ಕೀನ್ಯಾ: ಈಗ ಎಲ್ಲೆಲ್ಲೂ ಆನೆಯ ಮಾತೇ. ಕೇರಳದಲ್ಲಿ ಪಟಾಕಿಯಿದ್ದ ಹಣ್ಣು ತಿಂದು ಗರ್ಭಿಣಿ ಆನೆ ಮೃತಪಟ್ಟಿರುವ ಬೆನ್ನಲ್ಲೇ ಅನೇಕ ಆನೆಗಳ ಹತ್ಯೆಗಳ ಬಗ್ಗೆ ವರದಿಯಾಗುತ್ತಲೇ ಇದೆ. ಇದೇ ಕಾರಣಕ್ಕೆ ಆನೆ ಎಂದರೆ ನೋವಿನ ಸಂಗತಿಗಳೇ ಕೇಳಿಬರುತ್ತಿವೆ.ಇದರ ನಡುವೆಯೇ, ಮುದ್ದುಮುದ್ದಾದ ಮರಿ ಆನೆಯೊಂದು ಓಡಿಬಂದು ಬಾಟಲಿ ಹಾಲನ್ನು ಕುಡಿಯುತ್ತಿರುವ ವಿಡಿಯೋ ಭಾರಿ ವೈರಲ್​ ಆಗಿದೆ. ಚಿಕ್ಕ ಮಕ್ಕಳಂತೆ ಓಡೋಡಿ ಬಂದು ಹಾಲು ಕುಡಿಯುತ್ತಿರುವ 39 ಸೆಕೆಂಡುಗಳ ವಿಡಿಯೋ ಕ್ಷಣ ಮಾತ್ರದಲ್ಲಿ 12 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್​ ಆಗಿದೆ.ಇದನ್ನೂ ಓದಿ:VIDEO| ಸರಳವಾಗಿ ನಡೆಯಿತು ಮಯೂರಿ ಮದುವೆ …ಅಮ್ಮನನ್ನು ಕಳೆದುಕೊಂಡಿರುವ ಈ ಮರಿ ಆನೆ ಇರುವುದು ಕೀನ್ಯಾದ ಶೆಲ್ಡ್ರಿಕ್ ವೈಲ್ಡ್​ಲೈಫ್​ ಸೆಂಚುರಿಯಲ್ಲಿ. ಇದಕ್ಕೆ ಬಾಟಲಿ ಹಾಲು ನೀಡಿ ಬೆಳೆಸಲಾಗುತ್ತಿದೆ ಎಂದು ಟ್ವಿಟರ್​ನಲ್ಲಿ ಅವರು ಅಲ್ಲಿಯ ಸಿಬ್ಬಂದಿ ಹಂಚಿಕೊಂಡಿದ್ದಾರೆ.ಇದಕ್ಕೆ ಅನೇಕ ಮಂದಿ ಆನೆಗೆ ಹಾಲು ಕುಡಿಸಿದರೆ ಸಮಸ್ಯೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಸಿಬ್ಬಂದಿ, ಆನೆಗಾಗಿಯೇ ವಿಶೇಷ ರೀತಿಯ ಹಾಲನ್ನು ತಯಾರಿಸಲಾಗುತ್ತದೆ. ಅನೇಕ ಸಂಶೋಧನೆ ಬಳಿಕ ಇದಕ್ಕಾಗಿಯೇ ವಿಶೇಷ ಎನಿಸುವ ಹಾಲು ಮೀಸಲು ಇಡಲಾಗಿದೆ ಎಂದು ಹೇಳಿದ್ದಾರೆ.
Maktao is on a mission to get back quickly for one of two bottles of milk. Orphans at our Nursery sleep in stockades to offer warmth & protection during the night, and explore the protected forest by day with their Keepers. Meet the herd at:https://t.co/2AIu1Bjoknpic.twitter.com/7xVRS1XUxc— Sheldrick Wildlife Trust (@SheldrickTrust)June 10, 2020
Maktao is on a mission to get back quickly for one of two bottles of milk. Orphans at our Nursery sleep in stockades to offer warmth & protection during the night, and explore the protected forest by day with their Keepers. Meet the herd at:https://t.co/2AIu1Bjoknpic.twitter.com/7xVRS1XUxc


ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty − 16 =
Remember me
