ಮಹಾಮಾರಿ ಕೋವಿಡ್-19 ಸಂಕಷ್ಟದ ಹೊಡೆತದಿಂದ ದೇಶದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವಾಗಲೇ ಕೇಂದ್ರ ಬಜೆಟ್-2022 ಎದುರಾಗಿರುವುದು ಸಹಜವಾಗಿಯೇ ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿದೆ. ಉತ್ತರ ಪ್ರದೇಶ ಒಳಗೊಂಡಂತೆ ಪಂಚರಾಜ್ಯ ಚುನಾವಣೆ, 2024ರ ಲೋಕಸಭೆ ಸಮರಕ್ಕೂ ಮುಂಚಿನ ಪೂರ್ಣಪ್ರಮಾಣದ ಬಜೆಟ್ ಇದಾಗಿರುವುದರಿಂದ ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್​ನಲ್ಲಿ ಮಂಡಿಸಲಿರುವ ಬಜೆಟ್​ನಲ್ಲಿ ಜನಪರ ಘೋಷಣೆಗಳ ಮಹಾಪೂರವೇ ಹರಿಯುವ ನಿರೀಕ್ಷೆ ಇದೆ. ಇನ್ನು 2023ರಲ್ಲಿ ಜಿಡಿಪಿ ದರವನ್ನು ಶೇ.8-8.5ರಲ್ಲಿ ಕಾಯ್ದುಕೊಳ್ಳುವುದಕ್ಕೆ ದಾರಿ ಯಾವುದೆಂಬ ಕುತೂಹಲವೂ ಇಮ್ಮಡಿಗೊಂಡಿದೆ. ಈ ಎಲ್ಲ ಮಾಹಿತಿ ಜತೆ ಜತೆಯಲ್ಲೇ ಬಜೆಟ್​ನ ನಿರೀಕ್ಷೆ, ಸಾಧ್ಯಾಸಾಧ್ಯತೆಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ನವದೆಹಲಿ:ಕ್ಷಿಪ್ರವೇಗದ ಆರ್ಥಿಕತೆಯಾಗಿ ಉಳಿಯಲಿರುವ ಭಾರತ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 9.2 ಜಿಡಿಪಿ ಬೆಳವಣಿಗೆ ದಾಖಲಿಸಲಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಶೇಕಡ 8 ರಿಂದ 8.5ರ ನಡುವೆ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಸೋಮವಾರ ದೇಶದ ಆರ್ಥಿಕ ಸಮೀಕ್ಷೆ 2021-22ರ ವರದಿ ಮಂಡಿಸುತ್ತ ಈ ವಿವರ ನೀಡಿದರು. 2025ರ ಹಣಕಾಸು ವರ್ಷದ ವೇಳೆ ಭಾರತ 5 ಲಕ್ಷ ಕೋಟಿ ಡಾಲರ್​ನ ಅರ್ಥವ್ಯವಸ್ಥೆಯಾಗಿ ರೂಪುಗೊಳ್ಳಬೇಕಾದರೆ ಅಂದಾಜು 1.4 ಲಕ್ಷ ಕೋಟಿ ಡಾಲರ್ ಅನ್ನು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕಾದ ಅವಶ್ಯಕತೆ ಇದೆ. ಆದಾಗ್ಯೂ, ಜಾಗತಿಕ ಹಣದುಬ್ಬರ ಮತ್ತು ಸಾಂಕ್ರಾಮಿಕ ಸಂಬಂಧಿತ ತೊಂದರೆಗಳನ್ನು ಎದುರಿಸ ಬೇಕಾಗಬಹುದು ಎಂದು ಸಚಿವೆ ನಿರ್ಮಲಾ ಎಚ್ಚರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
