ನವದೆಹಲಿ:ಸಿಇಒ ಸ್ಥಾನಕ್ಕೆ ಒಬ್ಬ ಮೂರ್ಖ ಸಿಕ್ಕಿದ ತಕ್ಷಣ ನಾನು ಆ ಸ್ಥಾನದಿಂದ ಇಳಿಯುತ್ತೇನೆ ಎಂದು ಹೇಳಿ, ನಿನ್ನೆಯಷ್ಟೇ ತನ್ನ ಸಾಕುನಾಯಿಯೊಂದನ್ನೇ ಸಿಇಒ ಎಂದು ಬಿಂಬಿಸಿಕೊಂಡಿದ್ದ ಟ್ವಿಟರ್​ ಮುಖ್ಯಸ್ಥ ಎಲಾನ್ ಮಸ್ಕ್​ ಕುರಿತು ಇನ್ನೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಮಸ್ಕ್​ ಭಾರತಲ್ಲಿನ ಮೂರು ಕಚೇರಿಗಳ ಪೈಕಿ ಎರಡನ್ನು ಮುಚ್ಚಿದ್ದಾರೆ.
ರಾಜಕೀಯದ ಕೇಂದ್ರವಾಗಿರುವ ನವದೆಹಲಿ ಹಾಗೂ ಆರ್ಥಿಕತೆಯ ಕೇಂದ್ರವಾಗಿರುವ ಮುಂಬೈನಲ್ಲಿ ಇರುವ ಟ್ವಿಟರ್​ ಕಚೇರಿಗಳನ್ನು ಮಸ್ಕ್​ ಬಂದ್ ಮಾಡಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮಸ್ಕ್​ ಟ್ಟಿಟರ್​ಗೆ ಸಂಬಂಧಿಸಿದಂತೆ ಆರ್ಥಿಕವಾಗಿ ಸದೃಢವಾಗಲು ಪರದಾಡುತ್ತಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿರುವ ಟ್ವಿಟರ್​ ಕಚೇರಿಗಳಲ್ಲಿನ ಸುಮಾರು 200 ಉದ್ಯೋಗಿಗಳ ಪೈಕಿ ಈಗಾಗಲೇ ಶೇ. 90 ಮಂದಿಯನ್ನು ಮನೆಗೆ ಕಳಿಸಿರುವ ಮಸ್ಕ್​, ಈಗ ಎರಡು ಕಚೇರಿಗಳನ್ನು ಕೂಡ ಬಂದ್ ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಟ್ವಿಟರ್​ ಕಚೇರಿ ಮಾತ್ರ ಭಾರತದಲ್ಲಿರುವ ಟ್ವಿಟರ್​ನ ಏಕೈಕ ಕಚೇರಿ ಆಗಿದ್ದು, ಮಸ್ಕ್ ಈ ನಡೆ ಇನ್ನಷ್ಟು ಕುತೂಹಲ ಕೆರಳಿಸಿದೆ.
ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

ಕೋವಿಡ್​ ತಡೆಯುವಲ್ಲಿ ಮಾಸ್ಕ್​ ನಿಜಕ್ಕೂ ಪರಿಣಾಮ ಬೀರಿದೆಯಾ?: ಇಲ್ಲಿದೆ ಅಧ್ಯಯನವೊಂದರ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
