ಲಖನೌ :ವಿವಾಹವೆಂದರೆ ಉತ್ತರ ಭಾರತದಲ್ಲಿ ವರನ ಆಗಮನಕ್ಕೆ ಭಾರೀ ಮಹತ್ವ. ‘ಬಾರಾತ್’​ ಎಂದು ಕರೆಯುವ ಈ ಮದುವೆ ದಿಬ್ಬಣ ಅದ್ಧೂರಿಯಾಗಿದ್ದಷ್ಟೂ ವರನ ಕಡೆಯವರಿಗೆ ಬಿಗುಮಾನ ಹೆಚ್ಚು ಎನ್ನುತ್ತಾರೆ. ಬಾರಾತ್​ನಲ್ಲಿ ಕುದುರೆಗಳನ್ನು ಒಯ್ಯುವುದು ಸಾಮಾನ್ಯ. ಇಲ್ಲೊಬ್ಬ ವರ ಆನೆಯನ್ನೂ ತಂದಿದ್ದ. ಜನರು ಮೆಚ್ಚಿದ್ದೇನೋ ಸರಿ, ಆದರೆ ಮುಂದೆ ಆದದ್ದೆಲ್ಲಾ ಅವಾಂತರ!
ಉತ್ತರಪ್ರದೇಶದ ಪ್ರಯಾಗ್ರಾಜ್ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ನಾರಾಯಣಪುರದಿಂದ ಸರಾಯಿ ಇನಾಯತ್​ನ ಅಮ್ಲಾಪುರಕ್ಕೆ ಬಂದ ಆನಂದ್​ ತ್ರಿಪಾಠಿ ಎಂಬ ವರನ ಬಾರಾತ್​ನಲ್ಲಿ ಆನೆಯೊಂದು ಬಂದಿತ್ತು. ರಂಗುರಂಗಿನ ಬಟ್ಟೆ ತೊಟ್ಟು ಮೆರವಣಿಗೆಯಲ್ಲಿದ್ದ ವರನ ಪರಿವಾರದವರೊಂದಿಗೆ ಆನೆಯೂ ಮಾವುತನ ಸಾರಥ್ಯದಲ್ಲಿ ಹೆಜ್ಜೆ ಹಾಕುತ್ತಿತ್ತು. ವಧುವಿನ ಮನೆಯ ಬಳಿ ತಲುಪಿದಾಗ ಓಲಗದೊಂದಿಗೆ ಪಟಾಕಿ ಹೊಡೆಯಲು ಆರಂಭಿಸಿದ್ದರಿಂದ ಉದ್ರೇಕಕ್ಕೊಳಗಾದ ಆನೆಯು, ಅಕ್ಕಪಕ್ಕದಲ್ಲಿ ನಿಂತಿದ್ದ ಕಾರುಗಳನ್ನು ಎತ್ತಾಡಿತು. ಕೊನೆಗೆ ಮದುವೆಗೆ ಸಿದ್ಧಪಡಿಸಿದ್ದ ಪಂಡಾಲನ್ನೂ ಹಾಳುಗೆಡವಿತು ಎನ್ನಲಾಗಿದೆ.
ಇದನ್ನೂ ಓದಿ:ಡೇಟಿಂಗ್​ ಆ್ಯಪ್​ ಮೂಲಕ ಪುಸಲಾಯಿಸಿ ಕರೆದರು, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್​ ಮಾಡಿದರು!
ಮೆರವಣಿಗೆಯಲ್ಲಿ ಬಂದಿದ್ದ ಜನರು ಚದುರಲು ಆರಂಭಿಸಿದಂತೆ, ಸ್ಥಳೀಯರು ಮನೆಗಳ ಒಳಗೆ ಹೋಗಿ ಬಾಗಿಲು ಹಾಕಿಕೊಂಡರು. ಬಗ್ಗಿಯಲ್ಲಿ ಕುಳಿತಿದ್ದ ವರ ಇಳಿದು ಓಡಿದ! ಆನೆಯು ಕೆಲ ಸಮಯ ಮದವೇರಿದಂತೆ ಓಡಾಡಿದ ನಂತರ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸ್​ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಮಾವುತ ಆನೆಯನ್ನು ಸುಧಾರಿಸಿದ. ಇಷ್ಟೆಲ್ಲಾ ರಂಪಾಟವಾಗಿ 11 ಗಂಟೆಯ ಸುಮಾರಿಗೆ ಮತ್ತೆ ಮದುವೆಯ ಕಾರ್ಯಕ್ರಮಗಳು ಮುಂದುವರೆದವು ಎನ್ನಲಾಗಿದೆ.(ಏಜೆನ್ಸೀಸ್)
ವೈದ್ಯರ ಮೇಲೆ ಹಲ್ಲೆ : ಜೂನ್​ 18 ರಂದು ಐಎಂಎ ಪ್ರತಿಭಟನೆ

17 ದಿನಗಳಲ್ಲಿ ಸಿದ್ಧವಾದ 500 ಬೆಡ್​ಗಳ ಕೋವಿಡ್ ಆಸ್ಪತ್ರೆ : ಡಿಆರ್​ಡಿಒ ಚಮತ್ಕಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 1 =
Remember me
