ. ಒಂದು ವೇಳೆ ಅದಕ್ಕೆ ಸೂಕ್ತ ಬ್ಲೂಪ್ರಿಂಟ್​ ಅನ್ನು ಮಾಡಲಿಲ್ಲವಾದಲ್ಲಿ ನಾವು ಮತ ಎಣಿಕೆ ಮಾಡಲು ಬಿಡುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ಮೇ 2ರಂದು ಫಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ಈ ಶುಕ್ರವಾರದೊಳಗೆ ಎಲ್ಲ ರೀತಿಯ ಕರೊನಾ ನಿಯಮಗಳನ್ನು ಜಾರಿಗೊಳಿಸಬೇಕು. ಒಂದು ವೇಳೆ ಅದರಲ್ಲಿ ವಿಫಲವಾದರೆ ನಾವು ಎಣಿಕೆಯನ್ನು ನಿಲ್ಲಿಸುತ್ತೇವೆ. ಸಾರ್ವಜನಿಕ ಆರೋಗ್ಯ ಅತ್ಯುನ್ನತವಾಗಿರುವುದು. ಸಾಂವಿಧಾನಿಕ ಅಧಿಕಾರಿಗಳಿಗೆ ಅದನ್ನು ನೆನಪಿಸಬೇಕಾಗಿರುವುದು ದುಃಖಕರವಾಗಿದೆ. ನಾಗರಿಕನು ಬದುಕುಳಿದಾಗ ಮಾತ್ರ ಅವನು ಪ್ರಜಾಪ್ರಭುತ್ವದಲ್ಲಿ ಬದುಕಲು, ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ. (ಏಜೆನ್ಸೀಸ್)
ಭಾರತದಲ್ಲಿ ಕೋವಿಡ್ ಅಟ್ಟಹಾಸ: ಗೂಗಲ್, ಮೈಕ್ರೋಸಾಫ್ಟ್ ಸಿಇಓಗಳ ಕಂಬನಿ, ಹೃದಯ ವಿದ್ರಾವಕ ಎಂದ ಸತ್ಯಾ ನಾದೆಲ್ಲ

ಡಿಸ್ಕೋ ಡ್ಯಾನ್ಸ್​ ಸ್ಟೈಲಲ್ಲಿ ಮಾಸ್ಕ್​ ! ವೈರಲ್ ಆಗ್ತಿದೆ ಈ ಫೋಟೋ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
