ನವದೆಹಲಿ:ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬರಾಗಿರುವ ಉದ್ಯಮಿ ಎಲಾನ್​ ಮಸ್ಕ್​ನ ಹಳೇ ಲವರ್ ತನ್ನ ಮಲಮಗನ ಶಿಕ್ಷಣದ ಖರ್ಚಿಗಾಗಿ ಮಸ್ಕ್​ ಜತೆಗಿನ ಹಳೆಯ ಫೋಟೋಗಳನ್ನು ಹರಾಜಿಗಿಟ್ಟಿದ್ದಾಳೆ. ಜೆನ್ನಿಫರ್​ ಗ್ವಿನ್ನೆ ಫೋಟೋ ಹರಾಜಿಗಿಟ್ಟಾಕೆ.
ಜೆನ್ನಿಫರ್​ ತನ್ನ 20ನೇ ವಯಸ್ಸಿನಲ್ಲಿ ಪೆನಿಸಿಲ್ವೇನಿಯಾ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಎಲಾನ್​ ಮಸ್ಕ್ ಜತೆ ಅಫೇರ್ ಹೊಂದಿದ್ದಳು. ಪ್ರೀತಿಯಲ್ಲಿದ್ದ ಇಬ್ಬರೂ ಬಳಿಕ ಪ್ರತ್ಯೇಕಗೊಂಡಿದ್ದರು. ಆದರೆ ಈಗ 48ರ ವಯಸ್ಸಿನ ಜೆನ್ನಿಫರ್​ ತನ್ನ ಮಲಮಗನ ಶಿಕ್ಷಣದ ಖರ್ಚಿಗಾಗಿ ಮಸ್ಕ್​ ಜತೆಗಿನ ಅಂದಿನ ಸುಂದರಕ್ಷಣಗಳ ಫೋಟೋಗಳನ್ನು ಹರಾಜಿಗಿಟ್ಟಿದ್ದಾಳೆ.
ಈ ಫೋಟೋಗಳಲ್ಲಿ ಮಸ್ಕ್​ ಮತ್ತು ಜೆನ್ನಿಫರ್​ ಜತೆಗಿದ್ದಾರೆ. ಕಾಲೇಜು ಕ್ಯಾಂಪಸ್, ಕಂಪ್ಯೂಟರ್ ಮುಂದೆ, ಕೋಣೆಗಳಲ್ಲಿ ತಾವು ಒಟ್ಟಿಗಿದ್ದಾಗ ತೆಗೆದುಕೊಂಡಿದ್ದ ಫೋಟೋಗಳನ್ನು ಆರ್​ಆರ್ ಆಕ್ಷನ್ ವೆಬ್​ಸೈಟ್​ನಲ್ಲಿ ಹಂಚಿಕೊಂಡಿದ್ದು, ಬಹುತೇಕ ಫೋಟೋಗಳ ಹರಾಜು 100 ಡಾಲರ್​ನಿಂದ ಆರಂಭವಾಗಿದೆ. ಮಸ್ಕ್​ ಆಕೆಯ ಜನ್ಮದಿನದಂದು ನೀಡಿದ್ದ ಸಹಿ ಮಾಡಿದ್ದ ಬರ್ತ್​ಡೇ ಕಾರ್ಡ್​ ಸಹಿತ 18 ಫೋಟೋಗಳನ್ನು ಹರಾಜಿಗೆ ಇಡಲಾಗಿದೆ.
ತಮ್ಮ ಅಂದಿನ ದಿನಗಳು ಮಧುರವಾಗಿದ್ದವು, ಆದರೆ ಅಂಥ ಪ್ರೀತಿಪೂರ್ವಕವಾಗೇನೂ ಇರಲಿಲ್ಲ. 1994ರ ಸುಮಾರಿಗೆ ನಾವು ಹತ್ತಿರವಾಗಿದ್ದೆವು, 1995ರಲ್ಲಿ ಮಸ್ಕ್​ ಜೀವನದಲ್ಲಿ ಪಾಲೊ ಅಲ್ಟೊ ಆಗಮನದ ಬಳಿಕ ನಾವು ಬೇರೆಯಾದೆವು ಎಂದು ಜೆನ್ನಿಫರ್ ಹೇಳಿಕೊಂಡಿದ್ದಾರೆ. –ಏಜೆನ್ಸೀಸ್
‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nineteen =
Remember me
