ತಿರುವನಂತಪುರಂ:ಆಘಾತಕಾರಿ ಘಟನೆಯೊಂದರಲ್ಲಿ ಮಾವುತನನ್ನು ಆನೆಯೊಂದು ಭೀಕರವಾಗಿ ತುಳಿದು ಸಾಯಿಸಿರುವ ಘಟನೆ ದೇವರನಾಡು ಕೇರಳದ ಕಲ್ಲರ್​ನಲ್ಲಿ ನಡೆದಿದೆ. ಮೃತರನ್ನು ಬಾಲಕೃಷ್ಣನ್​ (62) ಎಂದು ಗುರುತಿಸಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಆನೆಗೆ ಮಾವುತ ಸರಿಯಾಗಿ ನಿಲ್ಲುವಂತೆ ಸೂಚಿಸುತ್ತಾನೆ. ಕೆಲಕಾಲ ಮಾವುತನ ಮಾತನ್ನು ಕೇಳುವ ಆನೆ ಆ ಬಳಿಕ ಆತನನ್ನು ನೆಲಕ್ಕೆ ಹಾಕಿ ಹೊಸಗಲು ಶುರು ಮಾಡುತ್ತದೆ. ಬಳಿಕ ತನ್ನ ಸೊಂಡಿಲಿನಿಂದ ಎತ್ತಿ ಮಾವುತನನ್ನು ಬಿಸಾಡುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಸಂತಾಪ ಸೂಚಿಸಿದ್ದಾರೆ.
INDIA – 🇮🇳 6/20/24 – A mahout (elephant trainer) named Balakrishnan, 62, was trying to get the elephant to move into position for a tourist to ride when the elephant turned against him. I'm sure all that poking and prodding doesn't feel so good. More info in comments."pic.twitter.com/xXrncV7D3o
ಇದನ್ನೂ ಓದಿ:ಕುರಾನ್​ಗೆ ಅವಮಾನ ಮಾಡಿದ ಆರೋಪ; ಪೊಲೀಸ್​ ಠಾಣೆಗೆ ನುಗ್ಗಿ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟ ಜನ
ಈ ಕುರಿತು ಪ್ರತಿಕ್ರಿಯಿಸಿರುವ ಇಡುಕ್ಕಿ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೃತರನ್ನು ನೀಲೇಶ್ವರಂ ಮೂಲದ ಬಾಲಕೃಷ್ಣನ್​ ಎಂದು ಗುರುತಿಸಲಾಗಿದ್ದು, ಕಲ್ಲರ್​ನಲ್ಲಿ ಅಕ್ರಮ ಆನೆ ಸಫಾರಿ ನಡೆಸುತ್ತಿದ್ದದ್ದು, ಮಾವುತನ ಹತ್ಯೆಯ ಬಳಿಕ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಕ್ರಮ ಆನೆ ಸಫಾರಿ ಹಾಗೂ ಮಾವುತನ ಹತ್ಯೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಸಫಾರಿಯಲ್ಲಿರುವ ಆನೆಗಳು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲಾಗಿಲ್ಲ. ಈ ಸಂಬಂಧ ಮಾಲೀಕರಿಗೆ ನೋಟಿಸ್​ ನೀಡಲಾಗಿದ್ದು, ಆನೆಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸುವಂತೆ ಸೂಚಿಸಲಾಗಿದೆ. ಇದಲ್ಲದೆ ರಾಜ್ಯದಲ್ಲಿ ಈ ರೀತಿಯ ಅನೇಕ ಸಫಾರಿಗಳು ತಲೆ ಎತ್ತಿದ್ದು, ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇಡುಕ್ಕಿ ವಿಭಾಗದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − one =
Remember me
