ಕೊರ್ಬಾ:ಛತ್ತೀಸಗಢದ ಸೂರಜ್‌ಪುರ ಜಿಲ್ಲೆಯಲ್ಲಿ 55 ವರ್ಷದ ಮಹಿಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾಳೆ.ಕಿಯುಲಿಬಾಯಿ ಎಂಬಾಕೆ ಸೋಮವಾರ ಸಂಜೆ ಭತ್ತದ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಮರಳುತ್ತಿದ್ದಾಗ ಆನೆಪ್ರತಾಪ್​​ಪುರ ಅರಣ್ಯ ವ್ಯಾಪ್ತಿಯ ಜಿಂಗಾ ಗ್ರಾಮದಲ್ಲಿ ಮಹಿಳೆ ಮೇಲೆ ದಾಳಿ ಮಾಡಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ (ಸೂರಜ್​​ಪುರ ವಿಭಾಗ) ಜೆ.ಆರ್.ಭಗತ್ ತಿಳಿಸಿದ್ದಾರೆ.
ಇದನ್ನೂ ಓದಿ:ಟ್ರಾವೆಲ್ ಏಜೆಂಟ್ ಆತ್ಮಹತ್ಯೆಗೂ ವಿದ್ಯಾರ್ಥಿ ವೀಸಾಗೂ ಏನು ಸಂಬಂಧ? ಆತ್ಮಹತ್ಯೆ ಪತ್ರದಲ್ಲಿತ್ತು ನಾಲ್ವರ ಹೆಸರು
ಸೂರಜ್‌ಪುರ ಅಲ್ಲಿಂದ ಸುಮಾರು 174 ಕಿ.ಮೀ ದೂರದಲ್ಲಿದೆ. ಅವಳ ಜೊತೆಯಲ್ಲಿದ್ದ ಇತರ ಮಹಿಳೆಯರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಆನೆ ಈ ಮಹಿಳೆಯನ್ನು ಹಿಡಿದು ನೆಲದ ಮೇಲೆ ಉರುಳಿಸಿ ಸ್ಥಳದಲ್ಲೇ ಕೊಂದು ಹಾಕಿದೆ ಎಂದು ಅವರು ಹೇಳಿದರು.ಘಟನಾ ಸ್ಥಳಕ್ಕೆ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಮೃತ ಮಹಿಳೆಯ ಸಂಬಂಧಿಗೆ 25 ಸಾವಿರ ರೂ.ಗಳ ತುರ್ತು ಪರಿಹಾರ ನೀಡಲಾಗಿದ್ದು, ಉಳಿದ 5.75 ಲಕ್ಷ ರೂ.ಗಳ ಪರಿಹಾರವನ್ನು ಅಗತ್ಯ ವಿಚಾರಣೆ ನಂತರ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಶ್ರಮಿಸಿದ ಪ್ರಮುಖರನ್ನು ನೆನಪಿಸಿಕೊಂಡ ಮೋಹನ್​ ಭಾಗವತ್​
ಕಳೆದ ಎರಡು ದಿನಗಳಿಂದ ಈ ಪ್ರದೇಶದಲ್ಲಿ 13 ಆನೆಗಳ ಹಿಂಡು ಸಂಚರಿಸುತ್ತಿರುವ ಬಗ್ಗೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.ಸುರ್ಗುಜಾ, ಸೂರಜ್‌ಪುರ, ಕೊರ್ಬಾ, ರಾಯ್‌ಗಢ, ಜಶ್‌ಪುರ, ಬಲರಾಂಪುರ ಸೇರಿ ಉತ್ತರ ಛತ್ತೀಸ್‌ಗಢದಿಂದ ಮಾನವ-ಆನೆ ಸಂಘರ್ಷದ ಹಲವಾರು ಘಟನೆಗಳು ಈ ಹಿಂದೆ ವರದಿಯಾಗಿವೆ.
https://www.vijayavani.net/dream-of-every-child-to-become-ias-officer/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
