ಚೆನ್ನೈ:ದೇಶಾದ್ಯಂತ ಭೀಕರ ಬರ ಕಾಣಿಸಿಕೊಂಡಿದ್ದು, ವನ್ಯ ಜೀವಿಗಳು ನೀರಿಗಾಗಿ ಕಿಲೋಮೀಟರ್​ಗಟ್ಟಲೆ ಅಲೆದಾಟ ನಡೆಸಬೇಕಾದ ಪರಿಸಿಸ್ಥಿತಿ ಇದೆ. ಆದರೆ ತಮಿಳುನಾಡಿನ ಅರಣ್ಯ ಇಲಾಖೆ ದಟ್ಟ ಕಾನನದ ನಡುವೆ ನಿರ್ಮಿಸಿರುವ ಪುಟ್ಟ ನೀರಿನ ತೊಟ್ಟಿಗಳು ದೈತ್ಯ ಆನೆಗಳಿಗೆ ಬಾಯಾರಿಕೆ ನೀಗಿಸಿಕೊಳ್ಳಲು ಸಹಕಾರಿಯಾಗಿವೆ. ಸರಳವಾದ ನೀರಿನ ತೊಟ್ಟಿಯಲ್ಲಿ ಜಂಬೋ ಕುಟುಂಬಗಳು ಸಂಭ್ರಮಿಸುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ, ಅರಣ್ಯ ಅಧಿಕಾರಿಗಳು ‘X ‘(ಎಕ್ಸ್​)ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, 24,000 ಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ.
ಇದನ್ನೂ ಓದಿ:ಕೇರಳದ ನ್ಯೂಸ್​ ಚಾನೆಲ್‌ ಬ್ಯಾಂಕ್‌ ಅಕೌಂಟ್‌ ಸ್ಥಗಿತ..! ಇದರಲ್ಲಿದೆಯೇ ಡಿ.ಕೆ.ಶಿ ಹೂಡಿಕೆ?
ತಮಿಳುನಾಡಿನ ದಟ್ಟ ಅರಣ್ಯದ ನಡುವೆ ಆನೆಗಳ ಕುಟುಂಬವೊಂದು ವಿಡಿಯೋದಲ್ಲಿ ಸೆರೆಯಾಗಿದೆ. ಭಾರತೀಯ ಆಡಳಿತ ಸೇವೆ (ಐಎಎಸ್​) ಅಧಿಕಾರಿ ಸುಪ್ರಿಯಾ ಸಾಹು X(ಎಕ್ಸ್​) ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ, ಪುಟ್ಟ ಮರಿಗಳನ್ನು ಹೊಂದಿರುವ ಜಂಬೋ ಕುಟುಂಬವು ಹೊಸದಾಗಿ ನಿರ್ಮಿಸಲಾದ ನೀರಿನ ತೊಟ್ಟಿಯಲ್ಲಿ ಆನಂದಿಸುವುದನ್ನು ಕಾಣಬಹುದು. ವನ್ಯಜೀವಿ ಆವಾಸಸ್ಥಾನದಲ್ಲಿ ಶುದ್ಧ ನೀರಿನ್ನೊದಗಿಸುವ ಈ ಕ್ರಮವು ಅರಣ್ಯ ಇಲಾಖೆ ಕೈಗೊಂಡ ಪ್ರಯತ್ನಗಳಲ್ಲಿ ಒಂದಾಗಿದ್ದು, ಈಗ ಪ್ರತಿಫಲ ನೀಡುತ್ತಿದೆ.ನದಿ, ತೊರೆಗಳಲ್ಲಿ ಸ್ವಚ್ಛಂದವಾಗಿ ವಿಹರಿಸುವ ಈ ದೈತ್ಯ ಜೀವಿಗಳು ಸಣ್ಣ ತೊಟ್ಟಿಯನ್ನು ಆಶ್ರಯಿಸಿರುವುದು ವೀಡಿಯೋ ಖಚಿತಪಡಿಸುತ್ತದೆ. ಅವು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುವುದನ್ನು ತೋರಿಸುತ್ತದೆ, ಇಂತಹ ಸರಳವಾದ ನೀರಿನ ತೊಟ್ಟಿಗಳನ್ನು ನಿರ್ಮಿಸುವುದೂ ಸೇರಿದಂತೆ ಮೇವು ಯಥೇಚ್ಛವಾಗಿ ಸಿಗುವ ಮರಗಳನ್ನು ಬೆಳೆಸಿದರೆ ವನ್ಯ ಜೀವಿಗಳು ಮತ್ತು ಮಾನವ ಸಂಘರ್ಷ ತಡೆಯಬಹುದು ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.