ನವದೆಹಲಿ:ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಜೆಪಿ ನಡ್ಡಾ ಸ್ಥಾನಕ್ಕೆ ಡಿಸೆಂಬರ್ ಅಂತ್ಯದೊಳಗೆ ನೂತನ ನಾಯಕರ ಆಯ್ಕೆ ಪೂರ್ಣಗೊಳ್ಳಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ:30 ವರ್ಷದ ನಂತರ ಜಮ್ಮುವಿನಲ್ಲಿ ತೆರೆದ ದೇವಾಲಯ.. ಮುಸಲ್ಮಾನರ ಸಂತಸ!
ಜೆಪಿ ನಡ್ಡಾ ಅವರ ಅಧಿಕಾರಾವಧಿ ಮುಗಿದಿದ್ದರೂ, ಚುನಾವಣೆ ಹಿನ್ನೆಲೆಯಲ್ಲಿ ಕಳೆದ ತಿಂಗಳವರೆಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಅದೂ ಮುಗಿದ ಬಳಿಕ ನೂತನ ಅಧ್ಯಕ್ಷೀಯ ಚುನಾವಣೆಗೆ ಕಸರತ್ತು ಆರಂಭವಾಯಿತು. ಈ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯು ಆಗಸ್ಟ್ 1 ರಂದು ಆರಂಭಿಕ ಸದಸ್ಯತ್ವ ನೋಂದಣಿಯೊಂದಿಗೆ ಪ್ರಾರಂಭವಾಗಿ ಸೆಪ್ಟೆಂಬರ್ 15 ರವರೆಗೆ ಮುಂದುವರಿಯುತ್ತದೆ.
ಸಕ್ರಿಯ ಸದಸ್ಯತ್ವ ಪ್ರಕ್ರಿಯೆಯು ಸೆಪ್ಟೆಂಬರ್ 16 ರಿಂದ 30 ರವರೆಗೆ ಮುಂದುವರಿಯುತ್ತದೆ. ಬಿಜೆಪಿಯ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಸದಸ್ಯರು ಒಂಬತ್ತು ವರ್ಷಗಳಿಗೊಮ್ಮೆ ಸದಸ್ಯತ್ವವನ್ನು ನವೀಕರಿಸಬೇಕು. ಈ ವರ್ಷ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಪಕ್ಷದ ನಾಯಕರು ನವೀಕರಿಸಬೇಕಾಗಿದೆ. ಪಕ್ಷದ ಮಂಡಲ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರ ಆಯ್ಕೆ ನವೆಂಬರ್ 1-15 ಮತ್ತು ನವೆಂಬರ್ 16-30 ರವರೆಗೆ ನಡೆಯಲಿದೆ. ಅಂದು ನೂತನ ರಾಜ್ಯ ಮತ್ತು ರಾಷ್ಟ್ರೀಯ ಸಮಿತಿಗಳನ್ನು ಆಯ್ಕೆ ಮಾಡಲಾಗುವುದು. ಡಿಸೆಂಬರ್ 1 ರಂದು ರಾಜ್ಯಾಧ್ಯಕ್ಷರ ಚುನಾವಣೆ ಆರಂಭವಾಗಲಿದೆ.
ಅರ್ಧದಷ್ಟು ರಾಜ್ಯಗಳ ಅಧ್ಯಕ್ಷರ ನೇಮಕ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಮುಖ್ಯಸ್ಥರ ಆಯ್ಕೆಗೆ ಅಧಿಕೃತ ಪ್ರಕ್ರಿಯೆ ಪ್ರಕಟವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮ್ಯಾಜಿಕ್ ನಂಬರ್​ (272) ಸಾಧಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸಾಂಸ್ಥಿಕ ಚುನಾವಣೆ ಬಿಜೆಪಿಗೆ ನಿರ್ಣಾಯಕ ಎನಿಸಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಮೋದಿ ಅವರು ನಡ್ಡಾ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದು,ರಾಜ್ಯಸಭೆ ನಾಯಕರಾಗಿರುವುದು ತಿಳಿದ ಸಂಗತಿಯೇ.
ನೇಪಾಳದ ನೂತನ ಪ್ರಧಾನಿಯಾಗಿ ಕೆ.ಪಿ.ಶರ್ಮಾ ಓಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 10 =
Remember me
