ಕಾನ್ಪುರ:ಪೆಟ್ರೋಲ್​, ಡೀಸೆಲ್​ಗಳ ಬೆಲೆ ಗಗನಚುಂಬಿಯಾಗುತ್ತಿವೆ. ಹವಾಮಾನ ವೈಪರೀತ್ಯಗಳನ್ನು ತಡೆಯಲು ಜಗತ್ತಿನಾದ್ಯಂತ ಸರ್ಕಾರಗಳು ಪರ್ಯಾಯ ಇಂಧನಗಳ ಮೇಲೆ ಓಡುವ ವಾಹನಗಳನ್ನು ಪ್ರಮೋಟ್​ ಮಾಡುತ್ತಿವೆ. ಹೀಗಿರುವಾಗ ಭಾರತದಲ್ಲೂ ಎಲೆಕ್ಟ್ರಿಕ್​ ಕಾರು ಮತ್ತು ಬೈಕುಗಳು ಮಾರುಕಟ್ಟೆ ಪಡೆಯುತ್ತಿವೆ.
ಇದೇ ದಿಕ್ಕಿನಲ್ಲಿ ನಡೆದಿರುವ ಪ್ರಯತ್ನದಲ್ಲಿ ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಗೂ ಎಲೆಕ್ಟ್ರಿಕ್​ ವಾಹನಗಳ ಸೇರ್ಪಡೆ ಮಾಡುವ ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರವು ಇಂದು 20 ಎಲೆಕ್ಟ್ರಿಕ್​ ಬಸ್​ಗಳಿಗೆ ಕಾನ್ಪುರ ನಗರ ಸಾರಿಗೆ ಸಂಸ್ಥೆಯಡಿ ಚಾಲನೆ ನೀಡಿದೆ.
ಇದನ್ನೂ ಓದಿ:ನೂರಕ್ಕೆ ನೂರು ಲಸಿಕಾ ಅಭಿಯಾನ ಪೂರೈಸಿದ ಮೊದಲ ರಾಜ್ಯವಿದು!
ರಾಜ್ಯ ಸಚಿವ ಸತೀಶ್​ ಮಹಾನಾ 20 ಎಲೆಕ್ಟ್ರಿಕ್​ ಬಸ್​ಗಳೊಂದಿಗೆ ಒಂದು ಚಾರ್ಜಿಂಗ್​ ಸ್ಟೇಷನ್​ಗೂ ವಿದ್ಯುಕ್ತ ಚಾಲನೆ ನೀಡಿದರು. ಮುಂದಿನ 15 ದಿನಗಳಲ್ಲಿ ಇನ್ನೂ ಸುಮಾರು 60 ಎಲೆಕ್ಟ್ರಿಕ್​ ಬಸ್​ಗಳನ್ನು ಕಾನ್ಪುರ ನಗರದ ರಸ್ತೆಗಳ ಮೇಲೆ ಕಾಣಬಹುದು ಎಂದರು.(ಏಜೆನ್ಸೀಸ್)
ಇಸ್ರೇಲ್​ ಪ್ರಧಾನಿಗೆ ‘ಭಗವದ್ಗೀತೆ’ ನೀಡಿದ ಬಾಲಿವುಡ್​ ಬೆಡಗಿ! ಹಿಂದಿಯನ್ನೂ ಹೇಳಿಕೊಟ್ಟರು!

ಪಾಲಕರೇ ಎಚ್ಚರ! ನಿಮ್ಮ ಮಕ್ಕಳು ಆನ್​​ಲೈನ್​ ಗೇಮ್ಸ್​ ಆಡುತ್ತಾರಾ? ಹಾಗಿದ್ದರೆ ಇದನ್ನು ಓದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twelve =
Remember me
