ನವದೆಹಲಿ: ಟೆಸ್ಲಾ ಕಂಪನಿಯ ಸಿಇಒ, ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್​ ಬಚ್ಚಿಟ್ಟಿದ್ದ ಆ ಮೂರನೇ ಮಗುವಿನ ವಿಷಯ ಕೊನೆಗೂ ಬಹಿರಂಗಗೊಂಡಿದೆ. ಎಲಾನ್ ಮಸ್ಕ್ ಜೀವನಚರಿತ್ರೆ ಕುರಿತ ಈ ಪುಸ್ತಕದಲ್ಲಿ ಆ ವಿಷಯ ಉಲ್ಲೇಖಗೊಂಡಿದೆ.
ಪತ್ರಕರ್ತ ವಾಲ್ಟರ್ ಐಸಾಕ್​ಸನ್ ಎಂಬವರು ಮಸ್ಕ್ ಮತ್ತು ಆತನ ಸಹೋದ್ಯೋಗಿಗಳ ಸಂದರ್ಶನಗಳು ಹಾಗೂ ಕಳೆದ ಎರಡು ವರ್ಷಗಳ ಅಧ್ಯಯನದ ಮೂಲಕ ಈ ಜೀವನಚರಿತ್ರೆಯನ್ನು ರಚಿಸಿದ್ದಾರೆ. ಸೆ. 12ರಂದು ಬಿಡುಗಡೆ ಆಗಲಿರುವ ಈ ಪುಸ್ತಕದ ವಿಮರ್ಶೆ ಮಾಧ್ಯಮವೊಂದರಲ್ಲಿ ಪ್ರಕಟವಾಗುವ ಮೂಲಕ ಆ ವಿಷಯ ಬಹಿರಂಗಗೊಂಡಿದೆ.
ಮಸ್ಕ್​ನ ಮಾಜಿ ಗೆಳತಿ ಗ್ರೈಮ್ಸ್​ ದಾಂಪತ್ಯದಲ್ಲಿ ಹುಟ್ಟಿದ್ದು ಇಬ್ಬರಲ್ಲ ಮೂವರು, ಆದರೆ ಆ ಮೂರನೇ ಮಗುವಿನ ವಿಷಯ ಗುಟ್ಟಾಗಿ ಇಡಲಾಗಿತ್ತು ಎಂಬ ಸಂಗತಿ ಇದೀಗ ಬಯಲಾಗಿದೆ. ಆ ಮೂರನೇ ಮಗನ ಹೆಸರು ಟೆಕ್ನೊ ಮೆಕಾನಿಕಸ್ (ಟಾ-Tau) ಎಂಬುದಾಗಿದ್ದು, ಈ ವಿಷಯ ಸಾರ್ವಜನಿಕರಿಗೆ ಗೊತ್ತಾಗದಂತೆ ಇರಿಸಲಾಗಿತ್ತು ಎಂಬುದು ಈ ಜೀವನಚರಿತ್ರೆಯಿಂದ ತಿಳಿದುಬಂದಿದೆ. ಈಕೆಯ ಹೊರತಾಗಿ ಮಸ್ಕ್​ಗೆ ಮೂವರು ಪತ್ನಿಯರಿದ್ದು, 11 ಮಕ್ಕಳಿದ್ದಾರೆ. ಒಂದು ಮಗು ಸಾವಿಗೀಡಾಗಿದೆ. –ಏಜೆನ್ಸೀಸ್
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಕೂದಲಿನ ಕಾರಣಕ್ಕೇ ಸುದ್ದಿಯಾದ ಅಮ್ಮ-ಮಗ; ಶಾಲೆಯಲ್ಲೂ ಪ್ರವೇಶಕ್ಕೆ ಆಕ್ಷೇಪ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
