ನವದೆಹಲಿ:ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ವಿದ್ಯುತ್ ಬಳಕೆದಾರರಿಗೆ ಕೆಲ ಹಕ್ಕುಗಳನ್ನು ನೀಡಲು ಮುಂದಾಗಿದೆ. ಈ ಕುರಿತ ಕರಡು ಪ್ರತಿಯನ್ನು ವಿದ್ಯುತ್ ಸಚಿವಾಲಯ ಬಿಡುಗಡೆ ಮಾಡಿದೆ. ‘ವಿದ್ಯುತ್ ಕ್ಷೇತ್ರದಲ್ಲಿ ಗ್ರಾಹಕರ ಪಾಲು ಮಹತ್ವದ್ದು. ಬಳಕೆದಾರರು ಇಲ್ಲದೇ ಈ ಕ್ಷೇತ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಗ್ರಾಹಕರಿಗೆ ಒದಗಿಸಬೇಕಾದ ಕನಿಷ್ಠ ಸೌಲಭ್ಯ, ಸೇವೆಗಳನ್ನು ಹಕ್ಕಿನ ರೂಪದಲ್ಲಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬಾಕಿ ಇರುವ ಬಿಲ್ ಪಾವತಿ ಮೇಲೆ ಶೇ. 5ರ ವರೆಗೂ ವಿನಾಯಿತಿ ಸಿಗಲಿದೆ. ಆನ್​ಲೈನ್, ನಗದು, ಚೆಕ್, ಡಿಡಿ ಮೂಲಕವೂ ಬಿಲ್ ಪಾವತಿಸಬಹುದು. ಸಂಪರ್ಕ ಕಡಿತ, ಹೊಸ ಮೀಟರ್ ಅಳವಡಿಕೆ ಇನ್ನಿತರ ನಿಯಮಗಳನ್ನೂ ಗ್ರಾಹಕಸ್ನೇಹಿ ಮಾಡಲು ನಿರ್ಧರಿಸಲಾಗಿದೆ.
ಎರಡು ದಾಖಲೆ ಸಾಕು: 10 ಕೆವಿ ಸಾಮರ್ಥ್ಯದ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸರ್ಕಾರ ನಿಗದಿ ಮಾಡಿರುವ ಯಾವುದಾದರೂ ಎರಡು ದಾಖಲೆಗಳನ್ನು ನೀಡಿದರೆ ಸಾಕು. ಮಹಾನಗರಗಳಲ್ಲಿ 7 ದಿನ, ಮುನ್ಸಿಪಲ್ ಪ್ರದೇಶಗಳಲ್ಲಿ 15 ದಿನ, ಗ್ರಾಮೀಣ ಪ್ರದೇಶದಲ್ಲಿ 30 ದಿನದ ಒಳಗಾಗಿ ಹೊಸ ವಿದ್ಯುತ್ ಸಂಕರ್ಪ ಸಿಗಲಿದೆ.
ರೈತರೂ ವಿದ್ಯುತ್ ಮಾರಬಹುದು!
ನೀರಾವರಿ ಇನ್ನಿತರ ಉದ್ದೇಶ ಕ್ಕಾಗಿ ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸಲು ಅವಕಾಶ ನೀಡ ಲಾಗಿದೆ. ಅವಶ್ಯಕತೆಗಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆ ಯಾದರೆ ಅದನ್ನು ವಿದ್ಯುತ್ ಪ್ರಸರಣ ಕಂಪನಿಗಳಿಗೆ ಮಾರಾಟ ಮಾಡಿ, ರೈತರು ಆದಾಯ ಗಳಿಸಬಹುದಾಗಿದೆ.
ಪರಿಹಾರ
ವಿದ್ಯುತ್ ವಿತರಣೆ ಕಂಪನಿಗಳು ಸೇವಾ ಲೋಪ ಎಸಗಿದರೆ ಅವುಗಳಿಗೆ ದಂಡ ವಿಧಿಸುವ ಮೂಲಕ ಗ್ರಾಹಕರಿಗೆ ಪರಿಹಾರ ನೀಡಲಾಗುತ್ತದೆ. ಪರಿಹಾರದ ಮೊತ್ತವನ್ನು ಮುಂದಿನ ತಿಂಗಳ ಬಿಲ್​ನಲ್ಲಿ ಕಡಿತ ಮಾಡಲಾಗುತ್ತದೆ. ಗ್ರಾಹಕರಿಗಾಗಿ 24 ತಾಸು ಕಾರ್ಯನಿರ್ವಹಿಸುವ ಸಹಾಯವಾಣಿ, ವೆಬ್​ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗುತ್ತದೆ. ಗ್ರಾಹಕರ ಸಮಸ್ಯೆ ಪರಿಹಾರಕ್ಕಾಗಿಯೇ ಸಬ್ ಡಿವಿಷನ್ ಮಟ್ಟದಲ್ಲಿ ಎರಡು-ಮೂರು ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
