ಭಾರವಾದ ಮನಸ್ಸನ್ನು ತುಸು ಹಗುರಗೊಳಿಸಿಕೊಳ್ಳಲು ಜನ ಸಿನೆಮಾ, ನಾಟಕ, ಸರ್ಕಸ್ ನೋಡುತ್ತಾರೆ. ಪ್ರವಾಸ ಮಾಡುತ್ತಾರೆ. ಹೀಗೆ ಮನರಂಜನೆಗಾಗಿ ಆಯ್ದುಕೊಳ್ಳುವ ಇವೆಲ್ಲವುಗಳ ಪೈಕಿ ಪ್ರಾಣಿಗಳ ಆಟ ನೋಡುವುದೂ ಒಂದು ಆಯ್ಕೆಯ ವಿಷಯವೇ ಆಗಿರುತ್ತದೆ ಅಲ್ಲವೆ?ಪ್ರಾಣಿಗಳ ಆಟ ಯಾರಿಗೆ ಇಷ್ಟವಾಗುದಿಲ್ಲ ಹೇಳಿ? ಅದರಲ್ಲೂ ಆನೆಯ ಆಟ ಆಬಾಲವೃದ್ಧರಾಗಿ ಎಲ್ಲರಿಗೂ ಇಷ್ಟವಾಗುವಂಥದ್ದೇ.
ಇದನ್ನೂ ಓದಿ:ನೀರು, ಪಿಪಿಇ ಕಿಟ್​ ಕೇಳಿದ ನರ್ಸ್​ಗಳಿಗೆ ವಾಟ್ಸ್ಯಾಪ್​​ನಲ್ಲಿಯೇ ವಜಾ ಆದೇಶ ಕಳುಹಿಸಿದ್ರು…!
ಕರ್ನಾಟಕ ಮೃಗಾಲಯವೊಂದರಲ್ಲಿನ ಆನೆ ಮರಿಯ ಈ ಆಟ ನೋಡಿ. ಈ ಆನೆ ಮರಿ ಮೃಗಾಲಯದ ತನ್ನ ಪಾಲಕನೊಂದಿಗೆ ಆಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮೋಜಿನ ಅಲೆ ಎಬ್ಬಿಸಿದೆ. Zoos of Karnataka’ ಇತ್ತೀಚೆಗೆ ರಕ್ಷಿಸಿದ ಮರಿ ವೇದಾವತಿ, ಅದರ ರಕ್ಷಕ ಸೋಮುನೊಂದಿಗೆ ಇರುವ ಎರಡು ವೀಡಿಯೊಗಳನ್ನು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದೆ.
#Rescuedelephantcalf#Vedavathi@Mysore_Zoounder watchful eyes of#Somu, skilled animal keeper, who so far hand reared & successfully raised 5#Orphanedcalves, all have become grown up now, viz; Aishwarya, Kollegala, Madesh,Chamundi.@aranya_kfd@CZA_Delhi@AnandSinghBSpic.twitter.com/uLKUwduXiQ
— Zoos of Karnataka (@ZKarnataka)July 13, 2020

#Vedavathilives walking and running,#Somutakes around three times in a day. Look how she runs!!She was 89 kgs , when arrived now 110kgs, gained any 20kgs in two months.@aranya_kfd@CZA_Delhi@AnandSinghBS@KarnatakaWorld@PIBBengalurupic.twitter.com/PFPlpFshWi
— Zoos of Karnataka (@ZKarnataka)July 13, 2020

ಮೈಸೂರು ಮೃಗಾಲಯದಲ್ಲಿ ಆನೆ ಮರಿ ತನ್ನ ರಕ್ಷಕನೊಂದಿಗೆ ನಿತ್ಯ ಆಟ ಆಡುತ್ತದೆ ಎಂದು ವೀಡಿಯೊ ದೃಶ್ಯಾವಳಿಗಳು ಹೇಳುತ್ತವೆ. ವೇದಾವತಿ ವಾಕಿಂಗ್ ಮತ್ತು ಓಟವನ್ನು ಇಷ್ಟಪಡುತ್ತದೆ, ಆದ್ದರಿಂದ ಸೋಮು ಅದನ್ನು ದಿನಕ್ಕೆ ಮೂರು ಬಾರಿ ಮೃಗಾಲಯದ ಸುತ್ತಲೂ ಸುತ್ತಾಡಲು ಕರೆದೊಯ್ಯುತ್ತಾನೆ.ಮೃಗಾಲಯಕ್ಕೆ ಬಂದಾಗ 89 ಕೆಜಿ ತೂಕವಿದ್ದ ವೇದಾವತಿ ಈಗ ಕಳೆದ ಎರಡು ತಿಂಗಳಲ್ಲಿ 20 ಕೆಜಿ ತೂಕ ಹೆಚ್ಚಿಸಿಕೊಂಡು ಸುಂದರವಾಗಿ ಬೆಳೆದಿದೆ.”ಸಂರಕ್ಷಿತ ಆನೆ ಮರಿ ವೇದಾವತಿ ಸದ್ಯ ಮೈಸೂರು ಮೃಗಾಲಯದಲ್ಲಿದ್ದು ನುರಿತ ಪ್ರಾಣಿ ಪಾಲಕ ಸೋಮುವಿನ ಕಾವಲಿನಡಿ ಇದೆ. ಇದುವರೆಗೆ ಆತ 5 ಅನಾಥ ಮರಿಗಳನ್ನು ಪಾಲನೆ ಮಾಡಿ ಯಶಸ್ವಿಯಾಗಿ ಬೆಳೆಸಿದ್ದಾರೆ, ಎಲ್ಲವೂ ಈಗ ಆರೋಗ್ಯಪೂರ್ಣವಾಗಿ ಬೆಳೆದಿವೆ “ಎಂದು ‘Zoos of Karnataka’ ಟ್ವೀಟರ್​​ನಲ್ಲಿ ಬರೆದುಕೊಂಡಿದೆ.ವೀಡಿಯೊಗಳು ವೈರಲ್‌ ಆಗಿದ್ದು, 6,500 ಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿವೆ.ಮುದ್ದಾದ ಆನೆ ಮರಿ ದೀರ್ಘಕಾಲ ಬಾಳಲಿ ಎಂದು ನೆಟ್ಟಿಗರು ಹರಸಿ ಹಾರೈದ್ದಾರೆ.
ಕ್ವಾರ್ಟರ್‌, ಲಾರ್ಜ್‌, ನೈಂಟಿಗೆ ‘ಬ್ರಹ್ಮ’ ಏಕೆ? ಶುರುವಾಗಿದೆ ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
