ನವದೆಹಲಿ:ಆನೆ ಪಕ್ಕಕ್ಕೆ ಹೋಗಿ ನಿಂತುಕೊಂಡು ಪೋಸ್ ಕೊಟ್ಟ ಯುವತಿಯೆನ್ನು ಎತ್ತೆಸೆದ ಘಟನೆ ನಡೆದಿದೆ. ಎಲೆಗಳನ್ನು ತಿನ್ನುತ್ತಿದ್ದ ಆನೆಯ ಸಮೀಪಕ್ಕೆ ಹೋದ ಯುವತಿ ಬಳಿಕ ತನ್ನ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪಕ್ಕಕ್ಕೆ ಕರೆದಿದ್ದಾಳೆ. ಆದರೆ ಕ್ಷಣಮಾತ್ರದಲ್ಲಿ ಆನೆ ಯುವತಿಯನ್ನು ಎತ್ತೆಸೆದಿದೆ.
ಇದನ್ನೂ ಓದಿ:ಮುಸ್ಲಿಂ ಕುಟುಂಬಗಳಿಗೆ ಲಕ್ಷಗಟ್ಟಲೆ ಹಣ ಹಂಚುತ್ತಿರುವ ವಿಡಿಯೋ ವೈರಲ್..ಹೈದರಾಬಾದ್ ವ್ಯಕ್ತಿ ಬಂಧನ!
ಮೇವು ತಿನ್ನುತ್ತಿದ್ದ ಆನೆಯ ಪಕ್ಕಕ್ಕೆ ತೆರಳಿದ ಯುವತಿಯನ್ನು ಆನೆ ತಳ್ಳಿದ ಘಟನೆ ನಡೆದಿದೆ. ಆನೆಯ ದಾಳಿಗೆ ಯುವತಿ ಮಾರುದ್ದ ದೂರಕ್ಕೆ ಚಿಮ್ಮಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಸಾಕಾನೆಗಳ ಶಿಬಿರಕ್ಕೆ ತೆರಳಿದ ಯುವತಿ ಹಾಗೂ ಇತರರು ಆನೆಯ ವಿಡಿಯೋ ಮಾಡಲು ಮುಂದಾಗಿದ್ದಾರೆ. ದ್ವಿಚಕ್ರ ವಾಹನದಿಂದ ಇಳಿದ ಯುವತಿ ನೇರವಾಗಿ ಆನೆಯ ಬಳಿ ತೆರಳಿದ್ದಾರೆ. ಇತ್ತ ಆನೆ ಗರಿಗಳನ್ನು ತಿನ್ನುತ್ತಿತ್ತು. ಈ ವಿಡಿಯೋದಲ್ಲಿ ಎರಡು ಆನೆಗಳನ್ನು ಕಾಣಬಹುದು.
ಯುವತಿ ವಾಹನ ಇಳಿಯುತ್ತಿದ್ದಂತೆ ವಿಡಿಯೋ ಶೂಟ್ ಆರಂಭಗೊಂಡಿದೆ. ಆನೆಯ ಹತ್ತಿರದ ಹೋದ ಯುವತಿ ವಿಡಿಯೋ ಮಾಡುತ್ತಿದ್ದ ಆಪ್ತರನ್ನು ಹತ್ತಿರ ಕರೆದಿದ್ದಾಳೆ. ಯುವತಿ ಆನೆ ಸಮೀಪಕ್ಕೆ ಬರುತ್ತಿದ್ದಂತೆ ಆನೆ ಲಕ್ಷಣಗಳು ಬದಲಾಗಿದೆ. ಸಮಾಧಾನದಿಂದ ತಿನ್ನುತ್ತಿದ್ದ ಆನೆಯಲ್ಲಿ ಆತಂಕ, ಭಯ ಶುರುವಾಗಿದೆ. ಆದರೆ ಯುವತಿ ಮತ್ತಷ್ಟು ಆನೆಯ ಹತ್ತಿರಕ್ಕೆ ಹೋಗಿ ನಿಂತಿದ್ದಾಳೆ.
ತಿನ್ನುತ್ತಿದ್ದ ಆನೆ ಏಕಾಏಕಿ ತಲೆ ಎತ್ತಿ ಯುವತಿ ಮೇಲೆ ದಾಳಿ ಮಾಡಿದೆ. ಆನೆಯ ದಾಳಿಗೆ ಯುವತಿ ಮಾರುದ್ದ ದೂರ ಹೋಗಿ ಬಿದ್ದಿದ್ದಾಳೆ. ಯುವತಿ ಬಿದ್ದ ಬಿನ್ನಲ್ಲೆ ಆನೆ ಕೂಡ ಗಾಬರಿಗೊಂಡಿದೆ. ಅದೃಷ್ಠವಶಾತ್ ಮತ್ತೆ ದಾಳಿ ಮಾಡಿಲ್ಲ. ಇತ್ತ ಯುವತಿ ಎದ್ದೆನೋ ಬಿದ್ದೆನೋ ಎಂದು ಎದ್ದು ದೂರಕ್ಕೆ ಓಡಿದ್ದಾಳೆ. !
ವನ್ಯಪ್ರಾಣಿಗಳನ್ನು ಅದರಷ್ಟಕ್ಕೆ ಬಿಟ್ಟುಬಿಡಿ. ಅದರ ಮುಂದೆ ಪೋಟೋ, ಫೋಸ್, ಆತ್ಮೀಯಾರಗುವ ಪ್ರಯತ್ನ, ಮುಟ್ಟುವ ಪ್ರಯತ್ನ ಮಾಡಬೇಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ದೂರದಿಂದ ಆನೆ ನೋಡಿ ಖುಷಿಪಡುವುದಕ್ಕಿಂತ ಹತ್ತಿರ ಹೋಗುವ ಸಾಹಸ ಬೇಕಿತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ.
ಮನಮಿಡಿಯುವಂತಿದೆ ಸಮಂತಾ – ನಾಗ ಚೈತನ್ಯ ವಿಡಿಯೋ… ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
