ನವದೆಹಲಿ:ಮೇ 2 ರಂದು ಪಂಚರಾಜ್ಯಗಳ (ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ) ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಆದರೆ ದೇಶದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿರುವುದರಿಂದ ಚುನಾವಣಾ ಫಲಿತಾಂಶದ ಬಳಿಕ ಗೆದ್ದ ಅಭ್ಯರ್ಥಿಗಳು, ಅವರ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸುವುದಕ್ಕೆ ಅವಕಾಶ ಇಲ್ಲ ಎಂದು ಭಾರತ್ ಚುನಾವಣಾ ಆಯೋಗ ಇಂದು ಆದೇಶ ಮಾಡಿದೆ.
ಅಲ್ಲದೇ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಜನ ಸೇರುವುದಕ್ಕೂ ಅವಕಾಶ ಇಲ್ಲ. ಗೆದ್ದ ಅಭ್ಯರ್ಥಿಗಳು ತನ್ನ ಇಬ್ಬರು ಬೆಂಬಲಿಗರೊಡನೆ ಮಾತ್ರ ಚುನಾವಣಾ ಫಲಿತಾಂಶದ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಅವಕಾಶ ಇರುತ್ತದೆ ಎಂದು ಆಯೋಗ ಹೇಳಿದೆ.
ಇನ್ನು ಚುನಾವಣಾ ಆಯೋಗದ ಈ ಆದೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸ್ವಾಗತಿಸಿದ್ದು, ಬಿಜೆಪಿ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ವಿಧಾನಸಭೆಯ ಮೂರು ಹಂತದ ಚುನಾವಣೆಗಳಿಗೆ ಚುನಾವಣಾ ಆಯೋಗ, ಎಲ್ಲ ರೀತಿಯ ಸಾರ್ವಜನಿಕ ಚುನಾವಣಾ ಸಮಾವೇಶಗಳನ್ನು ರದ್ದು ಮಾಡಿ ಆದೇಶಿಸಿತ್ತು.
ದೇಶದಲ್ಲಿ ಕೋವಿಡ್ 19 ಸೋಂಕಿತರ ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದು ಮಂಗಳವಾರ 3.5 ಲಕ್ಷ ಜನರಿಗೆ ಮಾರಕ ಸೋಂಕು ತಗುಲಿದೆ. 2771 ಜನ ಮೃತಪಟ್ಟಿದ್ದಾರೆ.
ಸೂಕ್ತ ಸಮಯದಲ್ಲಿ ಸಿಗದ ಆಂಬುಲೆನ್ಸ್​: ಬೈಕ್​ ಮೇಲೆ ಮಹಿಳೆ ಶವ ಕೊಂಡೊಯ್ದು ಅಂತ್ಯಕ್ರಿಯೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − four =
Remember me