“ಆನೆಗಳು ಮತ್ತು ವನ್ಯಜೀವಿಗಳಿಗಾಗಿ ತಮಿಳುನಾಡಿನ ದಟ್ಟ ಅರಣ್ಯಗಳಲ್ಲಿ ಕಳೆದ ವರ್ಷ 17 ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಈ ವರ್ಷ ಜೀವವೈವಿಧ್ಯ ಸಂರಕ್ಷಣೆ ಮತ್ತು ಗ್ರೀನಿಂಗ್ ಯೋಜನೆಯ ಅಡಿಯಲ್ಲಿ 18 ತೊಟ್ಟಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವೀಡಿಯೋ ಕುರಿತು ಕಾಮೆಂಟ್ ಮಾಡಿರುವ X(ಎಕ್ಸ್​)ಬಳಕೆದಾರರು “ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ಹೆಚ್ಚು ಅಗತ್ಯವಿರುವ ಸಂಪನ್ಮೂಲ” ಎಂದು ಬರೆದಿದ್ದಾರೆ.ಮತ್ತೊಬ್ಬ ಬಳಕೆದಾರ, “ನೀರು ಸಂತೋಷ” ಎಂದು ಕಾಮೆಂಟ್ ಮಾಡಿದ್ದಾರೆ. “ನೋಡಲು ಎಂತಹ ದೃಶ್ಯ! ನಿಜಕ್ಕೂ ಅದ್ಭುತವಾಗಿದೆ. ಇದು ನಮ್ಮ ಅರಣ್ಯವನ್ನು ರಕ್ಷಿಸುವ ಮತ್ತು ಹಸಿರು ಹೊದಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಧನ್ಯವಾದಗಳು ಎಂದು ಮೂರನೇ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.“ನಿಜವಾಗಿಯೂ ಸುಂದರವಾಗಿದೆ. ಇಂತಹ ಉತ್ತಮ ಕೆಲಸ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ತುಂಬಾ ಚೆನ್ನಾಗಿ ಕಾರ್ಯಗತಗೊಳಿಸಲಾಗಿದೆ. ಆನೆಗಳು ದಾಹ ನೀಗಿಸಿಕೊಳ್ಳುವುದು ಹೃದಯಸ್ಪರ್ಶಿಯಾಗಿದೆ ಎಂದು ನಾಲ್ಕನೇ ಬಳಕೆದಾರ X(ಎಕ್ಸ್​) ನಲ್ಲಿ ಬರೆದಿದ್ದಾರೆ. ಇನ್ನು ಐದನೇ ಬಳಕೆದಾರರು “ವಾವ್! ಇದು ನಿಜವಾಗಿಯೂ ಸಂತೋಷದ ಸುದ್ದಿ! ಈ ತೊಟ್ಟಿಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಯೋಚಿಸಿದ ಎಲ್ಲರಿಗೂ ಧನ್ಯವಾದಗಳು. ಇದು ಹೃದಯಸ್ಪರ್ಶಿಯಾಗಿದೆ!” ಎಂದು ಬರೆದಿದ್ದಾರೆ
ಆಧಾರ್​ ನಿಷ್ಕ್ರಿಯೆಗೊಳಿಸ್ತಿದೆ: ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + six =
Remember me
