ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆ ಉಂಟಾಗಿದೆ. ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಮುನ್ನಡೆ ಸಾಧಿಸಿದ್ದಾರೆ. ಟ್ರಂಪ್‌ಗಿಂತ ಬಿಡೆನ್ ನಾಲ್ಕು ಅಂಕಗಳಿಂದ ಮುಂದಿದ್ದಾರೆ ಎಂದು ಪಬ್ಲಿಕ್ ಪಾಲಿಸಿ ಪೋಲಿಂಗ್ ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯಲ್ಲಿ ಬಿಡೆನ್‌ಗೆ ಶೇ. 49 ಹಾಗೂ ಟ್ರಂಪ್‌ಗೆ ಶೇ. 45 ಮತಗಳು ಲಭ್ಯವಾಗಿವೆ. ಉಭಯ ಅಭ್ಯರ್ಥಿಗಳು ಏಪ್ರಿಲ್‌ನಲ್ಲಿ ನಡೆದ ಸಮೀಕ್ಷೆಯಲ್ಲಿ ಸಮಾನ ಮತ ಪಡೆದಿದ್ದರು. ಉತ್ತರ ಕರೊಲಿನಾದ ಶೇ. 50 ಮತದಾರರು ಟ್ರಂಪ್ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರಂಪ್‌ಗೆ ಮಹಿಳೆಯರಿಗಿಂತ (ಶೇ. 40) ಪುರುಷರ (ಶೇ. 52) ಬೆಂಬಲವೇ ಹೆಚ್ಚು ಎನ್ನುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.
ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡಾ ಹತ್ಯೆಯಿಂದ ಭುಗಿಲೆದ್ದ ಆಕ್ರೋಶ ಮುಂದುವರಿದಿರುವ ನಡುವೆಯೇ, ಪೊಲೀಸ್ ಅಧಿಕಾರಿಗಳು ಬಿಳಿಯ ಪ್ರತಿಭಟನಾಕಾರನೊಬ್ಬನ ಮೇಲೆ ಅಮಾನುಷ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ದೌರ್ಜನ್ಯ ನಡೆಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿಜನಾಂಗೀಯ ದ್ವೇಷದ ವಿರುದ್ಧ ರೊಚ್ಚಿಗೆದ್ದ ಪ್ರತಿಭಟನಾಕಾರರಿಗೆ ಅಧ್ಯಕ್ಷ ಟ್ರಂಪ್​ ಪುತ್ರಿಯ ಬೆಂಬಲ
ಈ ಮಧ್ಯೆ, ಫ್ಲಾಯ್ಡಾ ಸಾವಿನ ವಿರುದ್ಧ ಶ್ವೇತಭವನದ ಹೊರಗೆ ನಡೆದಿದ್ದ ಪ್ರತಿಭಟನೆ ವೇಳೆ ಬಲವಂತವಾಗಿ ಜನರನ್ನು ಚದುರಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕದ ನಾಗರಿಕ ಹಕ್ಕು ಸಂಘಟನೆಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದಾವೆ ಹೂಡಿವೆ. ಟ್ರಂಪ್ ಮತ್ತು ಶ್ವೇತಭವನದ ಅಧಿಕಾರಿಗಳು ಜನರ ಪ್ರತಿಭಟನೆಯ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.
ಇದಲ್ಲದೆ, ಮೃತ ಜಾರ್ಜ್ ಫ್ಲಾಯ್ಡಾ ಬಗ್ಗೆ ಡೊನಾಲ್ಡ್ ಟ್ರಂಪ್ ಮಾಡಿರುವ ಶ್ರದ್ಧಾಂಜಲಿ ಟ್ವೀಟ್ ವಿಡಿಯೋವನ್ನು ಟ್ವಿಟರ್ ನಿಷ್ಕ್ರಿಯಗೊಳಿಸಿರುವುದು ಟ್ರಂಪ್‌ಗೆ ಮುಜುಗರ ತಂದಿದೆ. ತಮ್ಮ ಪ್ರಚಾರ ಖಾತೆಯಲ್ಲಿ ಈ ವಿಡಿಯೋ ಪ್ರಕಟಿಸಿದ್ದರಿಂದ ಕಾಪಿರೈಟ್ ನೀತಿ ಮೇಲೆ ಪರಿಣಾಮ ಉಂಟಾಗಿದೆ ಎಂದು ಟ್ವಿಟರ್ ಹೇಳಿದೆ. 3.40 ನಿಮಿಷದ ವಿಡಿಯೋವನ್ನು ಜೂನ್ 3ರಂದು ಟ್ವೀಟ್ ಮಾಡಲಾಗಿತ್ತು. ಯೂ ಟ್ಯೂಬ್‌ನಲ್ಲಿ ಇನ್ನೂ ಇರುವ ಈ ವಿಡಿಯೋ ಕ್ಲಿಪ್‌ಗೆ 60,000 ವ್ಯೆ ಮತ್ತು 13,000 ಲೈಕ್‌ಗಳು ಬಂದಿವೆ.
ಇದನ್ನೂ ಓದಿಮೋದಿಗೆ ಕರೆ ಮಾಡಿದ ಟ್ರಂಪ್: ಚರ್ಚೆಯಾದ ವಿಷಯಗಳೇನು?
ನೀವು ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಿ: ಟ್ರಂಪ್​ಗೆ ಪೊಲೀಸ್​ ಚೀಫ್​​ ತೀಕ್ಷ್ಣ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − ten =
Remember me
