ಗುರುಗ್ರಾಮ್:ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ 2 ವಿಜೇತ ಎಲ್ವಿಶ್ ಯಾದವ್ ಅವರಿಗೆ ಗುರುಗ್ರಾಮ್ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ಗುರುಗ್ರಾಮ್ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಎಲ್ವಿಶ್ ಯಾದವ್ ಅವರನ್ನು ಮಾರ್ಚ್ 17 ರಂದು ಬಂಧಿಸಲಾಗಿತ್ತು.
ಎಲ್ಲರಿಗೂ ಗೊತ್ತಿರುವಂತೆ ಹಾವಿನ ವಿಷವನ್ನು ಖರೀದಿಸಿ ಮಾರಾಟ ಮಾಡಿದ ಪ್ರಕರಣದಲ್ಲಿ ಎಲ್ವಿಶ್ ನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಎಲ್ವಿಶ್ ಯಾದವ್ ಗೆ ಈ ಜಾಮೀನು ಸಿಕ್ಕಿದೆ.
ಶುಕ್ರವಾರ, ಎನ್‌ಡಿಪಿಎಸ್‌ನ ಕೆಳ ನ್ಯಾಯಾಲಯದಲ್ಲಿ ಅವರ ಜಾಮೀನು ವಿಚಾರಣೆ ನಡೆಯಿತು. ನೋಯ್ಡಾ ಪೊಲೀಸರು ಎಲ್ವಿಶ್ ಯಾದವ್ ಅವರನ್ನು ಎನ್‌ಡಿಪಿಎಸ್ ಕಾಯ್ದೆ ಮತ್ತು ವನ್ಯಜೀವಿ ರಕ್ಷಣೆಯ ಅಡಿಯಲ್ಲಿ ಜೈಲಿಗೆ ಕಳುಹಿಸಿದ್ದರು.
ಎಲ್ವಿಶ್ ಯಾದವ್ ಹಾವಿನ ವಿಷ ಕಳ್ಳಸಾಗಣೆ ಪ್ರಕರಣದಲ್ಲಿ ಗೌತಮ್ ಬುದ್ಧ ನಗರದ ಬಕ್ಸರ್ ಜೈಲಿನಲ್ಲಿ ಬಂಧಿಯಾಗಿದ್ದರು. ಮಾರ್ಚ್ 17 ರಂದು, ಎಲ್ವಿಶ್ ಮತ್ತು ಇತರ ಐವರನ್ನು ಪೊಲೀಸರು ಬಂಧಿಸಿದರು. ಇದೇ ವೇಳೆ ಪೊಲೀಸರು ಬ್ಯಾಂಕ್ವೆಟ್ ಹಾಲ್ ಮೇಲೆ ದಾಳಿ ನಡೆಸಿ 4 ಹಾವು ಮೋಡಿ ಮಾಡುವವರು ಸೇರಿದಂತೆ 5 ಜನರನ್ನು ಬಂಧಿಸಿ 9 ಹಾವುಗಳು ಮತ್ತು ಅವುಗಳ ವಿಷವನ್ನು ವಶಪಡಿಸಿಕೊಂಡಿದ್ದಾರೆ.
ಎಲ್ವಿಶ್ ಯಾದವ್ ಅವರು ರೇವ್ ಪಾರ್ಟಿಗಳಿಗೆ ಹಾವಿನ ವಿಷ ಸಾಗಿಸಿದ್ದರು ಮತ್ತು ಅವರು ವಿಡಿಯೋ ಚಿತ್ರೀಕರಣಕ್ಕಾಗಿ ಹಾವುಗಳನ್ನು ಬಳಸುತ್ತಾರೆ ಎಂಬ ಆರೋಪವಿದೆ.
ನಶೆಗೆ ಹಾವಿನ ವಿಷವನ್ನು ಆರ್ಡರ್ ಮಾಡಿದ್ದ ಎಲ್ವಿಶ್ ಯಾದವ್; ಕೊನೆಗೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ನಟ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − six =
Remember me
