ನವದೆಹಲಿ:ಚುನಾವಣಾ ವ್ಯವಸ್ಥೆ ಸುಧಾರಿಸುವ ಉದ್ದೇಶದೊಂದಿಗೆ ಚುನಾವಣಾ ಆಯೋಗ ಒಂದೊಂದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಮತದಾರರಿಗೆ ಶೀಘ್ರವೇ ಡಿಜಿಟಲ್ ವೋಟರ್ ಐಡಿ ಒದಗಿಸುವ ಪ್ರಸ್ತಾವನೆಗೆ ಅನುಮತಿ ನೀಡಲು ಚಿಂತನೆ ನಡೆಸಿದೆ.
ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ಡಿಜಿಟಲ್ ಮಾದರಿಯ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ. ಆದರೆ ಅಂತಿಮ ತೀರ್ಮಾನ ಇನ್ನೂ ತೆಗೆದುಕೊಂಡಿಲ್ಲ. ಈ ಬಗ್ಗೆ ಸಾರ್ವಜನಿಕರು, ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಧಿಕೃತ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ವೇತನ ಸಿಗದೆ ಹತಾಶರಾದ ನೌಕರರಿಂದ ಕಲ್ಲುತೂರಾಟ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್​
ಡಿಜಿಟಲ್​ ವೋಟರ್ ಐಡಿ ಎಂದರೆ, ಮತದಾರ ತನ್ನ ಇಮೇಲ್​ ಮೂಲಕ ತರಿಸಿಕೊಳ್ಳಬಹುದು. ಮೊಬೈಲ್​ನಲ್ಲಿ ಇರಿಸಿಕೊಂಡು ಅಗತ್ಯ ಇದ್ದಾಗ ಬಳಸಿಕೊಳ್ಳಬಹುದು. ಹಾರ್ಡ್​ ಕಾಪಿ ಮುದ್ರಿಸಿ ಮತದಾರರಿಗೆ ತಲುಪಿಸಲು ಸಮಯಾವಕಾಶ ಬೇಕು. ಆದರೆ ಡಿಜಿಟಲ್​ ವೋಟರ್ ಐಡಿ ಹಾಗಲ್ಲ. ತತ್​ಕ್ಷಣವೇ ಅವರಿಗೆ ಸಿಗುತ್ತದೆ. ಆಧಾರ್, ಪ್ಯಾನ್, ಚಾಲನಾ ಪರವಾನಗಿಗಳು ಹೇಗೆ ಡಿಜಿಟಲ್ ಸ್ವರೂಪ ಪಡೆದಿವೆಯೋ ಹಾಗೆಯೇ ಮತದಾರರ ಗುರುತಿನ ಚೀಟಿಯೂ ಡಿಜಿಟಲ್ ರೂಪದಲ್ಲಿ ಬರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಲವ್​ ಸೆಕ್ಸ್ ಧೋಖಾ, ಡರ್ಟಿ ಪಿಕ್ಚರ್ ನಟಿ ಆರ್ಯಾ ಬ್ಯಾನರ್ಜಿ ಶವವಾಗಿ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 3 =
Remember me
