ಉತ್ತರಾಖಂಡ್:ಜನರು ಪ್ರತಿಭಟನೆ ನಡೆಸಿ ರಾಜಕಾರಣಿಗಳನ್ನು ರಸ್ತೆ ಮಧ್ಯೆ ತಡೆದ ಸುದ್ದಿಯನ್ನು ಈ ಹಿಂದೆ ಸಾಕಷ್ಟು ಬಾರಿ ಕೇಳಿದ್ದೇವೆ. ಇದೀಗ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ರಾವತ್​​ರನ್ನು ರಸ್ತೆ ಮಧ್ಯೆ ತಡೆಯಲಾಗಿದೆ. ಇವರ ಪ್ರಯಾಣಕ್ಕೆ ಅಡಚಣೆ ಉಂಟು ಮಾಡಿದ್ದು ಯಾವುದೇ ಪ್ರತಿಭಟನಾಕಾರರಲ್ಲ. ಬದಲಾಗಿ ಆನೆ.
ಹೌದು, ಪೌರಿಯಿಂದ ರಸ್ತೆ ಮಾರ್ಗವಾಗಿ ಕೋಟ್ವಾರ್​ಗೆ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ಬರುತ್ತಿದ್ದರು. ಈ ವೇಳೆ ಅವರನ್ನು ರಸ್ತೆ ಮಧ್ಯೆ ಆನೆಯೊಂದು ಅಡ್ಡಗಟ್ಟಿದೆ. ಭಯಬೀತರಾದ ಮಾಜಿ ಮುಖ್ಯಮಂತ್ರಿ ಜೀವ ಉಳಿಸಲು ಹತ್ತಿರದ ಗುಡ್ಡವೇರಿದ್ದಾರೆ.
ಕಾಡಿನ ನಡುವೆ ರಸ್ತೆ ಮಾರ್ಗದ ಮೂಲಕ ಸಂಚರಿಸುತ್ತಿದ್ದಾಗ ಸಂಜೆ ಸುಮಾರು ಆರು ಗಂಟೆಯ ವೇಳೆಗೆ ಆನೆಯೊಂದು ರಸ್ತೆ ಮಧ್ಯೆ ಬಂದಿದೆ. ಇದರಿಂದ ಸುಮಾರು ಅರ್ಧಗಂಟೆಯಷ್ಟು ಸಮಯ ಮಾಜಿ ಮುಖ್ಯಮಂತ್ರಿ ರಸ್ತೆ ಮಧ್ಯೆ ಬಾಕಿಯಾಗಿದ್ದಾರೆ.
ಆನೆ ರಸ್ತೆಯಲ್ಲಿದ್ದ ಜನರನ್ನು ಓಡಿಸಿಕೊಂಡು ಹೋಗುತ್ತಿರುವ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೇಳೆ ಜನರು ಹತ್ತಿರದಲ್ಲಿದ್ದ ಗುಡ್ಡೆಯತ್ತ ಓಡಿ ಹೋಗಿದ್ದಾರೆ. ಎತ್ತರದ ಪ್ರದೇಶವನ್ನು ಜನರು ಹತ್ತಿದ್ದರಿಂದ ಆನೆಗೆ ಹಿಂಬಾಲಿಸಿಕೊಂಡು ಹೋಗುವುದು ಕಷ್ಟವಾಗಿ ಹಿಂದೇಟು ಹಾಕಿದೆ.
ಸುಮಾರು ಅರ್ಧ ಗಂಟೆಯಷ್ಟು ನಡೆದ ಕಾರ್ಯಾಚರಣೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಆನೆಯನ್ನು ಕಾಡಿನತ್ತ ಓಡಿಸಲಾಯಿತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)
ವೀಡಿಯೋ ಇಲ್ಲಿದೆ ನೋಡಿ.(ಕೃಪೆ:News Tak)
Uttarakhand: कोटद्वार और पौड़ी के रास्ते में पूर्व मुख्यमंत्री त्रिवेंद्र सिंह रावत के काफिले के सामने आया हाथी, जान बचाने के लिए पहाड़ियों के बीच छिपे रावत, देखें वीडियो।#ViralVideo#TrivendraSinghRawat#Elephantpic.twitter.com/4qjJacvjnt— News Tak (@newstakofficial)September 15, 2022
Uttarakhand: कोटद्वार और पौड़ी के रास्ते में पूर्व मुख्यमंत्री त्रिवेंद्र सिंह रावत के काफिले के सामने आया हाथी, जान बचाने के लिए पहाड़ियों के बीच छिपे रावत, देखें वीडियो।#ViralVideo#TrivendraSinghRawat#Elephantpic.twitter.com/4qjJacvjnt
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 4 =
Remember me
