ವಿಶಾಖಪಟ್ಟಣಂ:ನನ್ನಿಷ್ಟದ ಬಟ್ಟೆ ಧರಿಸಲು ಬಿಡುತ್ತಿಲ್ಲ ಎಂದು ಆರೋಪಿಸಿ ಬಾಲಕನೊಬ್ಬ ತನ್ನ ಮಲತಾಯಿ ವಿರುದ್ಧ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಎಲ್ಲೂರು ಜಿಲ್ಲೆಯ ಕೊತ್ತಪೇಟೆಯಲ್ಲಿ ನಡೆದಿದೆ.
ಬಾಲಕ ದಿನೇಶ್​ ಅವರ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ತಂದೆ ಮರು ಮದುವೆ ಆಗಿದ್ದು, ಅಂದಿನಿಂದ ದಿನೇಶ್​ಗೆ ಸಮಸ್ಯೆಗಳು ಆರಂಭವಾಗಿವೆಯಂತೆ. ಆಗಾಗ ದಿನೇಶ್​ ಅವರ ಮಲತಾಯಿ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.
ಇದನ್ನೂ ಓದಿ:ರಾಜ್ಯದಲ್ಲಿ ಕುಸಿದಿದ್ದ ತಾಪಮಾನ ದಿಢೀರ್ ಹೆಚ್ಚಳ; ಬಿಸಿಲಿನ ಬೇಗೆಗೆ ಜನ ಹೈರಾಣ
ಇತ್ತೀಚೆಗೆ ದಿನೇಶ್​ ಸ್ನೇಹಿತನ ಹುಟ್ಟುಹಬ್ಬ ಆಚರಣೆ ನಡೆಯಿತು. ಈ ಸಮಾರಂಭಕ್ಕೆ ತೆರಳಲು ದಿನೇಶ್​ ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಬಿಳಿ ಶರ್ಟ್​ ಕೊಡುವಂತೆ ಮಲತಾಯಿಯನ್ನು ಕೇಳಿದ್ದಾನೆ. ಆದರೆ, ಆಕೆ ಬಟ್ಟೆ ಕೊಡಲು ನಿರಾಕರಿಸಿದ್ದಲ್ಲದೆ, ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗದಂತೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಬೇಸರಗೊಂಡ ಬಾಲಕ ಬಟ್ಟೆ ಧರಿಸದೇ ಕೇವಲ ಟವೆಲ್​ನಲ್ಲೇ ಸೀದಾ ಎಲ್ಲೂರು ಟೌನ್​ ಪೊಲೀಸ್​ ಠಾಣೆಗೆ ತೆರಳಿ ಮಲತಾಯಿಯ ವಿರುದ್ಧ ದೂರು ನೀಡಿದ್ದಾನೆ.
ಬಾಲಕನ ಮಾತು ಕೇಳಿ ಪೊಲೀಸರೇ ಒಂದು ಕ್ಷಣ ಹುಬ್ಬೇರಿಸಿದರು. ಬಳಿಕ ಸರ್ಕಲ್​ ಇನ್ಸ್​ಪೆಕ್ಟರ್​ ಪಿ. ಚಂದ್ರಶೇಖರ್​ ಅವರು ತಕ್ಷಣ ಬಾಲಕನ ಪಾಲಕರನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ದಿನೇಶ್​ ಕಡೆಗಿನ ನಿಮ್ಮ ವರ್ತನೆಯನ್ನು ಬದಲಸಿಕೊಳ್ಳಿ ಎಂದು ಮಲತಾಯಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಾಗೇ ಪಾಲಕರ ಜೊತೆ ವಿನಯದಿಂದ ಮಾತನಾಡುವಂತೆ ದಿನೇಶ್​ಗೆ ಪೊಲೀಸರು ಹೇಳಿ ಕಳುಹಿಸಿದ್ದಾರೆ.(ಏಜೆನ್ಸೀಸ್​)
ಲೈಂಗಿಕ ಚರ್ಚೆಗಾಗಿ ಎಐ ವರ್ಷನ್​ ಬಿಡುಗಡೆ: ತಿಂಗಳಿಗೆ 48 ಕೋಟಿ ರೂ. ಸಂಪಾದಿಸುವ ನಿರೀಕ್ಷೆ!

ರಾಮ್​ಚರಣ್​ ಪತ್ನಿ ಜತೆ ಆಡಿ ಕಾರಲ್ಲಿ ಗೋವಾಗೆ ಹೋಗಿದ್ದೆ ಎಂದವನಿಗೆ ಬಿತ್ತು ಧರ್ಮದೇಟು!

3ನೇ ಪತ್ನಿಗಾಗಿ ನಿದ್ದೆ ಮಾಡುತ್ತಿದ್ದ ಮಗನ ಕತ್ತು ಹಿಸುಕಿ ಕೊಂದ ತಂದೆ; ಹತ್ಯೆ ವಿಡಿಯೋ ಹೆಂಡತಿಗೆ ಕಳುಹಿಸಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
